ವಿರಾಟ್ ಕೊಹ್ಲಿ ನೀರಸ ಪ್ರದರ್ಶನ ನೋಡಿ ಐಪಿಎಲ್ ನಂತರ ಕ್ರಿಕೆಟ್ ಸ್ವಲ್ಪ ಸಮಯ ಬಿಡುವಂತೆ ಸಲಹೆ ನೀಡಿದ ಈ ಹಿರಿಯ ಆಟಗಾರ.

509

ಭಾರತದ ಲೆಜೆಂಡರಿ ಆಟಗಾರ ಬ್ಯಾಟ್ಸಮನ್, ನಾಯಕ ಇತ್ತೀಚಿನ ದಿನಗಳಲ್ಲಿ ಐಪಿಎಲ್ ೨೦೨೨ ರಲ್ಲಿ ಯಾವುದೇ ಉತ್ತಮ ಆಟವಾಡಿಲ್ಲ. ನಿರಂತರ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಐಪಿಎಲ್ ೨೦೨೨ ರಲ್ಲಿ ೩೩ ವರ್ಷದ ವಿರಾಟ್ ಕೊಹ್ಲಿ ೧೨ ಪಂದ್ಯಗಳಲ್ಲಿ ೧೯.೬೪ ರ ಸರಾಸರಿ ಮತ್ತು ೧೧೧.೩೪ ರ ಸ್ಟ್ರೈಕ್ ರೇಟ್ ಅಲ್ಲಿ ಕೇವಲ ೨೧೬ ರನ್ ಗಳಿಸಲಷ್ಟೇ ಸಾಧ್ಯವಾಗಿದೆ. ಈ ಆವೃತ್ತಿಯಲ್ಲಿ ಸೊನ್ನೆ ಸುತ್ತಿ ಒಟ್ಟಾರೆ ಮೂರೂ ಬಾರಿ ಔಟ್ ಆಗಿ ಪೆವಿಲಿಯನ್ ತಲುಪಿದ್ದಾರೆ.

ವಿರಾಟ್ ಕೊಹ್ಲಿಯ ಪ್ರಸ್ತುತ ಫಾರ್ಮ್ ಅನ್ನು ಪರಿಗಣಿಸಿ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅವರು ಐಪಿಎಲ್ ೨೦೨೨ ರ ನಂತರ ಕ್ರಿಕೆಟ್ ಆಟವನ್ನು ಬಿಡುವಂತೆ ವಿರಾಟ್ ಕೊಹ್ಲಿ ಗೆ ಸಲಹೆ ನೀಡಿದ್ದಾರೆ. ವಿರಾಟ್ ಕೆಲವು ದಿನಗಳ ಕಾಲ ಕ್ರಿಕೆಟ್ ಆಡುವುದನ್ನು ಬಿಡಬೇಕು ಎಂದು ವಾಸಿಂ ಜಾಫರ್ ಸಲಹೆ ನೀಡಿದ್ದಾರೆ. ವಾಸಿಂ ಜಾಫರ್ ಅವರ ಈ ಮಾತು ಹೈದರಾಬಾದ್ ನಡುವಿನ ಪಂದ್ಯದಲ್ಲಿ ಸೊನ್ನೆ ಗೆ ಔಟ್ ಆದ ನಂತರ ಬಂದಿದ್ದು ವಿರಾಟ್ ಕೊಹ್ಲಿ ಗೆ ವಿಶ್ರಾಂತಿ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಒಂದು ಖಾಸಗಿ ಟಿವಿ ಜೊತೆ ಮಾತಾಡುತ್ತ ವಾಸಿಂ ಜಾಫರ್ ಅವರು ವಿರಾಟ್ ಕೊಹ್ಲಿ ಅವರು ಕಳೆದ ಕೆಲ ಪಂದ್ಯಗಳಲ್ಲಿ ಔಟಾದ ರೀತಿ ನೋಡಿದರೆ ಕೊಹ್ಲಿ ಹೆಚ್ಚು ಕ್ರಿಕೆಟ್ ಆಡುವುದರಿಂದ ದಣಿದಿದ್ದಾರೆ ಎಂದು ಕಾಣುತ್ತದೆ. ಟೆಸ್ಟ್ ಹಾಗು ಟಿ-೨೦ ನಾಯಕತ್ವದಿಂದ ರಾಜೀನಾಮೆ ನೀಡಿದ ಬಳಿಕ ಏಕದಿನ ಪಂದ್ಯದಲ್ಲೂ ಕೆಳಗಿಳಿಯುವಂತೆ ಕೇಳಿಕೊಂಡಿದ್ದರಿಂದ ಕಳೆದ ಆರು ತಿಂಗಳಿಂದ ಅವರಿಗೆ ತುಂಬಾ ಕಷ್ಟಕರವಾಗಿರಬೇಕು ಎಂದು ಹೇಳಿದ್ದಾರೆ ಜಾಫರ್.

ಜಾಫರ್ ಪ್ರಕಾರ ಎಲ್ಲ ವಿಷಯಗಳ ನಂತರನು ಕೂಡ ವಿರಾಟ್ ಕೊಹ್ಲಿ ಐಪಿಎಲ್ ಅಲ್ಲಿ ಆಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಪರ ಹೆಚ್ಚಾಗಿ ರನ್ ಕೂಡ ಗಳಿಸಲು ಸಾಧ್ಯವಾಗುತ್ತಿಲ್ಲ. ಇದು ಖಂಡಿತವಾಗಿಯೂ ಕೊಹ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಐಪಿಎಲ್ ೨೦೨೨ ರ ನಂತರ ವಿರಾಟ್ ನಾಲ್ಕು ಅಥವಾ ಆರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಂಡರೆ ಮಾನಸಿಕವಾಗಿ ಉಲ್ಲಾಸದಿಂದ ಹಿಂತಿರುಗಬಹದು ಎಂದು ನಾನು ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ. ಐಪಿಎಲ್ ನಂತರ ಇಂಗ್ಲೆಂಡ್ ಹಾಗು ದಕ್ಷಿಣ ಆಫ್ರಿಕಾ ನಡುವಿನ ಸರಣಿಗೆ ವಿರಾಮ ಪಡೆದುಕೊಂಡರೆ ಏಷ್ಯಾ ಕಪ್ ಸಮಯದಲ್ಲಿ ಆಡಲು ಕೊಹ್ಲಿ ಹಿಂತಿರುಗಬಹದು ಎನ್ನುವುದು ಜಾಫರ್ ಅವರ ಸಲಹೆ.

Leave A Reply

Your email address will not be published.