ಮದುವೆಯಾಗಲು ಸರಿಯಾದ ವಯಸ್ಸೆಷ್ಟು? ಯಾವ ವಯಸ್ಸಲ್ಲಿ ಮದುವೆಯಾದರೆ ಒಳ್ಳೆಯದು? ಇಲ್ಲಿದೆ ಮಾಹಿತಿ.

130

ಮದುವೆ ಸೀಸನ್ ನಡೆಯುತ್ತಿದೆ. ಹಾಗೇನೇ ಮದುವೆ ಅಂದರೆ ಜೀವನದ ಒಂದು ತಿರುವು ಅಂದರೆ ತಪ್ಪಾಗಲಾರದು. ಹಾಗಿರುವಾಗ ಯಾವತ್ತೂ ಮದುವೆಯ ವಿಷಯದಲ್ಲಿ ಅವಸರ ಪಡಬಾರದು. ಅಸಡ್ಡೆ ಮಾಡಬಾರದು. ಭಾರತದ ಕಾನೂನು ಪ್ರಕಾರ ಮಹಿಳೆಯ ಮದುವೆ ವಯಸ್ಸು 18 ಹಾಗು ಪುರುಷರಿಗೆ 21. ಆದರೆ ಮದುವೆ ಎನ್ನುವುದು ಪ್ರಬುದ್ಧತೆ ಸಂಕೇತ ಕೂಡ ಆಗಿದೆ. ಆ ಸಮಯದಲ್ಲೇ ಮದುವೆ ನಡೆಯುತ್ತದೆ. ಭಾರತದಲ್ಲಿ ಇಂದು ಕೂಡ ಹೆಚ್ಚಾಗಿ ಕುಟುಂಬಸ್ಥರ ನಿರ್ಧಾರದ ಮೇಲೆ ಮದುವೆ ನಡೆಯುತ್ತದೆ.

ಬದಲಾಗುವ ಕಾಲಕ್ಕೆ ತಕ್ಕಂತೆ ಮದುವೆ ವಯಸ್ಸು ಕೂಡ ಬದಲಾಗುತ್ತ ಹೋಗುತ್ತದೆ. ಹಿಂದೆ ಬಾಲ್ಯ ವಿವಾಹ ಪದ್ಧತಿ ಇತ್ತು. ಅಂದಿನ ಸಂದರ್ಭಕ್ಕೆ ಅದು ನಿಯಮವಾಗಿತ್ತು. ಬದಲಾಗುತ್ತಿದ್ದಂತೆ, ಇಂದು ಮದುವೆ ವಯಸ್ಸು ಕೂಡ ಬದಲಾಗಿದೆ. ಇನ್ನು ಮುಂದೆ ಕೂಡ ಈ ಕಾನೂನು ಪ್ರಕಾರ ಮದುವೆ ವಯಸ್ಸು ಕೂಡ ಬದಲಾಗಬಹುದು. ಈ ಮದುವೆ ಎನ್ನುವುದು ಸಾಮಾಜಿಕ ಕಾಳಜಿ ಅಲ್ಲದೆ ಇದರಿಂದ ಮನುಷ್ಯನ ಜೀವನ ಸಮತೋಲನ ಗೊಳಿಸುತ್ತದೆ. ಹಾಗೇನೇ ಅನೇಕ ತೊಂದರೆಗಳಿಂದ ಕಾಪಾಡುತ್ತದೆ.

ಇನ್ನು ಮದುವೆ ಇಂದ ಏನು ಪ್ರಯೋಜನ ಎಂದು ಕೇಳಿದರೆ, ಖಿನ್ನತೆ ಎನ್ನುವುದು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಆದರೆ ಈ ಖಿನ್ನತೆಗೆ ಪರಿಹಾರ ವಿವಾಹ ಕೂಡ ಒಂದು. ವ್ಯಕ್ತಿ ಯಾವ ಸಮಸ್ಯೆ ಇಂದ ನರಳುತ್ತಿದ್ದಾನೆ ಎನ್ನುವುದು ಯಾರ ಬಳಿಯೂ ಹೇಳಲಾಗದೆ ಇದ್ದ ಸಮಯದಲ್ಲಿ ಪತಿ,ಪತ್ನಿ ಜೊತೆ ನೋವನ್ನು ಹಂಚಿಕೊಳ್ಳಬಹುದು. ಇದರಿಂದ ವ್ಯಕ್ತಿಗೆ ಸ್ವಲ್ಪ ದುಃಖ ಕಡಿಮೆ ಆಗಬಹುದು.

ಬ್ರಹ್ಮಚಾರಿ ವ್ಯಕ್ತಿಗಳು ಹಣವನ್ನು ಉಳಿತಾಯ ಮಾಡದೇ, ಖರ್ಚನ್ನು ಸಿಕ್ಕಾಪಟ್ಟೆ ಮಾಡುತ್ತಾರೆ. ಆದರೆ ಮದುವೆ ಆದ ಬಳಿಕ ಜವಾಬ್ದಾರಿ ಹೆಚ್ಚಾಗುತ್ತೆ ಹಾಗೇನೇ ಅನಗತ್ಯ ಖರ್ಚಿನ ಮೇಲೆ ನಿಗಾ ಇಡುತ್ತಾನೆ. ಉಳಿತಾಯ ಮಾಡಲು ದಾರಿ ಹುಡುಕುತ್ತಾನೆ. ಇನ್ನು ವೃದಾಪ್ಯ ತಲುಪುವ ಮೊದಲು ನೀವು ಮಕ್ಕಳು ಮಾಡಿಕೊಂಡರೆ, ನಿಮ್ಮ ವೃಪ್ಯ ಸಮಯದಲ್ಲಿ ನಿಮ್ಮನ್ನು ನೋಡಿಕೊಳ್ಳಲು ನಿಮ್ಮ ಮಕ್ಕಳು ಇರುತ್ತಾರೆ. ಆ ಸಮಯದಲ್ಲಿ ಯಾವುದೇ ಸಮಸ್ಯೆ ಬಂದರೆ ನಿಮ್ಮ ಬಳಿ ನಿಮ್ಮ ಮಕ್ಕಳು ಇರುತ್ತಾರೆ.

Leave A Reply

Your email address will not be published.