ಕೊರೋನಾ ಲಸಿಕೆ ಬಗ್ಗೆ ಬಂದಿದೆ‌ ಅಚ್ಚರಿಯ ವರದಿ.ಬದಲಾಗಲಿದೆ ಲಸಿಕೆ ನೀಡುವ ವಿಧಾನ.

1,258

ಕೊರೋನಾ ಸೋಂಕು ಇಡೀ ವಿಶ್ವಕ್ಕೆ ತಗುಲಿ ಎರಡು ವರ್ಷಗಳೇ ಕಳೆದಿವೆ. ಇನ್ನೂ ಅದು ನಿಲ್ಲುವ ಸೂಚನೆ ಕಾಣುತ್ತಿಲ್ಲ. ನಮ್ಮ ದೇಶದಲ್ಲಿ ಮೊದಲ ಅಲೆ ಅನ್ನು ಸಮರ್ಥವಾಗಿ ಎದರುಸಿದ ನಂತರ ಎರಡನೇ‌ಅಲೆ ಬಗ್ಗೆ ಸ್ವಲ್ಪ ಜನರು ಹಾಗು ಸರಕಾರಗಳು ಅಸಡ್ಡೆ ಮಾಡಿದರ ಪರಿಣಾಮ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ಕಹಿ ನೆನಪುಗಳ ಜೊತೆ ಮೇಡ್ ಇನ್ ಇಂಡಿಯಾ ದಲ್ಲಿ ಎರಡೆರಡು ಲಸಿಕೆಗಳು ಭಾರತ ಕಂಡುಹಿಡಿದವು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇಟ್ಟ ಎರಡು ಲಸಿಕೆಗಳು. ಕೋವಿಶೀಲ್ಡ್ ಹಾಗು ಕೋವಾಕ್ಸಿನ್. ಭಾರತದಲ್ಲಿ ಎರಡನೇ ಅಲೆ ಬಂದಾಗ ಈ ಲಸಿಕೆಗಳು ಭಾರತದಲ್ಲಿ ಬೇಡಿಕೆ ಹೆಚ್ಚಾಯಿತು. ಇದರಿಂದ ವಿದೇಶಕ್ಕೆ ಕಳುಹಿಸುವುದನ್ನು ನಿಲ್ಲಿಸಿ ಭಾರತದಲ್ಲಿ ಜನರಿಗೆ ನೀಡಲು ಭಾರತ ಸರಕಾರ ಯೋಜನೆ ನಿರೂಪಿಸಿತು.

ಭಾರತದಲ್ಲಿನ ಈ ಲಸಿಕೆಗಳು ಸಮರ್ಥ ವಾಗಿ ಕೊರೋನಾ ವಿರುದ್ಧ ಕಾರ್ಯ ನಿರ್ವಹಿಸುತ್ತದೆ ಎಂದು ವರದಿಗಳು ಹೇಳಿದ ನಂತರ ಭಾರತದಲ್ಲಿ ಲಸಿಕೆಯ ಬೇಡಿಕೆ ಹೆಚ್ಚಾಯಿತು. ಇದಕ್ಕೆ ಪ್ರತಿಯಾಗಿ ಭಾರತದ ಎರಡು ಲಸಿಕೆಗಳ ಉತ್ಪಾದನೆ ಕೂಡಾ ಕಡಿಮೆಯಾಯಿತು. ಈ ಬೇಡಿಕೆಗಳನ್ನು ಪೂರೈಸಲು ಭಾರತ ಸರಕಾರ ರಷ್ಯಾದ ಸ್ಪಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿತು. ಈಗ ಭಾರತದಲ್ಲಿ ಲಸಿಕೆಯಲ್ಲಿ ಯಾವುದೇ ಕೊರತೆ ಇಲ್ಲದೆ ಸಮರ್ಥವಾಗಿ ೪೩ಕೋಟಿ + ಜನರಿಗೆ ಲಸಿಕೆ ನೀಡಲಾಗಿದೆ. ಈಗ ಒಂದು ಹೊಸ ವರದಿ‌ ಅಚ್ಚರಿಯ ಸಂಗತಿ ತಿಳಿಸಿದೆ.

ಭಾರತದಲ್ಲಿ ನ ಕೋವಿಶೀಲ್ಡ್ ಅಂದರೆ ಬ್ರಿಟನ್ ನ ಅಸ್ಟ್ರಾಜೆನೆಕಾ ಹಾಗು ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಬೆರೆಸಿದರೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಸಂಶೋಧನಾ ವರದಿ ಬಂದಿದೆ. ಮೊದಲ ಲಸಿಕೆ ಸ್ಪುಟ್ನಿಕ್ ಹಾಗು ಎರಡನೇ ಲಸಿಕೆ ಕೋವಿಶೀಲ್ಡ್ ನೀಡುವ ಮೊದಲ ಅಧ್ಯಯನ ಅಜೈರ್‌ಬೈಜನ ದೇಶದಲ್ಲಿ ನಡೆಯಿತು. ಈ ತರಹ ಸುಮಾರು ೫೦ ಜನರಿಗೆ ನೀಡಲಾಯಿತು. ಈ ಪ್ರಯೋಗದಲ್ಲಿ ಯಾರಿಗೂ ಸಮಸ್ಯೆ ಉಂಟಾಗಲಿಲ್ಲ ಎಂದು ಸ್ಪುಟ್ನಿಕ್ ಲಸಿಕೆ ಮಾರಾಟಮಾಡುವ RDIF ಕಂಪೆನಿ ತಿಳಿಸಿದೆ.

Leave A Reply

Your email address will not be published.