ವಿಶ್ವಕಪ್ ಗೆ ಆಯ್ಕೆಯಾಗಿರಬಹುದು, ಆದರೂ ನಿಂತಿಲ್ಲ ಟೆನ್ಶನ್. ಕೊಂಚ ಯಾಮಾರಿದರೂ ಈ ಮೂವರು ತಂಡದಿಂದ ಔಟ್. ಯಾರ್ಯಾರು ಗೊತ್ತೇ??

132

ಟಿ20 ವಿಶ್ವಕಪ್ ಗೆ ಭಾರತ ತಂಡ ಆಯ್ಕೆಯಾಗಿದೆ. ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲು ಭಾರತದಲ್ಲಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧ ಸರಣಿ ಪಂದ್ಯಗಳು ನಡೆಯುತ್ತದೆ, ಮುಂದಿನ ಸೋಮವಾರದಿಂದ ಈ ಪಂದ್ಯಗಳು ಶುರುವಾಗಲಿದೆ.. ಈ ಪಂದ್ಯಗಳು ಪ್ರಸ್ತುತ ಭಾರತ ತಂಡದಲ್ಲಿರುವ ಕೆಲವು ಆಟಗಾರರು ಮತ್ತೆ ಫಾರ್ಮ್ ಗೆ ಬರೋದಕ್ಕೆ ಒಂದು ಒಳ್ಳೆಯ ಅವಕಾಶ ಆಗಿದೆ. ವಿಶ್ವಕಪ್ ಪಂದ್ಯಗಳು ಅಸ್ಟ್ರೇಲಿಯಾದಲ್ಲೇ ನಡೆಯಲಿದ್ದು, ಆ ತಂಡದ ವಿರುದ್ಧವೇ ಪಂದ್ಯಗಳು ನಡೆಯಲಿರುವ ಕಾರಣ, ಈ ಪಂದ್ಯಗಳು ಬಹಳ ಮಹತ್ವದ್ದಾಗಿದೆ, ಫಾರ್ಮ್ ಕಂಡುಕೊಳ್ಳಬೇಕಾದ ಈ ಆಟಗಾರರು ಸ್ವಲ್ಪ ಯಾಮಾರಿದರು ಸಹ ಆ ಮೂವರು ಆಟಗಾರರು ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದು. ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ :- ಕೆ.ಎಲ್ ರಾಹುಲ್ ಅವರು ಇಂಜುರಿ ಹಾಗೂ ಕೋವಿಡ್ ಇಂದ ಚೇತರಿಸಿಕೊಂಡು ಈಗ ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ನ ಕೊನೆಯ ಪಂದ್ಯದಲ್ಲಿ ರಾಹುಲ್ ಅವರು ಅರ್ಧಶತಕ ಭಾರಿಸಿ ಒಳ್ಳೆಯ ಪ್ರದರ್ಶನ ನೀಡಿದರು, ಆದರೆ ಹಿಂದಿನ ಪಂದ್ಯಗಳಲ್ಲಿ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಲಿಲ್ಲ. ಇದರಿಂದ ರಾಹುಲ್ ಅವರು ಟೀಕೆ ಅನುಭವಿಸಿದ್ದಾರೆ. ಅಫ್ಘಾನ್ ತಂಡದ ವಿರುದ್ಧ ಕೋಹ್ಲಿ ಅವರು ಓಪನರ್ ಆಗಿ ಕಣಕ್ಕೆ ಇಳಿದು ಶತಕ ಭಾರಿಸಿದ ಕಾರಣ ಅವರನ್ನೇ ಕಣಕ್ಕೆ ಇಳಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಕೆ.ಎಲ್.ರಾಹುಲ್ ಅವರ ಮೇಲೆ ಭಾರಿ ಒತ್ತಡ ಇದೆ. ಹಾಗಾಗಿ ರಾಹುಲ್ ಅವರು ಈಗ ಆರಂಭಿಕ ಆಟಗಾರನಾಗಿ ಉಳಿಯಬೇಕು ಎಂದರೆ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಬೇಕಿದೆ.

ಸ್ಪಿನ್ ಮಾಂತ್ರಿಕ ಯುಜವೇಂದ್ರ ಚಾಹಲ್ :- ಚಾಹಲ್ ಅವರು ಭಾರತ ತಂಡದ ಅನುಭವಿ ಸ್ಪಿನ್ನರ್ ಆಗಿದ್ದಾರೆ. ಕಳೆದ ವರ್ಷ ಇವರು ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲಿಲ್ಲ, ಅದಾದ ಬಳಿಕ ಚಾಹಲ್ ಅವರು ಒಳ್ಳೆಯ ಪ್ರದರ್ಶನ ನೀಡಿರಲಿಲ್ಲ. ಆದರೆ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಈಗ ಕಂಬ್ಯಾಕ್ ಮಾಡಿ, ವಿಶ್ವಕಪ್ ಗು ಆಯ್ಕೆಯಾಗಿದ್ದಾರೆ. ಆದರೆ ಚಾಹಲ್ ಅವರು ಏಷ್ಯಾಕಪ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡಲಿಲ್ಲ. ಹೆಚ್ಚಿನ ವಿಕೆಟ್ಸ್ ಪಡೆಯಲಿಲ್ಲ. ಆದರೆ ಚಾಹಲ್ ಅವರ ಮೇಲೆ ಭರವಸೆ ಇಟ್ಟುಕೊಂಡಿರುವ ಭಾರತ ತಂಡ ಅವರನ್ನು ಆಯ್ಕೆ ಮಾಡಿದ್ದು, ಚಾಹಲ್ ಅವರು ಫಾರ್ಮ್ ಗೆ ಬರಲು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಸರಣಿ ಪಂದ್ಯಗಳು ಅವರಿಗೆ ಒಳ್ಳೆಯ ಅವಕಾಶ ಆಗಿದೆ.

ರಿಷಬ್ ಪಂತ್ :- ರಿಷಬ್ ಪಂತ್ ಅವರು ಅತ್ಯುತ್ತಮವಾದ ಆಟಗಾರ ಎಂದು ಈಗಾಗಲೇ ಸಾಬೀತು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ಹಾಗೂ ಓಡಿಐ ಗಳಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನೀಡಿದ್ದಾರೆ ಪಂತ್. ಆದರೆ ಟಿ20 ಪಂದ್ಯಗಳಲ್ಲಿ ರಿಷಬ್ ಪಂತ್ ಅವರು ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಏಷ್ಯಾಕಪ್ ನಲ್ಲಿ ಸಹ ಇವರು ಉತ್ತಮ ಪ್ರದರ್ಶನ ನೀಡಲಿಲ್ಲ ಎನ್ನುವ ವಿಚಾರ ಗೊತ್ತಿದೆ. ಹಾಗಿದ್ದರೂ ಇವರು ಒಳ್ಳೆಯ ಪ್ಲೇಯರ್ ಎನ್ನುವ ಕಾರಣಕ್ಕೆ ವಿಶ್ವಕಪ್ ಗೆ ಆಯ್ಕೆಯಾಗಿದ್ದು, ಪಂತ್ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಅದರಿಂದ ಮುಂಬರುವ ಅಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ರಿಷಬ್ ಪಂತ್ ಅವರು ಉತ್ತಮವಾದ ಪ್ರದರ್ಶನ ಕೊಡಲೇಬೇಕಿದೆ.

Leave A Reply

Your email address will not be published.