ಅಪ್ಪಿ ತಪ್ಪಿ ಹೆಂಡತಿ ಮನೆಯಿಂದ ಹೊರಹೋದಾದ ಗಂಡಂದಿರು ಮನೆಯಲ್ಲಿ ಒಬ್ಬರೇ ಮಾಡುವ ಕೆಲಸಗಳು ಯಾವ್ಯಾವು ಗೊತ್ತೇ??

176

ನಮಸ್ಕಾರ ಸ್ನೇಹಿತರೇ ಗಂಡ ಹೆಂಡತಿಯರ ಸಂಬಂಧ ಎನ್ನುವುದು ಅತ್ಯಂತ ಪವಿತ್ರ ಸಂಬಂಧ ಎನ್ನುವುದಾಗಿ ಹೇಳುತ್ತಾರೆ. ಆದರೆ ಮದುವೆ ಆಗೋದಕ್ಕಿಂತ ಮುಂಚೆ ಗಂಡಂದಿರಿಗೆ ಇರುವ ಹವ್ಯಾಸಗಳು ಮದುವೆ ಆದ ನಂತರ ಅಂದರೆ ಹೆಂಡತಿ ಬಂದ ನಂತರ ಇರುವುದಿಲ್ಲ. ಹೀಗಾಗಿ ಹೆಂಡತಿ ಮನೆಯಿಂದ ಹೊರ ಹೋದಾಗ ಅಥವಾ ಮನೆಯಲ್ಲಿ ಇಲ್ಲದಿದ್ದಾಗ ಗಂಡಂದಿರು ಮಾಡುವ ಕೆಲವೊಂದು ಕೆಲಸಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿದ್ದೇವೆ ಇದನ್ನು ಹೆಂಡತಿಯರು ತಪ್ಪದೆ ಓದಲೇಬೇಕು. ಹಾಗಿದ್ದರೆ ಹೆಂಡತಿಯರು ಮನೆಯಲ್ಲಿ ಇಲ್ಲದಿದ್ದಾಗ ಗಂಡಂದಿರು ಮಾಡುವ 5 ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಗಂಟೆಗಟ್ಟಲೆ ಸ್ನಾನ ಮಾಡುವುದು; ಹೆಂಡತಿ ಮನೆಯಿಂದ ಹೊರ ಹೋದ ನಂತರ ಹಲವಾರು ಗಂಡಂದಿರು ನ್ಯೂಸ್ ಪೇಪರ್ ಲ್ಯಾಪ್ಟಾಪ್ ಅಥವಾ ಮೊಬೈಲ್ ಫೋನ್ ಗಳನ್ನು ಹಿಡಿದುಕೊಂಡು ಗಂಟೆಗಟ್ಟಲೆ ಸ್ನಾನ ಗ್ರಹದಲ್ಲಿ ಇರುತ್ತಾರೆ. ಅಥವಾ ಗಂಟೆಗಟ್ಟಲೆ ಸ್ನಾನ ಮಾಡುವುದು ಕೂಡ ಈ ಸಂದರ್ಭದಲ್ಲಿ ಸರ್ವೇಸಾಮಾನ್ಯವಾಗಿದೆ. ಇಂತಹ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದು ಸರ್ವೆಯಲ್ಲಿ ಕಂಡುಬಂದಿದೆ. ಇದು ವಿಚಿತ್ರಯೆಂದನಿಸಿದರು ಕೂಡ ನಿಜವಾದ ವಿಚಾರ ಆಗಿದೆ.

ಹಳೆಯ ಸ್ನೇಹಿತರೊಂದಿಗೆ ಹೆಚ್ಚಾಗಿ ಮಾತನಾಡುವುದು; ಮದುವೆಗೂ ಮುನ್ನ ಸ್ನೇಹಿತರೊಂದಿಗೆ ಬಿಂದಾಸ್ ಆಗಿ ಮಾತನಾಡಿಕೊಂಡಿದ್ದ ಪುರುಷರು ಮದುವೆ ಆದ ನಂತರ ಹೆಂಡತಿಯ ಕಾರಣಕ್ಕಾಗಿ ಯಾರನ್ನು ಹೆಚ್ಚಾಗಿ ಮಾತನಾಡಲು ಹೋಗುವುದಿಲ್ಲ ಹಾಗೂ ಅವರಿಗೆ ಅದಕ್ಕೆ ಸಮಯ ಕೂಡ ಇರುವುದಿಲ್ಲ. ಹೀಗಾಗಿ ಹೆಂಡತಿ ಮನೆಯಿಂದ ಹೊರಹೋದ ನಂತರ ಹೆಚ್ಚಾಗಿ ಅವರ ತಮ್ಮ ಹಳೆಯ ಸ್ನೇಹಿತರೊಂದಿಗೆ ಕರೆ ಮಾಡಿ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕುವ ಕೆಲಸವನ್ನು ಮಾಡುತ್ತಾರೆ. ತಮ್ಮ ಹಳೆಯ ಸ್ನೇಹಿತರೊಂದಿಗೆ ಮಾತನಾಡಲು ಇದೇ ಪ್ರಶಸ್ತವಾದ ಸಮಯ ಎಂಬುದು ಅವರಿಗೆ ತಿಳಿದಿದೆ ಹೀಗಾಗಿ ಇದೇ ಸಂದರ್ಭದಲ್ಲಿ ಅವರಿಗೆ ಕರೆ ಮಾಡುತ್ತಾರೆ.

