ನಿರ್ಮಾಣ ಹಂತದಲ್ಲಿ ಇರುವ ಕಟ್ಟಡವನ್ನು ಹಸಿರು ಬಣ್ಣದ ಬಟ್ಟೆಯಿಂದ ಏಕೆ ಮುಚ್ಚಲಾಗುತ್ತದೆ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.

291

ದೊಡ್ಡ ದೊಡ್ಡ ನಗರಗಳಲ್ಲಿ ಬಹುಮಹಡಿ ಕಟ್ಟಡಗಳಿವೆ. ಇವುಗಳನ್ನು ನಿರ್ಮಿಸಲು ಅನೇಕ ವರ್ಷಗಳ ಧೀರ್ಘ ಸಮಯ ತಗೊಳುತ್ತದೆ. ಅಂತಹ ಸಮಯದಲ್ಲಿ ಈ ಕಟ್ಟಡ ನಿರ್ಮಾಣ ಮಾಡುವಾಗ ಹಾಗು ನಿರ್ಮಾಣ ಮುಗಿಯುವ ತನಕ ಈ ಕಟ್ಟಡಗಳನ್ನು ಹಸಿರು ಬಟ್ಟೆಯಲ್ಲಿ ಮುಚ್ಚಿಡುತ್ತಾರೆ. ಅದಕ್ಕೆ ಕಾರಣವೇನು ಎಂದು ಕುತೂಹಲ ನಿಮಗೂ ಮೂಡಿರಬಹುದು. ಇದರ ಹಿಂದಿನ ಕಾರಣ ನಿಮಗೆ ನಾವು ಹೇಳುತ್ತೇವೆ.

ಯಾವುದೇ ಮನೆ ಅಥವಾ ಬಹುಮಹಡಿ ಕಟ್ಟಡವನ್ನು ನಿರ್ಮಿಸುವಾಗ ಅದನ್ನು ಹಸಿರು ಬಟ್ಟೆಯಿಂದ ಅಥವಾ ಪರದೆಯಿಂದ ಮುಚ್ಚಲಾಗುತ್ತದೆ. ಇದರಿಂದ ಕಟ್ಟಡದಲ್ಲಿ ಕೆಲಸ ಮಾಡುವ ಕಾರ್ಮಿಕರ ಗಮನ ಬೇರೆಡೆ ಹೊಂದುವುದನ್ನು ತಪ್ಪಿಸಲಾಗುತ್ತದೆ. ಹಾಗೇನೇ ಕಾರ್ಮಿಕರು ಎತ್ತರದಿಂದ ಕೆಳಗೆ ನೋಡುವುದನ್ನು ತಡೆಯಲಿ ಈ ಪದ್ಧತಿ ಅನುಸರಿಸಲಾಗುತ್ತದೆ. ಕಾರ್ಮಿಕರು ಮೇಲಿಂದ ಕೆಳಗೆ ನೋಡುವುದರಿಂದ ಹೆದರುತ್ತಾರೆ ಹಾಗು ತಲೆ ತಿರುಗಿ ಬೀಳಬಹುದು ಎನ್ನುವ ಉದ್ದೇಶ ಕೂಡ ಇದರ ಹಿಂದೆ ಇದೆ.

ಇದು ಕೇವಲ ಕೆಲಸಗಾರರ ಹಿತ ದೃಷ್ಟಿ ಇಂದ ಅಲ್ಲದೆ, ಸರಕಾರದ ಮಾರ್ಗಸೂಚಿಯಲ್ಲಿ ಕೂಡ ಹಸಿರು ಪರದೆ ಮುಚ್ಚಬೇಕೆನ್ನುವ ನಿಯಮ ಇದೆ. ಕಾರಣ ಈ ಕಟ್ಟಡ ಕಟ್ಟುವಾಗ ಇಲ್ಲಿಂದ ಮಣ್ಣು, ಸಿಮೆಂಟ್, ಕಲ್ಲು ಮುಂತಾದ ವಸ್ತುಗಳು ದಾರಿಯಲ್ಲಿ ಹೋಗುವ ಜನರ ಮೇಲೆ ಬೀಳಬಾರದು ಎನ್ನುವ ಉದ್ದೇಶದಿಂದ ಕೂಡ ಈ ಪರದೆ ಹಾಕಲಾಗುತ್ತದೆ. ಅಲ್ಲದೆ ಈ ಕಟ್ಟಡಗಳಿಂದ ಧೂಳುಗಳು ಹೊರಗೆ ಬರಬಹುದು, ವಾಹನದಲ್ಲಿ ಹೋಗುವ ಸವಾರರ ಕಣ್ಣಿಗೆ ಬಿದ್ದು ಅಪಘಾತ ಆಗಬಾರದು ಎನ್ನುವ ದೃಷ್ಟಿ ಇಂದ ಕೂಡ ಈ ಪರದೆ ಹಾಕಲಾಗುತ್ತದೆ.

ಇನ್ನು ಬಟ್ಟೆಯ ಬಣ್ಣ ಹಸಿರು ಮಾತ್ರ ಯಾಕೆ ಇರುತ್ತದೆ ಎನ್ನುವ ಪ್ರಶ್ನೆ ಕೂಡ ನಿಮ್ಮಲ್ಲಿ ಇರಬಹುದು. ಬೇರೆ ಬಣ್ಣಗಳು ಹಸಿರು ಬಣ್ಣಗಳಿಂದ ವಿಭಿನ್ನ. ಬೇರೆ ಬಣ್ಣಗಳು ರಾತ್ರಿ ಸಮಯದಲ್ಲಿ ಉತ್ತಮವಾಗಿ ಗೋಚರವಾಗುವುದಿಲ್ಲ. ಆದರೆ ಹಸಿರು ಬಣ್ಣ ಹಗಲು ಹಾಗು ರಾತ್ರಿ ಉತ್ತಮವಾಗಿ ಬೆಳಕಿಗೆ ಗೋಚರವಾಗುತ್ತದೆ. ಇದೆ ಕರಣಕ್ಕಾಗು ಹಸಿರು ಬಣ್ಣವನ್ನು ಹೆದ್ದಾರಿ ಬದಿಯಲ್ಲಿರುವ ಬೋರ್ಡ್ ಗಳಿಗೂ ಹಾಕಲಾಗುವುದು.

Leave A Reply

Your email address will not be published.