ವಿರಾಟ್ ಕೊಹ್ಲಿ ಕುಡಿಯುವ ಒಂದು ಲೀಟರ್ ನೀರಿನ ಬೆಲೆ ೪೦೦೦ ರೂಪಾಯಿಗಳು. ಅಷ್ಟಕ್ಕೂ ಆ ನೀರಿನ ವಿಶೇಷತೆಗಳೇನು?

269

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಹಾಗು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಧಾಖಲೆ ಮುರಿಯಬಲ್ಲ ಏಕೈಕ ಆಟಗಾರ ಎಂದು ಎಲ್ಲರ ಅಭಿಪ್ರಾಯ. ಅದೇ ರೀತಿ ಅವರ ಆಟದಲ್ಲಿ ಪ್ರದರ್ಶನ ಕೂಡ ಅದೇ ರೀತಿ ಇದೆ. ಒಂಡೌನ್ ಆಟಗರಾಗಿ ಕಣಕ್ಕಿಳಿಯುವ ಕೊಹ್ಲಿ ಅವರ ಹೆಸರಲ್ಲಿ ಅನೇಕ ಧಾಖಲೆಗಳಿವೆ. ಅದೇ ರೀತಿ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಫಿಟ್ನೆಸ್.

ಫಿಟ್ನೆಸ್ ಫ್ರೀಕ್ ಅಂತಲೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ತಾನು ಮಾತ್ರವಲ್ಲದೆ ತಮ್ಮ ತಂಡದ ಆಟಗಾರರ ಫಿಟ್ನೆಸ್ ಕೂಡ ತನ್ನಂತೆಯೇ ಇರಬೇಕು ಅನ್ನುವ ದೃಷ್ಟಿಯಿಂದ ಅವರಿಗೂ ಫಿಟ್ ಆಗಿರುವಂತೆ ಸೂಚಿಸಿದ್ದಾರೆ. ಅದಕ್ಕೆ ಬಹುಷ್ಯ ತಂಡದ ಯುವ ಆಟಗಾರರು ಉತ್ತಮ ದೇಹ ಬೆಳೆಸಿಕೊಂಡು ಫಿಟ್ ಆಗಿದ್ದರೆ. ಇಂತಹ ಫಿಟ್ನೆಸ್ ಕಾಯ್ದುಕೊಳ್ಳಲು ಅನೇಕ ಕಸರತ್ತು ಹಾಗು ಆಹಾರದ ಮೇಲೆ ಬದಲಾವಣೆ ಮಾಡಬೇಕಾಗುತ್ತದೆ. ಪ್ರತಿ ದಿನ ಮೂರೂ ನಾಲ್ಕು ಗಂಟೆಗಳ ಕಾಲ ಜಿಮ್ ಅಲ್ಲಿ ಬೆವರು ಹರಿಸ ಬೇಕಾಗುತ್ತದೆ. ವಿರಾಟ್ ಕೊಹ್ಲಿ ಇದಕ್ಕೆ ಏನೇನು ಮಾಡುತ್ತಾರೆ? ಯಾವೆಲ್ಲ ಆಹಾರ ಪದ್ಧತಿ ಹೊಂದಿದ್ದಾರೆ ನಿಮಗೆ ಗೊತ್ತೇ?

ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಗಾಗಿ ಸಾಮಾನ್ಯ ನೀರು ಕುಡಿಯುವುದಿಲ್ಲ, ಬದಲಾಗಿ ಕಪ್ಪು ನೀರು ಬ್ಲಾಕ್ ವಾಟರ್ ಕುಡಿಯುತ್ತಾರೆ. ಇದರ ಬೆಲೆ ಪ್ರತಿ ಲೀಟರ್ ಗೆ ೩೦೦೦-೪೦೦೦ ರೂಪಾಯಿವರೆಗೆ ಇದೆ. ಈ ನೀರು ದೇಹವನ್ನು ಯಾವಾಗಲು ಹೈಡ್ರಾಟ್ ಆಗಿರುವಂತೆ ನೋಡಿಕೊಳ್ಳುತ್ತದೆ, ಅದೇ ರೀತಿ ಇದರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಅಧಿಕವಾಗಿರುತ್ತದೆ. ಈ ನೀರು ಕುಡಿಯುವದರಿಂದ ಚರ್ಮದ ಅರೋಗ್ಯ ಕೂಡ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.

Leave A Reply

Your email address will not be published.