ಟಿವಿಯಲ್ಲಿ ತಮ್ಮಿಷ್ಟದ ಕಾರ್ಯಕ್ರಮಗಳನ್ನು ವೀಕ್ಷಿಸುವುದು; ಹೆಂಡತಿ ಇದ್ದಾಗ ಕಂಡಿತವಾಗಿ ಅವರಿಗೆ ಇಷ್ಟವಾದ ಕಾರ್ಯಕ್ರಮಗಳನ್ನೇ ಇವರು ಕೂಡ ವೀಕ್ಷಿಸಬೇಕಾಗುತ್ತದೆ ಆದರೆ ಅವರು ಇಲ್ಲದಿದ್ದ ಸಂದರ್ಭದಲ್ಲಿ ತಮಗೆ ಬೇಕಾಗುವ ಚಲನಚಿತ್ರಗಳನ್ನು ಹಾಗೂ ಸ್ಪೋರ್ಟ್ಸ್ ಕಾರ್ಯಕ್ರಮಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ. ಕೆಲಸ ಮಾಡಿ ರೋಸಿ ಹೋಗಿರುವ ಜೀವನದಲ್ಲಿ ಮನರಂಜನೆ ಎನ್ನುವುದು ಬೇಕಾಗುತ್ತದೆ. ಹೀಗಾಗಿ ತಮಗಿಷ್ಟವಾದ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೋಡಲು ತಡೆ ಉಂಟಾದಾಗ ಹೆಂಡತಿ ಇಲ್ಲದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ ಇದೆ ಆಗಿರುತ್ತದೆ.

ಸ್ನೇಹಿತರೊಂದಿಗೆ ಪಾರ್ಟಿ; ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಮನೆಯಲ್ಲಿ ಪಾರ್ಟಿ ಮಾಡಲು ಆರಂಭಿಸುತ್ತಾರೆ. ಇದು ಕೇವಲ ಒಂದು ವೇಳೆ ಹೆಂಡತಿ ಹಲವಾರು ದಿನಗಳಿಗಾಗಿ ಮನೆಯಿಂದ ಹೊರ ಇದ್ದರೆ ಮಾತ್ರ ನಡೆಯುವ ಕಾರ್ಯಕ್ರಮ ಇದಾಗಿದೆ ಎನ್ನುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಹೀಗಾಗಿ ಇದು ಪ್ರತಿ ಬಾರಿ ನಡೆಯುತ್ತದೆ ಎಂಬುದನ್ನು ಹೇಳಲಿಕ್ಕೆ ಸಾಧ್ಯವಿಲ್ಲ.

ನೆಚ್ಚಿನ ಅಡುಗೆಯನ್ನು ಮಾಡಿ ಸವಿಯುವುದು; ಮದುವೆಗೂ ಮುನ್ನವೇ ಅಡುಗೆ ಮಾಡುವ ಹವ್ಯಾಸ ಇರುವವರು ಮದುವೆ ಆದ ಮೇಲೆ ಹೆಂಡತಿಯ ಕೈ ರುಚಿ ಅಡುಗೆಯನ್ನೇ ಊಟ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹೆಂಡತಿ ಸಾಕಷ್ಟು ದಿನಗಳಿಗೆ ಬೇರೆ ಕಡೆಗೆ ಹೊರಹೋದಾಗ ಅವರಿಗೆ ಮತ್ತೊಮ್ಮೆ ತಮ್ಮ ಇಷ್ಟವಾದ ಅಡುಗೆಯನ್ನು ಮಾಡಿ ತಿನ್ನುವಂತಹ ಅವಕಾಶ ಮೂಡಿಬರುತ್ತದೆ ಹಾಗೂ ಇದು ಅವರಿಗೆ ಇಷ್ಟ ಆಗುತ್ತದೆ. ಒಟ್ಟಾರೆಯಾಗಿ ಹೆಂಡತಿಯರು ಮನೆಯಿಂದ ಹೊರ ಹೋದಾಗ ಗಂಡಂದಿರು ಮಾಡುವ 5 ಕೆಲಸ ಕಾರ್ಯಗಳು ಇವೆ ಎಂಬುದಾಗಿ ಸರ್ವೆಯ ಮೂಲಕ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸ ಬಹುದಾಗಿದೆ.

Leave A Reply

Your email address will not be published.