ವಿರಾಟ್, ರೋಹಿತ್ ಅಥವಾ ರಾಹುಲ್? ಕಳೆದ ಎರಡು ವರ್ಷಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ್ಯಾರು ಗೊತ್ತೇ? ಅಚ್ಚರಿಯ ವಿಷಯ.

292

ಭಾರತದ ರನ್ ಮಷೀನ್ ಹಾಗೇನೇ ಮಾಜಿ ನಾಯಕ ವಿರಾಟ್ ಕೊಹ್ಲಿ ಅನೇಕ ದಿನಗಳಿಂದ ಕಳಪೆ ಫಾರ್ಮ್ ಅಲ್ಲಿ ಇದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೊಹಿ ಕಡೆಯಿಂದ ಯಾವುದೇ ಫಾರ್ಮ್ಯಾಟ್ ಅಲ್ಲಿ ಶತಕ ಬರಲಿಲ್ಲ. ಇದೆ ಕಾರಣಕ್ಕಾಗಿ ಸುದ್ದಿಯಲ್ಲಿದ್ದವರು ವಿರಾಟ್ ಕೊಹ್ಲಿ. ಆದರೆ ಇದರ ಹೊರತಾಗಿಯೂ ತಂಡದಲ್ಲಿ ಸ್ಥಾನ ಪಡೆದದ್ದು ಅಲ್ಲದೆ ಪ್ಲೇಯಿಂಗ್ ೧೧ ಅಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಇವರು ಕಳೆದ ಎರಡು ವರ್ಷಗಳಲ್ಲಿ ಮಾಡಿದ ರನ್ ಗಳೆಷ್ಟು? ಎರಡು ವರ್ಷಗಳಲ್ಲಿ ಇವರು ಭಾರತದ ಪರ ಎಲ್ಲ ಮಾದರಿಯ ಕ್ರಿಕೆಟ್ ಅಲಿ ಕೂಡ ಅತಿ ಹೆಚ್ಚು ರನ್ ಗಳಿಸದವರಾಗಿದ್ದಾರೆ.

೨೦೨೦ ರಿಂದ ವಿರಾಟ್ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ (ಟೆಸ್ಟ್,ಟಿ-೨೦ ಹಾಗು ಏಕದಿನ) ಆಡಿದ್ದಾರೆ. ಇವರು ಆಡಿದ ಒಟ್ಟು ಪಂದ್ಯಗಳು ೫೭. ಈ ಪಂದ್ಯಗಳಲ್ಲಿ ಒಟ್ಟು 89 ಇನ್ನಿಂಗ್ಸ್ ಆಡಿದ್ದಾರೆ. ಇವರ ಬ್ಯಾಟ್ ಇಂದ ಬಂದಿದ್ದು 2206 ರನ್ ಗಳು. ಕಳೆದ ಎರಡು ವರ್ಷಗಳ ಅಂಕಿ ಅಂಶ ನೋಡಿದರೆ ಇದು ಇತರೆ ಬ್ಯಾಟ್ಸಮನ್ ಗಳಿಗಿಂತ ಉತ್ತಮವಾಗಿದೆ. ಆದರೆ ಇವರ ಸರಾಸರಿ ಮಾತ್ರ ಇರುವುದು 35 ರ ಆಸುಪಾಸು. ಇದು ಇವರ ಉತ್ತಮ ಪ್ರದರ್ಶನ ಅಂತಾನೂ ಹೇಳಕ್ಕಾಗಲ್ಲ. ಅದೇ ರೀತಿ ಕಳೆದ ಎರಡು ವರ್ಷದಲ್ಲಿ ಇವರ ಗರಿಷ್ಟ ಸ್ಕೋರ್ ಕೇವಲ 89 ರನ್ ಅಷ್ಟೇ. ಯಾವುದೇ ಶತಕ ದಾಖಲಾಗಿಲ್ಲ.

