ಹೈದೆರಾಬಾದ್ ಎದುರಿನ ಪಂದ್ಯದಲ್ಲೂ ಕೂಡ ಬ್ಯಾಟಿಂಗ್ ವೈಫಲ್ಯ ಕಂಡ ವಿರಾಟ್ ಕೊಹ್ಲಿ. ಇಂದಿನ ಪಂದ್ಯದಲ್ಲಿ RCB ರನ್ ಗಳಿಸಲು ಪರದಾಡುತ್ತಿದೆ.

328

RCB vs SRH ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ಸನ್ ರೈಸರ್ಸ್ ಹೈದೆರಾಬಾದ್ ನಡುವೆ ಇಂದು ಮುಂಬೈ ನ ಬೆಬೊರ್ನ್ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಬೆಂಗಳೂರು ತಂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ. ಆದರೂ ಕೂಡ ಹೇಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಯಲ್ ಚಾಲೆಂಜರ್ ತಂಡ ತನ್ನ ಹಿಂದಿನ ಪಂದ್ಯಗಳ ರೀತಿಯಲ್ಲಿಯೇ ಉತ್ಸಾಹ ಹುಮ್ಮಸ್ಸಿನಿಂದ ಆಟಕ್ಕಿಳಿದಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಂಡ ಕೇನ್ ವಿಲಿಯಂ ಸನ್ ಅವರ ನಿರ್ಧಾರ ಇದೀಗ ಸರಿಯಾಗಿದೆ ಎಂದು ಕಾಣುತ್ತಿದೆ. ಬೆಂಗಳೂರು ತಂಡ ಕೇವಲ ಹತ್ತು ರನ್ ಗಳಾಗುವಷ್ಟರಲ್ಲಿ ತನ್ನ ೩ ವಿಕೆಟ್ ಕಳೆದುಕೊಂಡು ಹೀನಾಯವಾಗಿದೆ. ಆರಂಭಿಕ ಆಟಗಾರ ಹಾಗು ನಾಯಕ ಪ್ಲೆಸಿಸ್ ೭ ಎಸೆತಗಳಲ್ಲಿ ಕೇವಲ ೫ ರನ್ ಗಳಿಸಿ ಔಟ್ ಆಗಿದ್ದರೆ. ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿಯೇ ಡಕ್ ಔಟ್ ಆಗಿದ್ದಾರೆ. ಇದಲ್ಲದೆ ಅನುಜ್ ರಾವತ್ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದಾರೆ.

ಇನೊಂದು ಕಡೆ ವಿಲಿಯಂ ಸನ್ ಅವರ ಹೈದೆರಾಬಾದ್ ತಂಡ ಆಡಿದ ೬ ಪಂದ್ಯಗಳಲ್ಲಿ ೪ ರಲ್ಲಿ ಗೆದ್ದು ೮ ಅಂಕಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ೫ ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಪಾಪ್ ದು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡ ೭ ಪಂದ್ಯಗಳಲ್ಲಿ ೫ ರಲ್ಲಿ ಗೆದ್ದು ಹಾಗು ೨ ರಲ್ಲಿ ಸೋತು ಒಟ್ಟು ೧೦ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುವುದಾದರೆ ಈ ಬಾರಿಯ ಐಪಿಎಲ್ ನಲ್ಲಿ ಆಡಿದ ೮ ಪಂದ್ಯಗಳಲ್ಲಿ ಒಟ್ಟು ರನ್ ಕೇವಲ ೧೧೯ ಅಷ್ಟೇ. ಇದು ಇಲ್ಲಿಯವರೆಗೆ ಆಡಿದ ಎಲ್ಲ ಐಪಿಎಲ್ ಆವೃತ್ತಿಯಲ್ಲಿಯೂ ಕೂಡ ಅತಿ ಕಡಿಮೆ ಆಗಿದೆ.

ವಿರಾಟ್ ಕೊಹ್ಲಿ ತಾವು ನಾಯಕತ್ವದ ಒತ್ತಡದಿಂದ ರನ್ ಗಳಿಸುತ್ತಿಲ್ಲ ಎಂದು ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೂ ಕೂಡ ನಾಯಕತ್ವ ತ್ಯಜಿಸಿದ್ದಾರೆ. ಆದರೂ ಕೂಡ ರನ್ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ ವಿರಾಟ್ ಕೊಹ್ಲಿ. ಇದಲ್ಲದೆ ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಕೂಡ ಸತತ ವೈಫಲ್ಯ ಅನುಭವಿಸುತ್ತಿದ್ದು ಭಾರತ ತಂಡದ ಇಬ್ಬರು ಮುಖ್ಯ ಆಟಗಾರರು ರನ್ ಗಳಿಸುವುದು ಪರದಾಡುವುದು ನೋಡಿ ದೇಶದ ಕ್ರಿಕೆಟ್ ಅಭಿಮಾನಿಗಳು ನಿರಾಶೆ ಗೊಂಡಿದ್ದಾರೆ.

Leave A Reply

Your email address will not be published.