ವಿರಾಟ್ ಕೊಹ್ಲಿ ಸಮಯದಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ಕೊಹ್ಲಿ ಅಷ್ಟು ಪ್ರಸಿದ್ದಿ ಪಡೆಯದೇ ಇರುವ ಈ ಆಟಗಾರರು ಇಂದೇನು ಮಾಡುತ್ತಿದ್ದಾರೆ?

830

ವಿರಾಟ್ ಕೊಹ್ಲಿ ಅವರ ಪರಿಚಯ ನೀಡುವ ಅಗತ್ಯ ಭಾರತದಲ್ಲಿಲ್ಲ. ಪ್ರತಿ ಕ್ರಿಕೆಟ್ ಅಭಿಮಾನಿಯ ಮನೆಮಾತಾಗಿರುವ ಇವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅನೇಕ ದಾಖಲೆ ಮಾಡಿದ್ದಾರೆ. ೨೦೦೮ ರಲ್ಲಿ ಭಾರತ ಅಂಡರ್ ೧೯ ಕ್ರಿಕೆಟ್ ವಿಶ್ವಕಪ್ ಮುನ್ನಡೆಸಿದರು ಹಾಗೇನೇ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕರೆನಿಸಿದರು. ಅನಂತರ RCB ತಂಡದಲ್ಲಿ ಎಲ್ಲ ಆವೃತ್ತಿಯಲ್ಲಿ ನಾಯಕನಾಗಿದ್ದು ಪ್ರಸ್ತುತ ಭಾರತ ತಂಡದಲ್ಲಿ ಪರ್ಮನೆಂಟ್ ಸ್ಥಾನ ಪಡೆದಿರುವ ಕೊಹ್ಲಿ ತಮ್ಮ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾರೆ. ಆದರೆ ಇವರ ಸಮಯದಲ್ಲೇ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಕೆಲ ಆಟಗಾರರು ಇಂದು ಇಂತಹ ಯಶಸ್ಸು ಗಳಿಸದೆ ಪರದಾಡುತ್ತಿದ್ದಾರೆ.

೧. ಮನ್ಪ್ರೀತ್ ಗೋನಿ- ಭಾರತ ಅಂತಾರಾಷ್ಟ್ರೀಯ ತಂಡಕ್ಕೆ ಶ್ರೀಶಾಂತ್ ಬದಲಿಗೆ ಮನ್ಪ್ರೀತ್ ಗೋನಿ ಅವರನ್ನು ಆಯ್ಕೆ ಮಾಡಲಾಯಿತು. ಹೀಗೆ ಪಂಜಾಬ್ ನ ವೇಗದ ಬೌಲರ್ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ೧೬ ಪಂದ್ಯಗಳಿಂದ ೧೭ ವಿಕೆಟ್ ಪಡೆದು ಯಶಸ್ವೀ ಯಾದರು. ಆದರೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೇವಲ ಎರಡು ಏಕದಿನ ಪಂದ್ಯವಾಡಿ ೬ ಕಿಂತ ಕಡಿಮೆ ಎಕಾನಮಿ ಮೂಲಕ ೨ ವಿಕೆಟ್ ಪಡೆದು ಆಮೇಲೆ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ.

೨. ಸುಬ್ರಮಣ್ಯ ಬದರಿನಾಥ್- ಭಾರತೀಯ ಕ್ರಿಕೆಟ್ ತಂಡವು ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ಪ್ರತಿಭಾನ್ವಿತ ಬ್ಯಾಟ್ಸಮನ್ ಗಳನ್ನೂ ನೀಡಿದೆ. ತಮಿಳುನಾಡಿನ ಕ್ರಿಕೆಟಿಗ ಎಸ್ ಬದರಿನಾಥ್ ಕೂಡ ಒಬ್ಬರು. ಅದ್ಬುತ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಬದ್ರಿನಾಥ್ ದೇಶಿಯ ಪಂದ್ಯಗಳಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದರು. ೨೦೦೮ ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ತಂಡಕ್ಕೆ ಖರೀದಿ ಮಾಡಿತ್ತು. ಅದೇ ವರ್ಷ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆ ಆದರೂ ಕೂಡ ೭ ಏಕದಿನ ಪಂದ್ಯಗಳಲ್ಲಿ ೧೫.೮ ರ ಸರಾಸರಿಯಲ್ಲಿ ಕೇವಲ ೭೯ ರನ್ ಮಾಡುವ ಮೂಲಕ ಕಳಪೆ ಪ್ರದರ್ಶನದಿಂದ ತಂಡದಿಂದಲೇ ಹೊರಗೆ ಹೋದರು.

೩. ಮನೋಜ್ ತಿವಾರಿ- ಮನೋಜ್ ತಿವಾರಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಪ್ರತಿಭಾವಂತ ಬ್ಯಾಟ್ಸಮನ್ ಆಗಿದ್ದವರು. ದೇಶಿಯ ಕ್ರಿಕೆಟ್ ನಲ್ಲಿ ನೀಡಿದ ಅದ್ಬುತ ಆಟದಿಂದಾಗಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಯಿತು. ೨೦೧೦ ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದಿಂದ ತಮ್ಮ ಚೊಚ್ಚಲ ಏಕದಿನ ಪಂದ್ಯ ಆಡಿದರು. ಅನಂತರ ವೆಸ್ಟ್ ಇಂಡೀಸ್ ಜೊತೆಗಿನ ಪಂದ್ಯದಲ್ಲಿ ಶತಕ ದಾಖಲಿಸಿದರು ಕೂಡ ತಂಡದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ೨೦೧೫ ರಲ್ಲಿ ಜಿಂಬಾಬ್ವೆ ಜೊತೆ ನಡೆಸಿ ನಿವೃತ್ತಿ ಹೊಂದಿದ್ದಾರೆ. ಇದೀಗ ಐಪಿಎಲ್ ಹಾಗು ದೇಶಿಯ ಕ್ರಿಕೆಟ್ ಅಲ್ಲಿ ಆಡುತ್ತಿದ್ದಾರೆ.

Leave A Reply

Your email address will not be published.