ಸಚಿನ್ ರ ದಾಖಲೆ ಈ ಆಟಗಾರ ಮುರಿಯಬಲ್ಲ ಎಂದು ಎಚ್ಚರಿಕೆ ನೀಡಿದ ಮೈಕಲ್ ವಾನ್. ಕೊಹ್ಲಿ ಅಲ್ಲದೆ ಬೇರೆ ಯಾರು ಈ ಆಟಗಾರ?
ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಅಲ್ಲದೆ ವಿಶ್ವದಾದ್ಯಂತ ತಮ್ಮ ಅದ್ಬುತ ಬ್ಯಾಟಿಂಗ್ ಇಂದ ಪ್ರಸಿದ್ದರಾದವರು. ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದಲ್ಲದೆ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ. ತಮ್ಮ ಶತಕದ ದಾಖಲೆ ಯಾ ಹತ್ತಿರ ಕೂಡ ಬರಲು ಸಾಧ್ಯವಾಗಿಲ್ಲ. ಅನೇಕರು ಒಬ್ಬೊಬ್ಬ ಆಟಗಾರರ ಹೆಸರನ್ನು ಸಮಯಕ್ಕೆ ಸರಿಯಾಗಿ ಹೇಳುತ್ತಿದ್ದರು ಆದರೆ ಅದು ಯಾವುದು ಪೂರ್ಣಗೊಳ್ಳುವುದು ಸಾಧ್ಯವಾಗಿಲ್ಲ. ಅದು ವಿರಾಟ್ ಕೊಹ್ಲಿ ಇರಬಹುದು ಜೋ ರೂಟ್ ಹಾಗೇನೇ ಕೇನ್ ವಿಲಿಯಂಸನ್ ಇರಬಹದು. ಯಾರು ಕೂಡ ಹತ್ತಿರ ಕೂಡ ಸುಳಿಯಲು ಸಾಧ್ಯವಾಗಿಲ್ಲ.
ಸಚಿನ್ ತೆಂಡೂಲ್ಕರ್ 24 ವರ್ಷಗಳ ಸುಧೀರ್ಘ ಆಟ ಆಡಿದ್ದಾರೆ. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಅಲ್ಲದೆ ಏಕದಿನ ಹಾಗು ಟೆಸ್ಟ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ ಅಲ್ಲಿ ಇವರು ಭಾರತದ ಪರ ಸಾರ್ವಕಾಲಿಕ 200 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಇದು ಕೂಡ ದಾಖಲೆ ಆಗಿದೆ. ಆದರೆ ಇದೀಗ ಇಂಗ್ಲೆಂಡ್ ನ ಮಾಜಿ ಆಟಗಾರ ಮೈಕಲ್ ವಾನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಬಲ್ಲ ಆಟಗಾರನ ಹೆಸರು ಹೇಳಿದ್ದಾರೆ. ಅದು ಬೇರೆ ಯಾರು ಅಲ್ಲ ಇಂಗ್ಲಂಡ್ ನ ಆಟಗಾರ ಜೋ ರೂಟ್. ಇವರನ್ನು ಮೊದಲಿಂದಲೂ ಸಚಿ ದಾಖಲೆ ಮುರಿಯಬಲ್ಲರು ಎಂದೇ ಈ ಮೈಕಲ್ ವಾನ್ ಹೇಳುತ್ತಿದ್ದರು. ಇದೀಗ ಮತ್ತೊಮ್ಮೆ ಇದನ್ನೇ ಹೇಳಿದ್ದಾರೆ.
ಜೋ ರೂಟ್ ಇದೀಗ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ತಮ್ಮ ೨೬ ನೇ ಶತಕ ದಾಖಲಿಸಿದ್ದಾರೆ. ಅಲ್ಲದೆ ೧೦,೦೦೦ ರನ್ ಕೂಡ ಪೂರೈಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಟೆಸ್ಟ್ ರನ್ ೧೫,೯೨೧, ಜೋ ರೂಟ್ ಕೇವಲ ೬೦೦೦ ರನ್ ಗಳ ಹಿನ್ನಡೆಯಲ್ಲಿ ಇದ್ದಾರೆ. ಹಾಗೇನೇ ರೂಟ್ ಗೆ ಇದೀಗ ೩೧ ವರ್ಷ ವಯಸ್ಸು, ಆಂಡೆರ್ಸನ್ ೪೦ ವರ್ಷಗಳ ವರೆಗೆ ಆಟವಾಡುತ್ತಾರೆ ಅಂದ ಮೇಲೆ ಜೋ ರೂಟ್ ಕೂಡ ಆಡಬಹುದು. ಹಾಗೇನೇ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮೀರಿಸಬಹದು ಎಂದು ಹೇಳಿದ್ದಾರೆ. ವಾನ್ ಗಿಂತ ಮೊದಲು ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾರ್ಕ್ ಟೇಲರ್ ಕೂಡ ಇದೆ ಮಾತನ್ನು ಆಡಿದ್ದರು.ಆದರೆ ಸಚಿನ್ ದಾಖಲೆ ವಿರಾಟ್ ಕೊಹ್ಲಿ ಮಾತ್ರ ಮೀರಿಸಲು ಸಾಧ್ಯ ಎಂದು ತೆಂಡೂಲ್ಕರ್ ಅವರು ಸ್ವತಃ ಹೇಳಿದ್ದರು. ನಿಮ್ಮ ಅಭಿಪ್ರಾಯವೇನು?