ವಿರಾಟ್ ಕೊಹ್ಲಿ ಫುಲ್ ಗರಂ: RCB RCB ಎಂದವರಿಗೆ ಖಡಕ್ ಆಗಿಯೇ ಉತ್ತರ ಕೊಟ್ಟ ಕೊಹ್ಲಿ. ಯಾಕೆ ಗೊತ್ತೇ??
ಆರ್.ಸಿ.ಬಿ ತಂಡ ಹಾಗು ವಿರಾಟ್ ಕೋಹ್ಲಿ ಅವರಿಗೆ ಅವಿನಾಭಾವ ಸಂಬಂಧ ಇದೆ. ಐಪಿಎಲ್ ಶುರುವಾದ ಸಮಯದಿಂದಲೂ ವಿರಾಟ್ ಕೋಹ್ಲಿ ಅವರು ಆರ್.ಸಿ.ಬಿ ತಂಡದ ಪರವಾಗಿ ಮಾತ್ರ ಆಡಿದ್ದಾರೆ. ಆರ್.ಸಿ.ಬಿ ಅಭಿಮಾನಿಗಳಿಗೂ ವಿರಾಟ್ ಕೋಹ್ಲಿ ಅವರು ಅಂದರೆ ವಿಶೇಷವಾದ ಪ್ರೀತಿ ಮತ್ತು ವಿಶ್ವಾಸ ಇದೆ. ಐಪಿಎಲ್ ಶುರುವಾದರೆ, ಆರ್.ಸಿ.ಬಿ ಅಭಿಮಾನಿಗಳು ತಂಡಕ್ಕೆ ಹಾಗೂ ವಿರಾಟ್ ಅವರಿಗೆ ನೀಡುವ ಬೆಂಬಲ ಎಂಥದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೇರೆ ತಂಡದ ಮ್ಯಾಚ್ ಗಳು ನಡೆಯುವಾಗ ಆರ್.ಸಿ.ಬಿ ಆರ್.ಸಿ.ಬಿ ಎಂದು ಕೂಗುವುದನ್ನು ನೋಡಿದ್ದೇವೆ.
ಇಂಥದ್ದೇ ಒಂದು ಘಟನೆ ಈಗ ನಡೆದಿದೆ. ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವೆ ಎರಡನೇ ಟಿ20 ಸರಣಿ ಪಂದ್ಯ ನಾಗ್ಪುರದಲ್ಲಿ ನಡೆಯಿತು. ಈ ಪಂದ್ಯವನ್ನು ಭಾರತ ತಂಡ ಗೆದ್ದಿತು, ಪಂದ್ಯದ ಬಳಿಕ ಗ್ರೀನ್ ರೂಮ್ ನಲ್ಲಿ ಅಭಿಮಾನಿಗಳು ವಿರಾಟ್ ಕೋಹ್ಲಿ ಅವರನ್ನು ನೋಡಿ ಆರ್.ಸಿ.ಬಿ ಆರ್.ಸಿ.ಬಿ ಎಂದು ಜೋರಾಗಿ ಕೂಗಲು ಶುರು ಮಾಡಿದರು. ಇದನ್ನು ನೋಡಿದ ವಿರಾಟ್ ಕೋಹ್ಲಿ ಅವರು ಕೋಪಗೊಂಡ ಹಾಗೆ ಅಭಿಮಾನಿಗಳ ಕಡೆ ನೋಡಿ, ತಮ್ಮ ಜೆರ್ಸಿ ಮೆಲಿರುವ ಸಿಂಬಲ್ ಮೇಲೆ ಕೈ ಇಟ್ಟು ತೋರಿಸಿದರು. ಪ್ರಸ್ತುತ ನಾನು ಆಡುತ್ತಿರುವುದು ಭಾರತ ತಂಡಕ್ಕೆ ಎಂದು ಅಭಿಮಾನಿಗಳಿಗೆ ಮನವರಿಕೆ ಮಾಡಿದರು.
ವಿರಾಟ್ ಅವರ ಈ ಸಂದೇಶ ಬಂದ ಬಳಿಕ ಅಭಿಮಾನಿಗಳು ಸಹ ಆರ್.ಸಿ.ಬಿ ಎಂದು ಕೂಗುವುದನ್ನು ನಿಲ್ಲಿಸಿದರು. ವಿರಾಟ್ ಅವರೊಡನೆ ಆರ್.ಸಿ.ಬಿ ತಂಡದ ಮತ್ತೊಬ್ಬ ಆಟಗಾರ ಹರ್ಷಲ್ ಪಟೇಲ್ ಅವರು ಸಹ ಅಲ್ಲಿಯೇ ಇದ್ದರು. ಅವರು ಕೂಡ ಅಭಿಮಾನಿಗಳು ಕಿರುಚುವುದನ್ನು ನೋಡಿ ನಗುತ್ತಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆರ್.ಸಿ.ಬಿ ಅಭಿಮಾನಿಗಳು ಎಲ್ಲಿಯೇ ಹೋದರು, ತಮ್ಮ ಮೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡುವುದನ್ನು ನಿಲ್ಲಿಸುವುದಿಲ್ಲ.