ನಿದ್ರೆ ಮಾಡದೇ ಮನುಷ್ಯ ಎಷ್ಟು ದಿನ ಬದುಕಬಹುದು? ಬನ್ನಿ ತಿಳಿಯೋಣ ಇದರ ವೈಜ್ಞಾನಿಕ ಉತ್ತರ.

358

How Many days can a human live without sleeping- ಪೂರ್ತಿ ದಿನ ಕೆಲಸ ಮಾಡಿ, ರಾತ್ರಿ ಬೆಡ್ ಗೆ ಹೋಗುವಾಗ ಅರಮದಲ್ಲಿ, ನೆಮ್ಮದಿಯ ನಿದ್ದೆ ಮಾಡುತ್ತಾನೆ. ನಿದ್ರೆಯು ದೈಹಿಕ ಆಯಾಸ ಮಾತ್ರವಲ್ಲದೆ, ಮಾನಸಿಕ ಆಯಾಸವನ್ನು ಕೂಡ ಹೋಗಲಾಡಿಸುತ್ತದೆ. ವ್ಯಕ್ತಿಯು ಮರುದಿನ ಉತ್ತಮ ಮನಸಿಕತೆಯಿಂದ ತನ್ನ ದೈನಂದಿನ ವ್ಯವಹಾರಗಳಲ್ಲಿ ತೊಡಗುತ್ತಾನೆ.

ಆದರೆ ಒಬ್ಬ ವ್ಯಕ್ತಿಯು ನಿದ್ದೆ ಮಾಡದೇ ಅಥವಾ ಕಡಿಮೆ ನಿದ್ರೆ ಮಾಡಿ ಕೆಲಸನೇ ಮಾಡುತ್ತಿದ್ದರೆ, ಅವನ ಮಾನಸಿಕ, ದೈಹಿಕ ಆರೋಗ್ಯವು ಹದಗೆಡಲು ಪ್ರಾರಂಭವಾಗುತ್ತದೆ. ಒಳ್ಳೆಯ ಆಹಾರದ ಜೊತೆಗೆ ಒಬ್ಬ ವ್ಯಕ್ತಿಗೆ ಒಳ್ಳೆಯ ನಿದ್ರೆಯು ಬೇಕು. ಒಂದು ವೇಳೆ ನಿದ್ರೆ ಬಿಟ್ಟರೆ, ಆ ಮನುಷ್ಯ ಏನಾಗಬಹುದು? ಎಷ್ಟು ದಿನ ಬದುಕಬಹುದು? ಅದರ ಉತ್ತರ ನಾವು ಇಂದು ನಿಮಗೆ ಹೇಳುತ್ತೇವೆ.

ನಿದ್ದೆ ಮನುಷ್ಯನಿಗೆ ಅತಿ ಮುಖ್ಯ. ನಿದ್ದೆ ಬರದೇ ಇದ್ದಾರೆ ಅದರ ಪರಿಣಾಮ ನಮಗೆ ಸದ್ಯಕ್ಕೆ ಗೊತ್ತಾಗದೆ ಇದ್ದರು ಕೂಡ, ಅದರ ಸೈಡ್ ಎಫೆಕ್ಟ್ ಗಳು ನಮಗೆ ಗೊತ್ತಾಗುತ್ತದೆ. ಇದರ ನೇರ ಪರಿಣಾಮ ಮನಸು ಮತ್ತು ದೇಹದ ಮೇಲೆ ಬೀಳುತ್ತದೆ. ವ್ಯಕ್ತಿಯು ಹುಚ್ಚ ಕೂಡ ಆಗಬಹುದು. ವೈದ್ಯರ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ ೭-೮ ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದರಿಂದ ಅವನ ದೇಹ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ. ಇಲ್ಲದೆ ಇದ್ದರೆ, ನಮ್ಮ ರೋಗನಿರೋಧಕ ಶಕ್ತಿ, ಹಾರ್ಮೋನುಗಳು ಹಾಗು ಹೃದಯದ ಮೇಲೆ ಪರಿಣಾಮ ಬೀರುತ್ತದೆ.

