ವಿಶ್ವಕಪ್ ಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿನ ಲೋಪದ ಬಗ್ಗೆ ಮಾತನಾಡಿದ ಆಸೀಸ್ ಮಾಜಿ ವೇಗಿ. ಹೇಳಿದ್ದೇನು ಗೊತ್ತೇ??

109

ಭಾರತವು ವಿಶ್ವಕಪ್ ನಲ್ಲಿ ಆಡಲಿರುವ 15ಸದಸ್ಯರ ಹೆಸರನ್ನು ಹಾಗೂ 4 ಮೀಸಲು ಆಟಗಾರರ ಹೆಸರನ್ನು ತಿಳಿಸಿದೆ. ಏಷ್ಯಾಕಪ್ ನಲ್ಲಿ ಆದ ಹಾಗೆ ಎಡವಟ್ಟು ಆಗಬಾರದು ಎನ್ನುವ ಕಾರಣಕ್ಕೆ ಬಿಸಿಸಿಐ ಈ ಬಾರಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ, ಏಷ್ಯಾಕಪ್ ನಲ್ಲಿ ಸೋತ ಬಳಿಕ, ವಿಶ್ವಕಪ್ ನಲ್ಲಿ ಗೆಲ್ಲಲೇಬೇಕು ಎಂದು ವಿಶ್ವಾಸದಲ್ಲಿದೆ. ಆದರೆ ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಭಾರತ ತಂಡ ಆಟಗಾರರ ಆಯ್ಕೆಯಲ್ಲಿ ಎಡವಿದೆ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.

ಮಿಚೆಲ್ ಅವರು ಭಾರತ ತಂಡದ ಬೌಲರ್ ಗಳ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ್ದಾರೆ. “ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್ ತಂಡಕ್ಕೆ ಕೇವಲ ನಾಲ್ಕು ವೇಗಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮುಖ್ಯವಾದ ಟೂರ್ನಿಗೆ ಕೇವಲ 4 ವೇಗಿಗಳನ್ನು ಆಯ್ಕೆಮಾಡುವುದು ತಂಡಕ್ಕೆ ಅಪಾಯ ತರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮಿಚೆಲ್ ಜಾನ್ಸನ್. “ಭಾರತ ತಂಡದಲ್ಲಿ ಒಬ್ಬ ವೇಗಿ ಆಲ್ ರೌಂಡರ್, ಇಬ್ಬರು ಸ್ಪಿನ್ನರ್ ಗಳು ಹಾಗೂ ನಾಲ್ಕು ವೇಗಿಗಳು ಇರಬೇಕು. ಆಗ ತಂಡ ಅಪಾಯಕಾರಿಯಾಗಿರುತ್ತದೆ. ಆದರೆ ಭಾರತ ತಂಡವು ಇಬ್ಬರು ವೇಗಿಗಳು, ಒಬ್ಬ ಆಲ್ ರೌಂಡರ್ ಹಾಗೂ ಇಬ್ಬರು ಸ್ಪಿನ್ನರ್ ಗಳ ಜೊತೆಗೆ ಬರುವ ಸಾಧ್ಯತೆ ಇದೆ..” ಎಂದಿದ್ದಾರೆ.

ಇನ್ನು ಮಾತನಾಡಿ, “ಆಸ್ಟ್ರೇಲಿಯಾ ಅಂತಹ ಜಾಗದಲ್ಲಿ ಆಡುವಾಗ ಮೂರು ವೇಗಿಗಳು ಇದ್ದರೆ ಒಳ್ಳೆಯದು. ಪರ್ತ್ ಅಂತಹ ಪರಿಸ್ಥಿತಿಯಲ್ಲಿ ಆಡಲು ನಾಲ್ಕು ವೇಗಿಗಳು ಬೇಕಾಗುತ್ತಾರೆ. ಭಾರತ ತಂಡ ಇದಕ್ಕಾಗಿ ಪ್ಲಾನ್ ಮಾಡಿಕೊಂಡಿರುತ್ತದೆ. ಆದರೆ ಕೇವಲ ನಾಲ್ಕು ವೇಗಿಗಳನ್ನು ಮಾತ್ರ ಆಯ್ಕೆಮಾಡಿಕೊಂಡಿರುವುದು ಅಪಾಯ ಉಂಟು ಮಾಡಬಹುದು..” ಎಂದು ಹೇಳಿದ್ದಾರೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಅವರು ಆಲ್ ರೌಂಡರ್ ಆಗಿದ್ದಾರೆ. ಹಾಗೂ ನಾಲ್ವರು ಸ್ಪೆಷಲಿಸ್ಟ್ ವೇಗಿಗಳು ಜಸ್ಪ್ರೀತ್ ಬುಮ್ರ, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಇದ್ದಾರೆ. ಮೊಹಮ್ಮದ್ ಶಮಿ ಅವರನ್ನು ಮೀಸಲು ಆಟಗಾರನಾಗಿ ಉಳಿಸಿಕೊಳ್ಳಲಾಗಿದೆ.

Leave A Reply

Your email address will not be published.