ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೂ ಮುನ್ನವೇ ವಿರಾಟ್ ಬಗ್ಗೆ ಕಠಿಣ ಮಾತುಗಳನ್ನು ಆಡಿದ ಮಾಜಿ ಕೋಚ್ ರವಿ ಶಾಸ್ತ್ರೀ. ಬೇಕಿತ್ತಾ ಇವೆಲ್ಲ?

106

ವಿರಾಟ್ ಕೋಹ್ಲಿ ಪ್ರಪಂಚದ ಅತ್ಯಂತ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಎನ್ನುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಆದರೆ 2019ರ ಬಳಿಕ ಕೋಹ್ಲಿ ಅವರು ಕಳಪೆ ಫಾರ್ಮ್ ಅನುಭವಿಸುತ್ತಿದ್ದಾರೆ. 2019ರ ನವೆಂಬರ್ 23ರಂದು ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಕೋಹ್ಲಿ ಅವರು ಕೊನೆಯ ಬಾರಿಗೆ ಶತಕ ಗಳಿಸಿದರು, ಅದಾದ ಬಳಿಕ ಅವರ ಬೆಸ್ಟ್ ಸ್ಕೋರ್ 79 ಆಗಿದ್ದು, ಶತಕ ಗಳಿಸಿಲ್ಲ. 18 ಟೆಸ್ಟ್ ಪಂದ್ಯಗಳು ಆಡಿ, 32 ಇನ್ನಿಂಗ್ಸ್ ಗಳಲ್ಲಿ ಕೋಹ್ಲಿ ಅವರು 872 ರನ್ ಗಳಿಸಿದ್ದಾರೆ. ಕೋಹ್ಲಿ ಅವರು ಈ ಬಾರಿ ಒಂದು ತಿಂಗಳ ವಿಶ್ರಾಂತಿ ಪಡೆದು, ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಈ ಬಾರಿ ಕೋಹ್ಲಿ ಅವರ ಮೇಲೆ ಎಲ್ಲರಿಗೂ ಭಾರಿ ನಿರೀಕ್ಷೆ ಇದೆ..

ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಅವರು ವಿರಾಟ್ ಕೋಹ್ಲಿ ಅವರ ಫಾರ್ಮ್ ಬಗ್ಗೆ ಕೆಲವು ಕಠಿಣವಾದ ಮಾತುಗಳನ್ನಾಡಿದ್ದಾರೆ. “ಇತ್ತೀಚೆಗೆ ನಾನು ವಿರಾಟ್ ಕೋಹ್ಲಿ ಜೊತೆಗೆ ಮಾತನಾಡಿಲ್ಲ. ದೊಡ್ಡ ವ್ಯಕ್ತಿಗಳು ಸರಿಯಾದ ಸಮಯಕ್ಕೆ ಹಿಂದಿರುಗಿ ಬರುತ್ತಾರೆ. ಇಷ್ಟು ದಿನಗಳು ವಿರಾಟ್ ಕೋಹ್ಲಿ ಕಳಪೆ ಫಾರ್ಮ್ ನಲ್ಲಿ ಇದ್ದದ್ದು, ಬೇರೆ. ಈಗ ಶುರುವಾಗುವ ಪಾಕಿಸ್ತಾನ್ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅರ್ಧಶತಕ ಗಳಿಸಿದರೆ ಎಲ್ಲಾ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ ಹಾಗೆ ಆಗುತ್ತದೆ. ಒಂದು ಇನ್ನಿಂಗ್ಸ್ ದೊಡ್ಡ ಬದಲಾವಣೆಯನ್ನೇ ಮಾಡಬಹುದು. ಆತನಲ್ಲಿರುವ ರನ್ ಹಸಿವು ಕಡಿಮೆ ಆಗಿಲ್ಲ, ಅದು ಸರಿ ಹೋಗಲು ಒಂದು ಒಳ್ಳೆಯ ಇನ್ನಿಂಗ್ಸ್ ಬೇಕು.

ಹಿಂದೆ ನಡೆದಿದ್ದೆಲ್ಲವು ಇತಿಹಾಸ. ಆ ವ್ಯಕ್ತಿಯ ಸಾರ್ವಜನಿಕ ಸ್ಮರಣೆ ಬಹಳ ಚಿಕ್ಕದು ಎನ್ನುವುದು ನೆನಪಿನಲ್ಲಿ ಇಡಬೇಕು. ಭಾರತ ತಂಡದ ಅತ್ಯಂತ ಫಿಟ್ ಆಟಗಾರ ವಿರಾಟ್ ಕೋಹ್ಲಿ. ಕೆಲಸದ ನೀತಿ ಮತ್ತು ತರಬೇತಿಯನ್ನು ವಿರಾಟ್ ಅವರ ರೀತಿಯಲ್ಲಿ ಯಾರು ಪಡೆಯಲು ಸಾಧ್ಯವಿಲ್ಲ. ಕೋಹ್ಲಿ ಖಂಡಿತವಾಗಿ ಅತ್ಯುತ್ತಮವಾದ ಫಾರ್ಮ್ ಗೆ ಮರಳಿ ಬರುತ್ತಾರೆ. ಅವರ ಕ್ರೀಡಾ ಉತ್ಸಾಹ ನಂಬಲು ಅಸಾಧ್ಯವಾದದ್ದು..” ಎಂದು ಹೇಳಿದ್ದಾರೆ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಅವರು. ಒಟ್ಟಿನಲ್ಲಿ ಎಲ್ಲರೂ ಸಹ ವಿರಾಟ್ ಕೋಹ್ಲಿ ಅವರು ಫಾರ್ಮ್ ಗೆ ಮರಳುವುದನ್ನೇ ಕಾಯುತ್ತಿದ್ದಾರೆ. ಆಗಸ್ಟ್ 28ರಂದು ನಡೆಯುವ ಪಂದ್ಯದಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.