ವಿರಾಟ್ ಕೊಹ್ಲಿ ಹಾಗು ರೋಹಿತ್ ಶರ್ಮ ಇಲ್ಲದೇನೆ ಸಚಿನ್ ತೆಂಡೂಲ್ಕರ್ ತಮ್ಮ ಶ್ರೇಷ್ಠ IPL ತಂಡ ಕಟ್ಟಿದ್ದಾರೆ. ಇದರಲ್ಲಿ RCB ಇಂದ ಇರುವುದು ಒಬ್ಬನೇ ಆಟಗಾರ.

765

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿದೆ. ಈಗಾಗಲೇ ಗುಜರಾತ್ ತಂಡ ತಮ್ಮ ಚೊಚ್ಚಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ. ಹಾಗೇನೇ ರನ್ನರ್ ಸ್ಥಾನದಲ್ಲಿ ರಾಜಸ್ತಾನ ವಿದ್ದರೆ ಈ ಬಾರಿಯೂ ಕಪ್ ಗೆಲ್ಲದೇ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದೂ ಬೆಂಗಳೂರು ತಂಡ. ಇನ್ನು ರಾಹುಲ್ ನಾಯಕತ್ವದ ಲೂಕ್ನೋ ತಂಡ ಕೂಡ ಉತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಈ ಐಪಿಎಲ್ ಮುಗಿದ ನಂತರ ಕ್ರಿಕೆಟ್ ದೇವರು ಅಂತಾನೆ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್ ತಮ್ಮ ಶ್ರೇಷ್ಠ ಐಪಿಎಲ್ ತಂಡ ರಚನೆ ಮಾಡಿದ್ದಾರೆ.

ತಮ್ಮ ಅದಿಕ್ರುತ ಯೌಟ್ಯೂಬ್ ಚಾನೆಲ್ ಅಲ್ಲಿ ತಮ್ಮ ತಂಡವನ್ನು ಹಂಚಿಕೊಂಡಿದ್ದಾರೆ. ಈ ಐಪಿಎಲ್ ತಂಡದಲ್ಲಿ ಭಾರತದ ಏಳು ಆಟಗಾರರು ಇದ್ದಾರೆ, ಹಾಗೇನೇ ನಾಲ್ಕು ವಿದೇಶಿ ಆಟಗಾರರನ್ನು ಒಳಗೊಂಡ ಹನ್ನೊಂದು ಮಂದಿಯ ಪ್ಲೇಯಿಂಗ್ ೧೧ ಟೀಮ್ ರಚಿಸಿದ್ದಾರೆ. ಇದರಲ್ಲಿ ಈ ಬಾರಿಯ ಟಾಪ್ ರನ್ ಸ್ಕೋರರ್ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಆರಂಭಿಕ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಶಿಖರ್ ಧವನ್ ಅವರನ್ನು ಕೂಡ ಆಯ್ಕೆ ಮಾಡಿದ್ದಾರೆ. ಆರಂಭಿಕ ಆಟಕ್ಕೆ ಎಡಗೈ ಹಾಗು ಬಲಗೈ ಸಂಯೋಜನೆ ಮಾಡಿದ್ದಾರೆ ಸಚಿನ್. ಇನ್ನು ಶಿಖರ್ ಧವನ್ ಅವರು ಸ್ಟ್ರೈಕ್ ರೊಟೇಟ್ ಉತ್ತಮವಾಗಿ ಮಾಡುತ್ತಾರೆ ಹಾಗಾಗಿ ಅವರನ್ನು ಆಯ್ಕೆ ಮಾಡಿದ್ದಾರೆ.

ಮೂರನೇ ಹಾಗು ನಾಲ್ಕನೇ ಕ್ರಮಾಂಕದಲ್ಲಿ ಲೂಕ್ನೋ ತಂಡದ ನಾಯಕ ಕೆ ಎಲ್ ರಾಹುಲ್ ಹಾಗು ಗುಜರಾತ್ ತಂಡದ ನಾಯಕ ಹಾರ್ದಿಕ್ ಪಂದ್ಯ ಇದ್ದಾರೆ. ರಾಹುಲ್ ಈ ಆವೃತ್ತಿಯಲ್ಲಿ 616 ರನ್ ಗಳಿಸಿದ್ದರೆ. ಹಾಗೇನೇ ಹಾರ್ದಿಕ್ ಪಂದ್ಯ 487 ರನ್ ಗಳಿಸಿದ್ದಾರೆ. ಇನ್ನು ಐದನೇ ಕ್ರಮಾಂಕಕ್ಕೆ ಡೇವಿಡ್ ಮಿಲ್ಲರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಸ್ಥಾನಕ್ಕೆ ಹಲವು ಸ್ಪರ್ಧೆಗಳಿವೆ ಆದರೆ ಈ ಎಡಗೈ ಬ್ಯಾಟ್ಸಮನ್ ಹೆಚ್ಚು ಸ್ಥಿರ ಹಾಗು ಕೆಲವು ನಿರ್ಣಾಯಕ ಪಂದ್ಯಗಳನ್ನು ಅದ್ದಿದ್ದಾರೆ ಆದರಿಂದ ಇವರನ್ನು ಆಯ್ಕೆ ಮಾಡುತ್ತಿದ್ದೇನೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಆರನೇ ಸ್ಥಾನಕ್ಕೆ ಲಿಯಮ್ ಲಿವಿಂಗ್ಸ್ಟೋನ್ ಹಾಗು ಏಳನೇ ಕ್ರಮಾಂಕಕ್ಕೆ RCB ಇಂದ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರೆ. ದಿನೇಶ್ ಕಾರ್ತಿಕ್ ಬೆಂಗಳೂರು ಪರ ಆಡಿದ ಆಟಗಳಲ್ಲಿ ಸ್ಟ್ರೈಕ್ ಇದ್ದಿದ್ದು ೧೮೮ ಹಾಗೇನೇ ಗಳಿಸಿದ ರನ್ ೩೩೦. ಹಲವು ಪಂದ್ಯಗಳಲ್ಲಿ ಮ್ಯಾಚ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗಕ್ಕೆ ಜಸ್ಪ್ರೀತ್ ಬುಮ್ರಾ ಹಾಗು ಶಮಿ ಅವರನ್ನ ಹಾಕಿದ್ದಾರೆ ಸಚಿನ್ ತೆಂಡೂಲ್ಕರ್. ಇನ್ನು ಸ್ಪಿನ್ ವಿಭಾಗಕ್ಕೆ ರಶೀದ್ ಖಾನ್ ಹಾಗು ಯಜ್ವೇಂದ್ರ ಚಾಹಲ್ ಆಯ್ಕೆ ಆಗಿದ್ದಾರೆ. ಇಬ್ಬರು ಕೂಡ ಉತ್ತಮ ಸ್ಪಿನ್ ಚಾಣಕ್ಯರಾಗಿದ್ದರಿಂದ ಇವರಿಬ್ಬರಿಗೆ ಸಚಿನ್ ತೆಂಡೂಲ್ಕರ್ ಅವರ ಡ್ರೀಮ್ ಪ್ಲೇಯಿಂಗ್ ೧೧ ಅಲ್ಲಿ ಸ್ಥಾನ ಗಳಿಸಿದ್ದಾರೆ.

Leave A Reply

Your email address will not be published.