ವಿಶ್ವಕಪ್ ಗು ಮುನ್ನ ಉತ್ತಮ ಪ್ರದರ್ಶನ ನೀಡಲೇಬೇಕಾದ ಒಟ್ಟಾದಲ್ಲಿರುವ ಟಾಪ್ ಸ್ಟಾರ್ ಆಟಗಾರರು ಯಾರ್ಯಾರು ಗೊತ್ತೇ??

114

ಟಿ20 ವಿಶ್ವಕಪ್ ಪಂದ್ಯಗಳು ಶುರು ಆಗುವುದಕ್ಕಿಂತ ಮೊದಲು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಸರಣಿ ಪಂದ್ಯಗಳನ್ನು ಆಡಬೇಕಿದೆ, ಈ ಪಂದ್ಯಗಳಲ್ಲಿ ಭಾರತದ ಮೂವರು ಆಟಗಾರರ ಮೇಲೆ ಚೆನ್ನಾಗಿ ಆಡಲೇಬೇಕು ಎನ್ನುವ ಒತ್ತಡ ಇದೆ. ಏಕೆಂದರೆ ವಿಶ್ವಕಪ್ ಪಂದ್ಯಕ್ಕೆ ಉಳಿದಿರುವುದು ಇನ್ನು ಮೂರು ವಾರಗಳು ಮಾತ್ರ, ಅದಕ್ಕಿಂತ ಮೊದಲು ಭಾರತ ತಂಡ ಬಲಿಷ್ಠವಾದ ಸೌತ್ ಆಫ್ರಿಕಾ ತಂಡದ ಎದುರು ಮೂರು ಪಂದ್ಯಗಳನ್ನು ಆಡಿ, ತಕ್ಷಣವೇ ಅಸ್ಟ್ರೇಲಿಯಾಗೆ ಹಾರಬೇಕು, ಅಲ್ಲಿ ಅಭ್ಯಾಸ ಪಂದ್ಯಗಳನ್ನು ಸಹ ಆಡಬೇಕಿದೆ. ಹೀಗಿರುವಾಗ ಒತ್ತಡ ಇರುವ ತಂಡದ ಮೂವರು ಆಟಗಾರರು ಯಾರೆಂದರೆ, ಆರ್ಷದೀಪ್ ಸಿಂಗ್, ಯುಜವೇಂದ್ರ ಚಾಹಲ್ ಹಾಗೂ ರಿಷಬ್ ಪಂತ್ ಆಗಿದ್ದಾರೆ. ಈ ಮೂವರು ತಮ್ಮ ಲಯ ಕಂಡುಕೊಳ್ಳುವುದು ಬಹಳ ಮುಖ್ಯ ಆಗಿದೆ.

ಅರ್ಷದೀಪ್ ಸಿಂಗ್ :- ಆಸ್ಟ್ರೇಲಿಯಾ ಸರಣಿಯಿಂದ ಅರ್ಷದೀಪ್ ಸಿಂಗ್ ಅವರು ವಿಶ್ರಾಂತಿ ಪಡೆದಿದ್ದರು. ಎನ್.ಸಿ.ಎ ನಲ್ಲಿ ಕಂಡೀಷನಿಂಗ್ ಆಗಿ ಇದ್ದ ಅರ್ಷದೀಪ್ ಸಿಂಗ್ ಅವರು ಈಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ವಾಪಸ್ ಬಂದಿದ್ದು, ಈಗಾಗಲೇ ಕೇರಳಕ್ಕೆ ಬಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಲಾಗ್ ಓವರ್ ಗಳಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನ ಕಳಪೆಯಾಗಿತ್ತು, ಹಾಗಾಗಿ ಅರ್ಷದೀಪ್ ಸಿಂಗ್ ಅವರು ಬಂದಮೇಲೆ ಬೌಲಿಂಗ್ ಸುಧಾರಿಸುತ್ತಾ ಎಂದು ಕಾದು ನೋಡಬೇಕಿದೆ. ಇದರಿಂದಾಗಿ ಚೆನ್ನಾಗಿ ಆಡಲೇಬೇಕು ಎನ್ನುವ ಒತ್ತಡ ಇವರ ಮೇಲೆ ಇದೆ.

ಯುಜವೇಂದ್ರ ಚಾಹಲ್ :- ಭಾರತ ತಂಡದ ಚಾಣಾಕ್ಷ ಸ್ಪಿನ್ನರ್ ಎಂದು ಹೆಸರು ಮಾಡಿದ್ದ ಚಾಹಲ್ ಅವರು, ಮೂರು ವಿಭಾಗದ ಕ್ರಿಕೆಟ್ ಫಾರ್ಮೇಟ್ ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ, ವಿಕೆಟ್ ಟೇಕರ್ ಎನ್ನಿಸಿಕೊಂಡಿದ್ದರು. ಆದರೆ ಚಾಹಲ್ ಅವರು ಈಗ ಒಳ್ಳೆಯ ಫಾರ್ಮ್ ನಲ್ಲಿಲ್ಲ. ಚಾಹಲ್ ಅವರಿಗಿಂತಲು ಅಕ್ಷರ್ ಪಟೇಲ್ ಅವರು ಉತ್ತಮವಾದ ಫಾರ್ಮ್ ನಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅದ್ಭುತವಾದ ಪ್ರದರ್ಶನ ನೀಡಿ, ವಿಕೆಟ್ಸ್ ಪಡೆದಿದ್ದಾರೆ. ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ಸ್ಪಿನ್ನರ್ ಗಳ ಅವಶ್ಯಕತೆ ಹೆಚ್ಚಾಗಿದ್ದು, ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡುವ ಸಂಭವ ಹೆಚ್ಚಿದೆ, ಹಾಗಾಗಿ ಚಾಹಲ್ ಅವರು ಸೌತ್ ಆಫ್ರಿಕಾ ಸರಣಿ ಮೇಲೆ ಹೆಚ್ಚು ಗಮನ ಹರಿಸಿ, ಉತ್ತಮ ಪ್ರದರ್ಶನ ನೀಡಬೇಕಿದೆ.

ರಿಷಬ್ ಪಂತ್ :- ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರ ನಡುವೆ ಭಾರಿ ಪೈಪೋಟಿ ಇದೆ, ರಿಷಬ್ ಅವರಿಗೆ ಏಷ್ಯಾಕಪ್ ನಲ್ಲಿ ಅವಕಾಶ ನೀಡಿ, ಅವರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಿಷಬ್ ಅವರಿಗೆ ಅವಕಾಶ ನೀಡಲಿಲ್ಲ, 2ನೇ ಪಂದ್ಯದಲ್ಲಿ ಅವಕಾಶ ಸಿಕ್ಕರು ಸಹ, ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಕಾರ್ತಿಕ್ ಅವರಿಗು ಹೀಗೆ ಆಗಿದೆ. ಸೌತ್ ಆಫ್ರಿಕಾ ಸರಣಿಗೆ ರಿಷಬ್ ಅವರು ಆಯ್ಕೆಯಾಗುವುದು ಸಹ ಖಚಿತವಾಗಿಲ್ಲ, ಒಂದು ವೇಳೆ ಅವಕಾಶ ಸಿಕ್ಕರೆ, ಅದನ್ನು ರಿಷಬ್ ಪಂತ್ ಅವರು ಸರಿಯಾಗಿ ಉಪಯೋಗಿಸಿಕೊಳ್ಳಬೇಕಿದೆ.

Leave A Reply

Your email address will not be published.