ಸುರೇಶ ರೈನಾ ರಿಗೆ ಈ ಬಾರಿ ಈ ತಂಡ ಕಪ್ ಗೆಲ್ಲಬೇಕಂತೆ. ಮುಂದಿನ ಐಪಿಎಲ್ ಆವೃತ್ತಿಗೆ ವಾಪಸ್ಸಾಗಲಿದ್ದಾರೆ ರೈನಾ?

328

ಐಪಿಎಲ್ ನ ಮಾಜಿ ಆಟಗಾರ ಸುರೇಶ ರೈನಾ ಅವರಿಗೆ ಈ ಬಾರಿ ಆಡಲು ಅವಕಾಶ ಸಿಗಲಿಲ್ಲ. ಯಾವುದೇ ತಂಡ ಕೂಡ ರೈನಾ ಅವರನ್ನು ಹರಾಜಿನಲ್ಲಿ ಖರೀದಿ ಮಾಡಿಲ್ಲ. ಅದು ಒಂದು ಕಡೆ ಬೇಸರ ಇದ್ದೆ ಇರುತ್ತದೆ ಅವರಿಗೆ. ಈ ಬಾರಿ ಅವರಿಗೆ ಈ ತಂಡ ಐಪಿಎಲ್ ಕಪ್ ಗೆಲ್ಲಬೇಕಂತೆ. ಈ ಬಾರಿ ಆಡಲು ಅವಕಾಶ ಸಿಕ್ಕಿಲ್ಲ ನಮಗೆ ಆದರೆ ಅವರು ಕಾಮೆಂಟರಿ ನೋಡಲು ನಮಗೆ ಅವಕಾಶ ಸಿಕ್ಕಿತ್ತು. ಮುಂದಿನ ಬಾರಿ ಹರಾಜಿನಲ್ಲಿ ಖರೀದಿ ಆಗಿ ಯಾವುದಾದರು ತಂಡದಲ್ಲಿ ಸ್ಥಾನ ಪಡೆಯಲು ಬಹುದು.

ಸುರೇಶ ರೈನಾ ಅವರದ್ದು ಐಪಿಎಲ್ ಅಲ್ಲಿ ಉತ್ತಮ ದಾಖಲೆಗಳಿವೆ ಆದರೂ ಕೂಡ ಅವರಿಗೆ ಈ ಬಾರಿ ಯಾವುದೇ ತಂಡದಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಐಪಿಎಲ್ ಅಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಲಿಸ್ಟ್ ಅಲ್ಲಿ ಐದನೇ ಸ್ಥಾನದಲ್ಲಿ ಇದ್ದಾರೆ. ೫,೫೨೮ ರನ್ ಮಾಡಿದ ದಾಖಲೆ ಇವರ ಬಳಿ ಇದೆ. ಸುರೇಶ ರೈನಾ ತಮ್ಮ ಐಪಿಎಲ್ ವೃತ್ತಿಯಲ್ಲಿ ಒಟ್ಟಾರೆ ಒಂದು ಶತಕ ಹಾಗೇನೇ ೩೯ ಅರ್ಧ ಶತಕ ದಾಖಲಿಸಿದ್ದಾರೆ. ಈ ಬಾರಿ ಯಾವುದೇ ತಂಡ ಇವರನ್ನು ಖರೀದಿ ಮಾಡದೇ ಇದಿದ್ದು ಎಲ್ಲ ಅಭಿಮಾನಿಗಳಿಗೆ ಬೇಸರ ತಂದಿದೆ.

ಸುರೇಶ ರೈನಾ ಅವರ ಅನುಪಸ್ಥಿತಿ ಈ ಬಾರಿಯ ಚೆನ್ನೈ ತಂಡದಲ್ಲಿ ಕಾಣಿಸುತಿತ್ತು. ಅದೇ ರೀತಿ ಚೆನ್ನೈ ತಂಡದ ನಾಯಕ ಕೂಡ ಧೋನಿ ಬದಲು ಜಡೇಜಾ ಆಗಿದ್ದರು. ಲೀಗ್ ಹಂತದಲ್ಲೇ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು ತಂಡ. ಮತ್ತೊಮ್ಮೆ ಧೋನಿ ಕೈಗೆ ನೀಡಲಾಯಿತು ಚೆನ್ನೈ ತಂಡದ ನಾಯಕತ್ವ. ಈ ಬಾರಿ ಐಪಿಎಲ್ ಕಪ್ ಗೆಲ್ಲುವುದು ಯಾರು ಎನ್ನುವ ಕುತೂಹಲ ಇದೆ. ಆದರೆ ಸುರೇಶ ರೈನಾ ಅವರಿಗೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಬೇಕು ಎನ್ನುವ ಅಸೆ ಇದೆ ಅಂತೇ. ಕೊಹ್ಲಿ ಗೋಸ್ಕರ ಈ ಬಾರಿ ಬೆಂಗಳೂರು ತಂಡ ಟ್ರೋಫಿ ಗೆಲ್ಲಲೇಬೇಕೆಂದು ಸುರೇಶ ರೈನಾ ಹೇಳಿದ್ದಾರೆ.

Leave A Reply

Your email address will not be published.