ನಿದ್ರೆಯ ಕೊರತೆ ಇಂದಾಗಿ ವ್ಯಕ್ತಿಯ ನಡುವಳಿಕೆ ಬದಲಾಗುತ್ತದೆ. ಎಲ್ಲದರಲ್ಲೂ ಕಿರಿಕಿರಿ ಉಂಟಾಗುತ್ತದೆ. ಸದಾ ಹಾಗು ಬೇಗ ಕೋಪಗೊಳ್ಳುತ್ತಾನೆ. ಕೆಲಸ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಮನುಷ್ಯರು ಏಕೆ ನಿದ್ರೆ ಮಾಡುತ್ತಾರೆ ಎನ್ನುವುದನ್ನು ತಿಳಿಯಲು ಅನೇಕ ವಿಜ್ಞಾನಿಗಳು ಪರೀಕ್ಷೆ ಮಾಡಿದ್ದಾರೆ. ಇಲ್ಲಿಯವರೆಗೆ ಇದರ ಪ್ರಮುಖ ಕಾರಣಗಳು ತಿಳಿದು ಬಂದಿಲ್ಲ. ಆದರೆ ದೇಹ ದಣಿದಿದ್ದರೆ, ಅವನಿಗೆ ಹಾರ್ಮೋನುಗಳು ನಿದ್ರೆ ಯ ಸಂದೇಶ ನೀಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ವಾಸ್ತವಾಗಿ, ಸೂರ್ಯ ಮುಳುಗಿದಾಗ, ಆಕಾಶವು ಕೆಂಪು ಮತ್ತು ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಒಬ್ಬ ವ್ಯಕ್ತಿಯು ಈ ಬಣ್ಣಗಳನ್ನು ನೋಡಿದಾಗ, ಕಣ್ಣಿನಲ್ಲಿರುವ ರೇಟಿನ ಸಕ್ರಿಯವಾಗುತ್ತದೆ. ಆಗ ಮಾನವನ ದೇಹದಲ್ಲಿ ಮೆಲಾಟೊನಿನ್ ಹಾರ್ಮೋನುಗಳು ಉತ್ಪತ್ತಿ ಆಗುತ್ತದೆ. ಇದು ಹೆಚ್ಚಾಗಲು ಪ್ರಾರಂಭ ಆಗುತ್ತದೆ. ಇದರಿಂದ ಮನುಷ್ಯನಿಗೆ ನಿದ್ರೆ ಮಾಡುವಂತೆ ಭಾಸವಾಗುತ್ತದೆ.

ಮನುಷ್ಯನಿಗೆ ಬದುಕಲು ಆಹಾರ, ನೀರು ಗಾಳಿ ಬಹು ಮುಖ್ಯ. ಆದರೆ ಇವುಗಳ ಜೊತೆಗೆ ನಿದ್ರೆ ಕೂಡ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯು ನಿದ್ರೆ ನಿಲ್ಲಿಸಿದರೆ, ಆರಂಭದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆದರೆ ದಿನ ಕಳೆದಂತೆ ಕಿರಿಕಿರಿ ಹಾಗು ಒತ್ತಡ ಕಂಡು ಬರಲು ಪ್ರಾರಂಭ ಆಗುತ್ತದೆ. ಒಬ್ಬ ವ್ಯಕ್ತಿಯು ೨-೩ ದಿನ ವರೆಗೆ ನಿದ್ದೆ ಮಾಡದೇ ಇದ್ದರೆ ಈ ಸಾಮಾನ್ಯ ತೊಂದರೆ ಅನುಭವಿಸಬೇಕಾಗುತ್ತದೆ.

೪-5 ದಿನ ನಿದ್ರೆ ಬಿಟ್ಟರೆ, ಅಶಾಂತಿ ಹಾಗು ಹೆದರಿಕೆ ಅನುಭವ ಮಾಡುತ್ತಾನೆ. ಈ ಸ್ಥಿತಿ ೭-೮ ದಿನಕ್ಕೆ ಮುಂದುವರೆದರೆ, ಮಾನವನ ದೇಹವು ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ. 11 ದಿನ ನಿದ್ದೆ ಬಿಟ್ಟರೆ ಮಾನವ ಹುಚ್ಚನಾಗುತ್ತಾನೆ. ಕಿರುಚಾಟ, ಕೂಗಲು ಪ್ರಾರಂಭ ಮಾಡಬಹುದು. 12 ದಿನಕ್ಕೆ ವ್ಯಕ್ತಿಯ ದೇಹವು ನಿದ್ದೆ ಮಾಡದೇ ಸೋಲನ್ನು ಒಪ್ಪಿಕೊಂಡು ಪ್ರಾಣ ಕೂಡ ಹೋಗಬಹುದು.

ವ್ಯಕ್ತಿಯು ೧ ತಿಂಗಳು ಆಹಾರ ಇಲ್ಲದೆ ಬದುಕಬಹುದು. ೭-೧೦ ದಿನ ನೀರಿಲ್ಲದೆ ಬದುಕಬಹುದು. ಹಾಗೇನೇ ನಿದ್ರೆ ಇಲ್ಲದೆ ಮಾನವ ೧೨ ದಿನಗಳ ವರೆಗೆ ಬದುಕಬಹುದು. ಇದೆ ಕಾರಣಕ್ಕೆ ನಿದ್ದೆ ಮನುಷ್ಯನಿಗೆ ಮುಖ್ಯ. ಮೊಬೈಲ್ ನೋಡುವುದನ್ನು ನಿಲ್ಲಿಸಿ ಅಥವಾ ದಿನಾಲೂ ಪಾರ್ಟಿ ಮಾಡುವುದನ್ನು ನಿಲ್ಲಿಸಿ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ಅವಶ್ಯಕ.

Leave A Reply

Your email address will not be published.