ಹೋಟೆಲ್ ಕೂಡ ಬುಕ್ ಆಗಿತ್ತು, ಅಹ್ವಾನ ಕೂಡ ನೀಡಿದ್ದರು. RCB ಕರೆ ಬಂದಾಗ ಮದುವೆ ಮುಂದೂಡಿ ತನ್ನ ನಿರ್ಧಾರ ಸರಿ ಎಂದು ಸಾಬೀತು ಪಡಿಸಿದರು ರಜತ್ ಪಾಟೀದಾರ್.

625

ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೨ ರ ಎಲಿಮಿನೇಟರ್ ಅಲ್ಲಿ ಲಕ್ನೋ ತಂಡ ವಿರುದ್ಧ ಬೆಂಗಳೂರು ತಂಡದ ರಜತ್ ಪಾಟೀದಾರ್ ಸ್ಟಾರ್ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಪಾಟೀದಾರ್ ಕೇವಲ ೫೪ ಬಾಲ್ ಗಳಲ್ಲಿ ಅಜೇಯ ೧೧೨ ರನ್ ಗಳಿಸಿದರು. ಪಂದ್ಯದಲ್ಲಿ ನಾಯಕ ಫಾಫ್ ಸೊನ್ನೆ ಸುತ್ತಿ ಹಾಗೇನೇ ವಿರಾಟ್ ಕೊಹ್ಲಿ ಕೂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇಬ್ಬರನ್ನು ಕೂಡ ಔಟ್ ಮಾಡುವಲ್ಲಿ ಲಕ್ನೋ ಬೌಲರ್ ಗಳು ಸಫಲರಾದರು. ಆದರೆ ರಜತ್ ಪಾಟೀದಾರ್ ತಮ್ಮ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲಿಮಿನೇಟರ್ ಪಂದ್ಯ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಈ ಬಾರಿಯ ಮೆಗಾ ಹರಾಜಿನಲ್ಲಿ ರಜತ್ ಪಾಟೀದಾರ್ ಖರೀದಿಯಾಗಿಲ್ಲ ಎನ್ನುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಐಪಿಎಲ್ ಮದ್ಯದಲ್ಲಿ ಲವನೀತ್ ಸಿಸೋಡಿಯಾ ಅವರ ಬದಲಿಗೆ ಪಾಟೀದಾರ್ ಅವರನ್ನು ಅವರ ಮೂಲ ಬೆಲೆ ಕೇವಲ ೩೦ ಲಕ್ಷ ಕೊಟ್ಟು RCB ಖರೀದಿ ಮಾಡಿತ್ತು. ಇವರು ಎಲಿಮಿನೇಟರ್ ಪಂದ್ಯದಲ್ಲಿ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮುತ್ತಾರೆ ಎನ್ನುವುದು ಯಾರಿಗೆ ಗೊತ್ತಿತ್ತು? ಇವರು ತಂಡಕ್ಕೆ ಸೇರಿಕೊಳ್ಳುವುದರ ಹಿಂದೆಯೂ ಕೂಡ ಒಂದು ಅಚ್ಚರಿಯ ಹಾಗು ಶಾಕಿಂಗ್ ನಿರ್ಧಾರ ಕೂಡ ಇದೆ. ಇವರ ಈ ನಿರ್ಧಾರ ಸರಿ ಎಂದು ಇದೀಗ ಸಾಬೀತಾಗಿದೆ.

ಐಪಿಎಲ್ ಈ ಆವೃತ್ತಿಯಲ್ಲಿ ಹಾರಾಜಗದೇ ಉಳಿದಾಗ ರಜತ್ ಪಾಟೀದಾರ್ ತಮ್ಮ ಮದುವೆ ಗೆ ಸಮ್ಮತಿ ನೀಡಿದ್ದರು. ಮೇ ೯ಕ್ಕೆ ಮದುವೆ ಕೂಡ ನಿಗದಿಯಾಗಿತ್ತು. ಹೋಟೆಲ್ ಕೂಡ ಬುಕ್ ಆಗಿತ್ತು, ಹತ್ತಿರದ ಸಂಬಂಧಿಕರಿಗೆ ಅಹ್ವಾನ ಕೂಡ ಎಲ್ಲರಿಗು ಹಂಚಿಕೆಯಾಗಿತ್ತು ಆದರೆ RCB ಇಂದ ಕರೆ ಬಂದ ತಕ್ಷಣ ಮದುವೆ ಮುಂದೂಡಿ ತಂಡಕ್ಕೆ ಸೇರಿಕೊಂಡರು ರಜತ್ ಪಾಟೀದಾರ್. ಇದೆಲ್ಲ ವಿಷಯಗಳನ್ನು ಅವರ ತಂದೆಯೇ ಬಹಿರಂಗ ಪಡಿಸಿದ್ದಾರೆ. ಇದಕ್ಕೆ ರಜತ್ ಪಾಟೀದಾರ್ ಕೂಡ ಹೌದು ಎಂದು ಹೇಳಿದ್ದಾರೆ. ಇದೀಗ ಆ ಮದುವೆಯನ್ನು ಜೂಲೈ ಗೆ ಮುಂದೂಡಲಾಗಿದೆ. ಐಪಿಎಲ್ ನಂತರ ರಣಜಿ ಆಟದ ನಂತರ ಅವರು ತಮ್ಮ ಮದುವೆ ಮಾಡಿಕೊಳ್ಳಲಿದ್ದಾರೆ ಅಂತೇ.

Leave A Reply

Your email address will not be published.