ಜಿಂಬಾಬ್ವೆ ವಿರುದ್ಧ ಗೆದ್ದ ಭಾರತ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ. ಸೆಮಿಫೈನಲ್ ಅಲ್ಲಿ ಈ ತಂಡದ ಎದುರು ಸವಾಲೊಡ್ಡಲಿದೆ ಭಾರತ.

984

ICC T20 World Cup ಲೀಗ್ ಹಂತದ ಕೊನೆಯ ಪಂದ್ಯ ಇಂದು ಭಾರತ ಹಾಗು ಜಿಂಬಾಬ್ವೆ ನಡುವಣ ನಡೆಯಿತು. ಈ ಪಂದ್ಯದಲ್ಲಿ ಭಾರತ 71 ರನ್ ಗಳ ಅಂತರದಲ್ಲಿ ಗೆದ್ದು ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದೆ. ಇದು ಮಾತ್ರ ಅಲ್ಲದೆ ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋತು ನಾಲ್ಕರಲ್ಲಿ ಗೆದ್ದು ಎಂಟು ಅಂಕ ಪಡೆದು ಅತಿ ಹೆಚ್ಚು ಪಂದ್ಯ ಗೆದ್ದ ತಂಡವಾಗಿ ಹೊರಹೊಮ್ಮಿದೆ. ಭಾರತ ದೊಂದಿಗೆ ಪಾಕಿಸ್ತಾನ ಕೂಡ ಸೆಮಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.

ಸೌತ್ ಆಫ್ರಿಕಾ (South Africa) ನೆದರ್ಲ್ಯಾಂಡ್ ವಿರುದ್ಧ ಸೋಲುವುದರ ಮುಖಾಂತರ, ಪಾಕಿಸ್ತಾನ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಇನ್ನು ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್ ಮೊದಲನೇ ಸ್ಥಾನದಲ್ಲಿ ಇದ್ದರೆ, ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿ ಬರುವ ಮೂಲಕ ಆಸ್ಟ್ರೇಲಿಯಾ ಸೆಮಿ ಫೈನಲ್ ತಲುಪುವ ಆಸೆಗೆ ನೀರೆರಚಿದೆ. ಇದೀಗ ಯಾವ ತಂಡ ಯಾರ ವಿರುದ್ಧ ಸೆಮಿಫೈನಲ್ ಆಡಲಿದೆ ಎನ್ನುವ ಕುತೂಹಲಕ್ಕೆ ಉತ್ತರ ಈಗಾಗಲೇ ಸಿಕ್ಕಿರಬಹುದು. ಗೊತ್ತಿಲ್ಲದವರಿಗೆ ಈ ಮಾಹಿತಿ.

file pic – hindustan times

ಗ್ರೂಪ್ 1 ರಲ್ಲಿ ಆಗ್ರಾ ಸ್ಥಾನದಲ್ಲಿ ಇರುವ ನ್ಯೂಜಿಲ್ಯಾಂಡ್ ತಂಡ ಗ್ರೂಪ್ 2 ರಲ್ಲಿ ಇರುವ ಎರಡನೇ ಸ್ಥಾನದಲ್ಲಿ ಇರುವ ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ನವೆಂಬರ್ 9 ಅಂದರೆ ಮುಂದಿನ ಬುಧವಾರ ನಡೆಯಲಿದೆ. ಇನ್ನು ಎರಡನೇ ಸೆಮಿ ಫೈನಲ್ ಪಂದ್ಯ ಗ್ರೂಪ್ 1 ರಲ್ಲಿ ಎರಡನೇ ಸ್ಥಾನದಲ್ಲಿ ಇರುವ ಇಂಗ್ಲೆಂಡ್ ಹಾಗು ಗ್ರೂಪ್ 2 ರಲ್ಲಿ ಅಗ್ರ ಸ್ಥಾನದಲ್ಲಿ ಇರುವ ಭಾರತದ ನಡುವೆ ನವೆಂಬರ್ 10 ಕ್ಕೆ ಅಂದರೆ ಬರುವ ಗುರುವಾರದಂದು ನಡೆಯಲಿದೆ. ಇದರಲ್ಲಿ ಗೆಲ್ಲುವ ಎರಡು ತಂಡಗಳು ಮುಂದಿನ ನವೆಂಬರ್ 13 ರಂದು ಅಂದರೆ ರವಿವಾರ ಫೈನಲ್ ಪಂದ್ಯದಲ್ಲಿ ಆಡಲಿದ್ದಾರೆ.

Leave A Reply

Your email address will not be published.