ಸೋತು ಸುಣ್ಣವಾಗಿರುವ ಮುಂಬೈ ತಂಡಕ್ಕೆ ಇನ್ನೊಂದು ಸಮಸ್ಯೆ. ತಂಡದ ಬೆನ್ನೆಲುಬಾಗಿರುವ ಈ ಆಟಗಾರನೇ ಐಪಿಎಲ್ ಇಂದ ಹೊರಗೆ.

267

ಮುಂಬೈ ಇಂಡಿಯನ್ಸ್ ಐಪಿಎಲ್ ಒಟ್ಟು ಆವೃತ್ತಿಯಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಮೊದಲನೇ ಸ್ಥಾನದಲ್ಲಿ ಇರುವುದೇ ಈ ತಂಡ. ಆದರೆ ಯಾರದು ಕಣ್ಣು ಬಿತ್ತೋ ಏನೋ ಅಂಬಾನಿ ಒಡೆತನದ ಹಾಗೇನೇ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಅಂಕಪಟ್ಟಿಯಲ್ಲಿ ಕೊನೆಯಲ್ಲಿ ಕಾಣಸಿಗುತ್ತದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಪ್ಲೇ ಆಫ್ ಇಂದ ಹೊರಗೆ ಬಂದಾಗಿದೆ. ಇನ್ನು ಏನಿದ್ದರೂ ಕೂಡ ಮುಂದಿನ ವರ್ಷಕ್ಕೆ ತಯಾರಾಗುವುದು ಮಾತ್ರ ಬಾಕಿ ಇದೆ.

ಇನ್ನು ಮುಂಬೈ ಇಂಡಿಯನ್ಸ್ ತಂಡದ ಬೆನ್ನೆಲುಬು ಅಂದರೆ ತಪ್ಪಾಗಲಾರದು. ತನ್ನ ಪ್ರದರ್ಶನ ಇಂದ ಎಲ್ಲರ ಮನಸ್ಸನ್ನು ಗೆದ್ದಿದ್ದ ಸೂರ್ಯಕುಮಾರ್ ಯಾದವ್ ಅವರು ಈ ಬಾರಿಯ ಐಪಿಎಲ್ ಇಂದ ಹೊರಗುಳಿಯಲಿದ್ದಾರೆ. ಇದು ಸೋತು ಸುಣ್ಣವಾಗಿರುವ ಮುಂಬೈ ಗೆ ಇನ್ನೊಂದು ದೊಡ್ಡ ಸೋಲಾಗಿದೆ. ಗುಜರಾತ್ ಟೈಟಾನ್ಸ್ ಜೊತೆಗಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಎದ ಮೊಣಕೈ ಗಾಯವಾಗಿದೆ. ಇದೆ ಕಾರಣದಿಂದ ಐಪಿಎಲ್ ನಲ್ಲಿ ಮುಂಬೈ ತಂಡದ ಉಳಿದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹಾಗೇನೇ ಈ ಸುದ್ದಿ ಮುಂಬೈ ಗೆ ದೊಡ್ಡ ಸೋಲೇ ಸರಿ.

ಇದಕ್ಕಿಂತ ಮೊದಲು ಕೂಡ ಗಾಯದ ಸಮಸ್ಯೆ ಇಂದ ಮೊದಲ ಎರಡು ಪಂದ್ಯಕ್ಕೆ ಅಲಭ್ಯರಾಗಿದ್ದರು ಸೂರ್ಯಕುಮಾರ್ ಯಾದವ್. ಫೆಬ್ರವರಿ ಅಲ್ಲಿ ವೆಸ್ಟ್ ಇಂಡೀಸ್ ನೊಂದಿಗೆ ನಡೆದ ಟಿ-೨೦ ಸರಣಿ ವೇಳೆ ಮೂಳೆ ಮುರಿದುಕೊಂಡಿದ್ದರು. ಅದಾದ ನಂತರ ಆಡಿದ ೮ ಪಂದ್ಯಗಳಲ್ಲಿ ಉತ್ತಮ ಆಟವಾಡಿದ್ದಾರೆ. ಆಡಿದ ಪಂದ್ಯಗಳಲ್ಲಿ ಇವರ ಸರಾಸರಿ ೪೩.೨೯ ಹಾಗೇನೇ ಇವರ ಒಟ್ಟು ಮೊತ್ತ 303 ರನ್ ಗಳು. ಇದರಲ್ಲಿ ೩ ಅರ್ಧ ಶತಕಗಳು ಕೂಡ ಸೇರಿದೆ. ಇದೀಗ ಇನ್ನೊಮ್ಮೆ ಗಾಯಗೊಂಡಿದ್ದು ಮುಂಬೈ ತಂಡಕ್ಕೆ ಚಿಂತೆನೆ ಶುರುವಾಗಿದೆ. ಯಾಕೆಂದರೆ ಟೇಬಲ್ ಕೊನೆಯಲ್ಲಿರುವ ತಂಡವಾಗಲು ಬಯಸುವುದಿಲ್ಲ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್.

ಇನ್ನು ಮುಂದೆ ಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು ಅವರ ಬದಲಿಗೆ ಸೂರ್ಯ ಕುಮಾರ್ ಯಾದವ್ ಕೂಡ ಸೇರುವ ಸಾಧ್ಯತೆ ಇದೆ. ಇದೆ ಕಾರಣಕ್ಕೆ ಐಪಿಎಲ್ ನಿಂದ ಹೊರಗುಳಿದು ಸಂಪೂರ್ಣ ಫಿಟ್ ಆಗಿ ಅಂತಾರಾಷ್ಟ್ರೀಯ ತಂಡ ಸೇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಭಾರತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗು ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಆವೃತ್ತಿಯ ಐಪಿಎಲ್ ಸರಣಿಯಲ್ಲಿ ಯಾವುದೇ ಉತ್ತಮ ಪ್ರದರ್ಶನ ಕಂಡು ಬಂದಿಲ್ಲ. ಇದು ಆಯ್ಕೆಗಾರರಲ್ಲಿ ಹಾಗು ಅಭಿಮಾನಿಗಳಲ್ಲಿ ಚಿಂತೆ ಶುರು ಮಾಡಿದೆ.

Leave A Reply

Your email address will not be published.