ವಿಶ್ವಕಪ್ ಗೂ ಮುನ್ನವೇ ಭಾರತಕ್ಕೆ ಮತ್ತೊಂದು ಆಘಾತ: ಸ್ಟಾರ್ ಪ್ಲೇಯರ್ ಇಂಜುರಿಯಿಂದ ಔಟ್. ಬೆಳೆಯುತ್ತಿದೆ ಗಾಯಾಳುಗಳ ಸಂಖ್ಯೆ. ಯಾರು ಗೊತ್ತೇ??
ನಮ್ಮ ಭಾರತ ಕ್ರಿಕೆಟ್ ತಂಡಕ್ಕೆ ಕಳೆದ ಒಂದೆರಡು ವರ್ಷಗಳಿಂದ ಇಂಜುರಿ ಸಮಸ್ಯೆ ಬಿಟ್ಟುಬಿಡದೆ ಕಾಡುತ್ತಿದೆ. ಇಂಜುರಿ ಸಮಸ್ಯೆ ಇಂದಾಗಿ ಸ್ಟಾರ್ ಆಟಗಾರರು ಭಾರತ ತಂಡದಿಂದ ಹೊರನಡೆಯುವ ಹಾಗೆ ಆಗಿದೆ. ಏಷ್ಯಾಕಪ್ ಪಂದ್ಯಗಳಿಂದ ಈಗಾಗಲೇ ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಇಂಜುರಿ ಕಾರಣದಿಂದಲೇ ತಂಡದಿಂದ ಹೊರಹೋಗಿದ್ದಾರೆ. ಆದರೆ ಇದೀಗ ಮತ್ತೊಬ್ಬ ಸ್ಟಾರ್ ಪ್ಲೇಯರ್ ಇಂಜುರಿ ಕಾರಣದಿಂದಲೇ ತಂಡದಿಂದ ಹೊರಹೋಗಿರುವುದು ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಪರಿಣಾಮ ಬೀರುತ್ತದೆ..
ಈಗ ತಂಡದಿಂದ ಹೊರಹೋಗಿರುವುದು ಕಳೆದ ಎರಡು ವರ್ಷಗಳಿಂದ ಭಾರತ ತಂಡದ ಪರವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್, ಬ್ಯಾಟಿಂಗ್ ನಲ್ಲಿ 154 ರ ಸ್ಟ್ರೈಕ್ ರೇಟ್, ಬೌಲಿಂಗ್ ನಲ್ಲಿ 6.66 ಎಕಾನಮಿ ಇಂದ ಎರಡು ವಿಭಾಗದಲ್ಲೂ ಉತ್ತಮವಾದ ಪ್ರದರ್ಶನ ನೀಡುತ್ತಿದ್ದ, ರವೀಂದ್ರ ಜಡೇಜಾ ಅವರು ಈಗ ಟೀಮ್ ಇಂಡಿಯಾ ಇಂದ ಹೊರಗುಳಿದಿದ್ದಾರೆ, ಜಡೇಜಾ ಅವರಿಗೆ ಮಂಡಿ ಇಂಜುರಿ ಆಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು, ಅಷ್ಟೇ ಅಲ್ಲದೆ, ಬಳಿಕ 3 ತಿಂಗಳು ಬೆಡ್ ರೆಸ್ಟ್ ಅಗತ್ಯವಿದೆ, ಹಾಗಾಗಿ ಜಡೇಜಾ ಅವರು ಟಿ20 ಏಷ್ಯಾಕಪ್ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ.
ಟೀಮ್ ಇಂಡಿಯಾಗೆ ಈ ರೀತಿ ಇಂಜುರಿ ಸಮಸ್ಯೆ ಕಾಡುತ್ತಲೇ ಇದೆ. ತಂಡದಲ್ಲಿ ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರ ಇಂಜುರಿಗೆ ಒಳಗಾಗಿದ್ದರು. ಇದೀಗ ಜಡೇಜಾ ಅವರಿಗೂ ಇದೆ ರೀತಿ ಆಗಿದೆ. ಕೆ.ಎಲ್.ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಈಗ ಸುಧಾರಿಸಿಕೊಂಡು ತಂಡಕ್ಕೆ ಮರಳಿ ಬಂದಿದ್ದಾರೆ. ಈ ರೀತಿ ಆಟಗಾರರು ಇಂಜುರಿಗೆ ಒಳಗಾಗಿ ತಂಡದಿಂದ ದೂರ ಉಳಿಯುತ್ತಿರುವಾಗ, ಬಹುಮುಖ್ಯವಾದ ಟಿ20 ವಿಶ್ವಕಪ್ ಪಂದ್ಯಗಳಿಗೆ ಆಟಗಾರರನ್ನು ಆಯ್ಕೆ ಮಾಡಿ, ಬಲಿಷ್ಠ ತಂಡ ಕಟ್ಟಲು ನಿಜಕ್ಕೂ ಕಷ್ಟವಾಗುತ್ತದೆ.