ಹರಾಜಿನಲ್ಲಿ ಯಾರು ಖರೀದಿ ಮಾಡಲಿಲ್ಲ, ಅವಕಾಶ ಕೊಟ್ಟಿದ್ದು RCB ಮಾತ್ರ. ಶತಕದ ಮೂಲಕ ತಂಡಕ್ಕೆ ಆಸರೆ ಆದ ಬಳಿಕ ಭಾವುಕರಾದರಜತ್ ಪಾಟೀದಾರ್.

1,946

ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲಿ ಇನ್ನು ಎರಡು ಪಂದ್ಯಗಳು ಮಾತ್ರ ಉಳಿದಿದೆ. ಪ್ಲೇ ಆಫ್ ಹಂತಕ್ಕೆ ತಲುಪಿದ ನಾಲ್ಕು ತಂಡಗಳಲ್ಲಿ ಗುಜರಾತ್ ಟೈಟಾನ್ಸ್ ಫೈನಲ್ ಈಗಾಗ್ಲೇ ತಲುಪಿದೆ. ಬೆಂಗಳೂರು ಹಾಗು ರಾಜಸ್ತಾನ ತಂಡಗಳು ಕ್ವಾಲಿಫೈರ್ ೨ ಅಲ್ಲಿ ಮುಖಾಮುಖಿ ಆಗಲಿವೆ. ನಿನ್ನೆ ರಜತ್ ಪಾಟೀದಾರ್ ಅವರ ಬಿರುಸಿನ ಶತಕದ ಕಾರಣದಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೂಕ್ನೋ ವಿರುದ್ದ ಗೆಲುವು ಸಾದಿಸಲು ಸಾಧ್ಯವಾಯಿತು ಎಂದರೆ ತಪ್ಪಾಗಲಾರದು. ೧೧೨ ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ ರಜತ್ ಪಾಟೀದಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೋಲ್ಕತ್ತಾದ ಈಡೆನ್ ಗಾರ್ಡನ್ ಅಲ್ಲಿ ಬುಧವಾರ ನಡೆದ ಐಪಿಎಲ್ ೨೦೨೨ ಎಲಿಮಿನೇಷನ್ ಪಂದ್ಯದಲ್ಲಿ ಬೆಂಗಳೂರು ತಂಡ ಲಕ್ನೋ ವಿರುದ್ಧ ೧೪ ರನ್ ಗಳ ರೋಚಕ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ತಂಡ ಕ್ವಾಲಿಫೈರ್ ೨ ಗೆ ಟಿಕೆಟ್ ಪಡೆದುಕೊಂಡಿದೆ. ಅಲ್ಲಿ ಕ್ವಾಲಿಫೈರ್ ೧ ರಲ್ಲಿ ಗುಜರಾತ್ ವಿರುದ್ಧ ಸೋತ ರಾಜಸ್ತಾನ ತಂಡವನ್ನು ಬೆಂಗಳೂರು ತಂಡ ಮುಖಾಮುಖಿ ಆಗಲಿದೆ. ನಿನ್ನೆಯ ಪಂದ್ಯದ ಹೀರೋ ಆಗಿದ್ದ ರಜತ್ ಪಾಟೀದಾರ್ ಅವರ ಅದ್ಬುತ ಸಂಗತಿಯೆಂದರೆ ಈ ವರ್ಷದ ಮೆಗಾ ಹರಾಜಿನಲ್ಲಿ ಯಾರು ಇವರನ್ನು ಖರೀದಿ ಮಾಡಿರಲಿಲ್ಲ. ಬದಲಿ ಆಟಗಾರರಾಗಿ ಈ ಆವೃತ್ತಿಯಲ್ಲಿ RCB ತಂಡಕ್ಕೆ ಆಯ್ಕೆ ಆಗಿದ್ದರು.

ಪಂದ್ಯದ ನಂತರ ಮಾತಾಡಿದ ಪಾಟೀದಾರ್ ” ನಾನು ಬೌಲ್ ಅನ್ನು ಉತ್ತಮ ಟೈಮಿಂಗ್ಸ್ ಅಲ್ಲಿ ಎದುರಿಸುತ್ತಿದ್ದೆ. ನನ್ನ ಗಮನ ಬೌಲ್ ಮೇಲೇನೆ ಕೇಂದ್ರೀಕರಿಸಿತ್ತು. ಪವರ್ ಪ್ಲೇ ಅಲ್ಲಿ ಕೊನೆಯ ಓವರ್ ಅಲ್ಲಿ ಕೃಣಾಲ್ ಪಾಂಡ್ಯ ಮಾಡುತ್ತಿರುವಾಗ ನಾನು ಮಾಡಿದ ಪ್ಲಾನ್ ಸಕ್ಸಸ್ ಆಯ್ತು. ಇದರಿಂದ ನನ್ನ ಆತ್ಮವಿಶ್ವಾಸ ಇನ್ನು ಹೆಚ್ಚಾಯಿತು. ನಾನು ಕೂಡ ಈ ಪಂದ್ಯದಲ್ಲಿ ಉತ್ತಮ ಆಟ ಕೂಡ ಆಡಿದೆ. ಯಾವುದೇ ಪ್ರೆಷರ್ ನನ್ನ ಮೇಲೆ ಇರಲಿಲ್ಲ. ನಾನು ಕಳೆದ ವರ್ಷ ಐಪಿಎಲ್ ನಂತರ ಕ್ಲಬ್ ಕ್ರಿಕೆಟ್ ಆಡಲು ಕೌತುಕನಾಗಿದ್ದೆ. ನಾನು ಇದಕ್ಕೆ ತುಂಬಾ ಕಾತುರಕೂಡ ಆಗಿದ್ದೆ. ಈ ಬಾರಿಯ ಐಪಿಎಲ್ ಅಲ್ಲಿ ನನ್ನನ್ನು ಯಾರು ಕೂಡ ಖರೀದಿ ಮಾಡಿಲ್ಲ. ಆದರೆ ಇದು ನನ್ನ ಹಿಡಿತದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಕೊನೆಗೆ ಇವರನ್ನು ಮೂಲ ಬೆಲೆ ೩೦ ಲಕ್ಷಕ್ಕೆ ಬೆಂಗಳೂರು ತಂಡ ಖರೀದಿ ಮಾಡಿತ್ತು.

Leave A Reply

Your email address will not be published.