ಇನ್ನು ವಿರಾಟ್ ನಂತರ ಹೆಸರು ಬರುವುದು ರೋಹಿತ್ ಶರ್ಮ ಅವರದ್ದು ಆಡಿದ್ದು 43 ಪಂದ್ಯ ಇದು ಕೂಡ ಎಲ್ಲ ಮೂರೂ ಮಾದರಿಯ ಕ್ರಿಕೆಟ್ ಅಲ್ಲಿ. ಇದರಲ್ಲಿ ಇನ್ನಿಂಗ್ಸ್ ಆಡಿದ್ದು 54 ಅವರು ಗಳಿಸಿದ ರನ್ ಒಟ್ಟು 2015 . ಅಲ್ಲದೆ ಇವರ ಆವರೇಜ್ ಸ್ಕೋರಿಂಗ್ 39 ರ ಆಸುಪಾಸಿದೆ. ಈ ಮೂರೂ ಮಾದರಿಯ ಕ್ರಿಕೆಟ್ ಅಲ್ಲಿ ಇವರ ಬ್ಯಾಟ್ ಇಂದ ಬಂದಿದ್ದು 3 ಶತಕಗಳು. ಇವರ ಗರಿಷ್ಟ ರನ್ 161 ಆಗಿದೆ. ಇನ್ನು ಕೆ ಎಲ್ ರಾಹುಲ್ ಮೂರನೇ ಸ್ಥಾನದಲ್ಲಿ ಇದ್ದಾರೆ. ಎಲ್ಲ ಮಾದರಿಯಲ್ಲೂ ಇವರು 51 ಇನ್ನಿಂಗ್ಸ್ ಅಲ್ಲಿ 1979 ರನ್ ಗಳಿಸಿದ್ದಾರೆ. ಇವರ ಸರಾಸರಿ ಕೊಹ್ಲಿ ಹಾಗು ರೋಹಿತ್ ಅವರಿಗಿಂತ ಉತ್ತಮವಾಗಿದೆ. ಇವರು ಒಟ್ಟಾರೆ 4 ಶತಕ ಗಳಿಸಿದ್ದಾರೆ. ಹಾಗೇನೇ ಇವರ ಗರಿಷ್ಟ ರನ್ 129.

ಇನ್ನು ನಾಲ್ಕನೇ ಸ್ಥಾನದಲ್ಲಿ ರಿಷಬ್ ಪಂತ್ ಇದ್ದಾರೆ. ಭಾರತದ ತಂಡದ ಮದ್ಯ ಕ್ರಮಾಂಕದ ಆಟಗಾರ ಹಾಗೇನೇ ವಿಕೆಟ್ ಕೀಪರ್ ಪಂತ್ ಎರಡು ವರ್ಷದಲ್ಲಿ ಭಾರತದ ಪರ ಒಟ್ಟು 55 ಇನ್ನಿಂಗ್ಸ್ ಆಡಿದ್ದಾರೆ. ಈ ವೇಳೆ ಅವರ ಬ್ಯಾಟ್ ಇಂದ ಬಂದ ರನ್ ಒಟ್ಟು 1809 ಹಾಗೇನೇ ಐದನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಇದ್ದಾರೆ. ಇವರು ಮೂರೂ ಮಾದರಿಯ ಕ್ರಿಕೆಟ್ ಅಲ್ಲಿ ದಾಖಲಿಸಿದ್ದು 1442 ರನ್ ಅದು ಕೂಡ ಕೇವಲ 40 ಇನ್ನಿಂಗ್ಸ್ ಅಲ್ಲಿ. ವಿರಾಟ್ ಕೊಹ್ಲಿ ಅವರು ಅತಿ ಹೆಚ್ಚು ರನ್ ಮಾಡಿದ್ದರು ಕೂಡ ಇತರೆ ಆಟಗಾರರಿಗೆ ಹೋಲಿಸಿದರೆ ಇವರ ಆವರೇಜ್ ಬಹಳ ಕಡಿಮೆ ಇದೆ. ಹಾಗೇನೇ ಯಾವುದೇ ಶತಕ ಕೂಡ ಬರಲಿಲ್ಲ.

Leave A Reply

Your email address will not be published.