ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿ ಇಲ್ಲದೆ ಇದ್ದಾಗ ನಾಯಕ ರೋಹಿತ್ ಹಾಗೂ ದ್ರಾವಿಡ್ ಹೇಗೆ ನಡೆದುಕೊಂಡಿದ್ದರು ಗೊತ್ತೇ?? ಎಲ್ಲವನ್ನು ಹೊರಹಾಕಿದ ಕೊಹ್ಲಿ.
ಭಾರತ ಕ್ರಿಕೆಟ್ ತಂಡದ್ ಮಾಜಿ ನಾಯಕ ವಿರಾಟ್ ಕೋಹ್ಲಿ ಅವರು ಈಗ ಫಾರ್ಮ್ ಗೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ಪಂದ್ಯಗಳಲ್ಲಿ ವಿರಾಟ್ ಅವರು ಉತ್ತಮವಾದ ಪ್ರದರ್ಶನ ನೀಡಿದರು, ಅಫ್ಗಾನಿಸ್ತಾನ್ ವಿರುದ್ಧ ಸೆಂಚುರಿ ಗಳಿಸುವ ಮೂಲಕ ಫಾರ್ಮ್ ಗೆ ಬಂದಿರುವ ಸಂದೇಶ ನೀಡಿದರು. 61 ಬಾಲ್ ಗಳಲ್ಲಿ ಬೌಂಡರಿ ಸಿಕ್ಸರ್ ಗಳ ಜೊತೆಗೆ, ಔಟ್ ಆಗದೆಯೇ 122 ರನ್ ಭಾರಿಸಿದರು ವಿರಾಟ್. ಈ ಮೂಲಕ ಏಷ್ಯಾಕಪ್ ನಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರೋಹಿತ್ ಶರ್ಮಾ ಅವರ ಸ್ಕೋರ್ ಅನ್ನು ಬೀಟ್ ಮಾಡಿದರು.
ಕೋಹ್ಲಿ ಅವರ ಬ್ಯಾಟ್ ಇಂದ 71ನೇ ಸೆಂಚುರಿ ಬಂದಿದ್ದು, ಅಭಿಮಾನಿಗಳು, ಮ್ಯಾನೇಜ್ಮೆಂಟ್ ಎಲ್ಲರಿಗೂ ಸಹ ಬಹಳ ಸಂತೋಷವಾಗಿತ್ತು, ಮ್ಯಾಚ್ ಮುಗಿದ ಬಳಿಕ, ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ವಿರಾಟ್ ಕೋಹ್ಲಿ ಅವರೊಡನೆ ಸಂದರ್ಶನದಲ್ಲಿ ಮಾತನಾಡಿದ್ದು, ಮ್ಯಾನೇಜ್ಮೆಂಟ್, ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ತಾವು ಕಳಪೆ ಫಾರ್ಮ್ ನಲ್ಲಿದ್ದಾಗ ಹೇಗೆ ನಡೆದುಕೊಂಡರು ಎಂದು ಹೇಳಿದ್ದಾರೆ. ಮೊದಲಿಗೆ ರೋಹಿತ್ ಅವರು ಮಾತನಾಡಿ, ವಿರಾಟ್ ಅವರಿಗೆ ಶುಭಾಶಯ ತಿಳಿಸಿ, ಅವರ ಆಟದ ವೈಖರಿಯನ್ನು ಹೊಗಳಿದ್ದಾರೆ. ಬಳಿಕ ವಿರಾಟ್ ಕೋಹ್ಲಿ ಅವರು ಮಾತನಾಡಿ..
“ನಾನು ಬ್ಯಾಟ್ ಇಂದ ಬಹಳ ಸಮಯ ದೂರ ಇದ್ದದ್ದು ಕೆರಿಯರ್ ನಲ್ಲಿ ಇದೇ ಮೊದಲ ಸಲ. ನನ್ನ ಮನಸ್ಸಿನಲ್ಲಿ ಇದ್ದಿದ್ದು ಒಂದೇ, ನನ್ನನ್ನ ನಾನು ಇಂಪ್ರೂವ್ ಮಾಡಿಕೊಳ್ಳಬೇಕು, ತಂಡಕ್ಕೆ ಸಹಾಯವಾಗಬೇಕು. ನನ್ನ ಈ ಸಮಯದಲ್ಲಿ ಮ್ಯಾನೇಜ್ಮೆಂಟ್, ನೀವು,.ಕೋಚ್ ಎಲ್ಲರೂ ಸಹ ನನ್ನನ್ನು ಅರ್ಥ ಮಾಡಿಕೊಂಡು, ಅವರು ಬ್ಯಾಟ್ ಮಾಡಲಿ ಎಂದು ನನಗೆ ಅವಕಾಶ ಕೊಟ್ರಿ, ಆ ಸಮಯದಲ್ಲಿ ಅದು ಬಹಳ ಮುಖ್ಯವಾಗಿತ್ತು…” ಎಂದು ಟೀಮ್ ಬಗ್ಗೆ ಹೇಳಿದ್ದಾರೆ. ಹಾಗೆಯೇ, ನಾನು ಆಡುವ ಶೈಲಿ ಬೇರೆ, ನಾನು ಬಿಗ್ ಹಿಟ್ಸ್ ಸಿಕ್ಸ್ ಹೊಡೆಯಬೇಕು ಎಂದು ಕಣಕ್ಕೆ ಇಳಿಯುವುದಿಲ್ಲ. ಪರಿಸ್ಥಿತಿಗೆ ತಕ್ಕ ಹಾಗೆ ಆಡುತ್ತೇನೆ, ಈ ಸಾರಿ ಗ್ಯಾಪ್ ಗಳನ್ನು ಫಿಲ್ ಮಾಡುತ್ತೇನೆ, ಬೌಂಡರಿ ಗಳನ್ನು ಹೊಡೆಯುತ್ತೇನೆ ಎಂದುಕೊಂಡೆ ಬಂದೆ. ನನ್ನಿಂದ ಯಾರು ಸೆಂಚುರಿ ನಿರೀಕ್ಷೆ ಮಾಡಿರಲಿಲ್ಲ..ಎಂದಿದ್ದಾರೆ ವಿರಾಟ್. ಹಾಗು 71ನೇ ಸೆಂಚುರಿ ಬಗ್ಗೆ ಬಹಳ ಸಂತೋಷಪಟ್ಟಿದ್ದಾರೆ.