ಹೈದರಬಾದ್ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ನಡೆಯಲಿದೆ ಮಹತ್ತರ ಬದಲಾವಣೆ.

319

ಸತತ ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ಪ್ಲೆಸಿಸ್ ನೇತೃತ್ವದ RCB ತಂಡ ಮುಂಬರುವ ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವ ಗುರಿ ಹೊಂದಿದೆ. ಇಲ್ಲಿಯವರೆಗೂ ಆಡಿರುವ ಒಟ್ಟು ೭ ಪಂದ್ಯದಲ್ಲಿ ಒಟ್ಟು ೫ ಪಂದ್ಯ ಗೆದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಕೇನ್ ವಿಲಿಯಮ್ ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಬಾದ್ ತಂಡ ಈ ಆವೃತ್ತಿಯಲ್ಲಿ ೬ ಪಂದ್ಯದಲ್ಲಿ ೪ ರಲ್ಲಿ ಗೆದ್ದು ಉತ್ತಮ ಪ್ರದರ್ಶನ ನೀಡುತ್ತಿದೆ. ಮುಂಬರುವ RCB ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಅಥವಾ ನಾಲ್ಕನೇ ಸ್ಥಾನದಲ್ಲಿ ಕಾಲಿಡಲಿ ಪರಿತಪಿಸುತ್ತಿದೆ.

ಇದರ ನಡುವೆ ಕಳೆದ ಲಖನೌ ತಂಡದ ವಿರುದ್ದ ಪಂದ್ಯದಲ್ಲಿ RCB ಬ್ಯಾಟ್ಸ್‌ಮನ್‌ ಗಳು ಸಂಪೂರ್ಣ ವೈಪಲ್ಯ ಕಂಡಿದ್ದು ತಂಡಕ್ಕೆ ದೊಡ್ಡ ಚಿಂತೆಯನ್ನುಂಟು ಮಾಡಿದೆ. ಆರಂಭಿಕ ಆಟಗಾರ ಅನುಜ್ ರಾವತ್ ಹೇಳಿಕೊಳ್ಳುವಂತಹ ಯಾವುದೇ ಆಟ ಆಡಿಲ್ಲ. ಅದೇ ರೀತಿ ವಿರಾಟ್ ಕೊಹ್ಲಿ ಕೂಡಾ ಯಾವುದೇ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಹೈದರಬಾದ ವಿರುದ್ದ ಪಂದ್ಯದಲ್ಲಿ ಅನುಜ್ ತಾವತ್ ಬದಲಿಗೆ ಮಹಿಪಾಲ್ ಲೊಮ್ರೋರ್ ಅವರು ಬರಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಲ್ಲದೇ ತಂಡ ಕೂಡಾ ರಾವತ್ ಗೆ ಅವಕಾಶ ನೀಡಲು ಹಿಂದೇಟು ಹಾಕುತ್ತಿದೆ. ಅನುಜ್ ರಾವತ್ ಕಳೆದ ಏಳು ಪಂದ್ಯದಲ್ಲಿ ೨೧,೦,೨೬,೬೬,೧೨,೦ ಹಾಗು ಕಳೆದ ಪಂದ್ಯದಲ್ಲಿ ಕೇವಲ ೪ ರನ್ ಗಳಿಸಲಷ್ಟೇ ಶಕ್ತರಾಗಿದ್ದರು‌. ಮುಂಬಯಿ ಪಂದ್ಯದಲ್ಲಿ ೬೧ ಗಳಿಸಿದಷ್ಟೇ ಅವರ ಗರಿಷ್ಠ ಸಾಧನೆ ಆಗಿದೆ

ಇನ್ನು ಪಂದ್ಯ ನಡೆಯುವ ಬ್ರಬೋರ್ನ್ ಕೂಡಾ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದ ಪಿಚ್ ಆಗಿದ್ದು, ಅದೇ ಕಾರಣಕ್ಕೆ ಮಹಿಪಾಲ್ ಲೊಮ್ರೋರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. RCB ಸಂಭಾವ್ಯ ತಂಡ ಈ ರೀತಿ ಇರಲಿದೆ – ಪಾಪ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ವಹಿಂದು ಹಸರಂಗ, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ಜಾಷ್ ಹೇಜಲ್‌ವುಡ್, ಅನುಜ್ ರಾವತ್ ಅಥವಾ ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್

Leave A Reply

Your email address will not be published.