ರೋಹಿತ್, ಕೊಹ್ಲಿ ತರಹದ ಬ್ಯಾಟ್ಸಮನ್ ಗಳನ್ನೂ ಭಾರತ ತಂಡ ಹಿಂದೆಯೂ ನೋಡಿದೆ. ಆದರೆ ಸೂರ್ಯ ಕುಮಾರ್ ನಂತಹ ಬ್ಯಾಟ್ಸಮನ್ ಭಾರತಕ್ಕೆ ಮೊದಲು ಸಿಕ್ಕಿದ್ದು ಎಂದ ಗೌತಮ್ ಗಂಭೀರ್.

11,242

ಭಾರತ ತಂಡದಲ್ಲಿ ಸೂರ್ಯ ಕುಮಾರ್ ಯಾದವ್ (Surya Kumar Yadav) ಒಬ್ಬ ಉತ್ತಮ ಬ್ಯಾಟ್ಸಮನ್ ಎನ್ನುವುದನ್ನು ಈ ಬಾರಿಯೂ ಸಾಬೀತು ಪಡಿಸಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅಂತಹ ಬ್ಯಾಟ್ಸಮನ್ ಭಾರತ ತಂಡದಲ್ಲಿದ್ದು ಕೂಡ ಸೂರ್ಯ ಕುಮಾರ್ ಯಾದವ್ ತಮ್ಮ ಛಾಪು ಮೂಡಿಸಿದ್ದಾರೆ ಎಂದರೆ ಊಹಿಸಿ SKY ಇಂತಹ ಬ್ಯಾಟ್ಸಮನ್ ಎನ್ನುವುದು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಉತ್ತಮ ರನ್ ಗಳಿಸಿ ಭಾರತ 71 ರನ್ ಗಳಿಂದ ಗೆಲ್ಲುವಲ್ಲಿ ಸೂರ್ಯ ಅವರ ಪಾತ್ರ ಮಹತ್ವದ್ದು.

ಇಂದಿನ ಭಾರತ (India) ಹಾಗು ಜಿಂಬಾಬ್ವೆ(Zimbabwe) ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ (Star Sports) ಬಳಿ ಮಾತಾಡಿದ ಭಾರತದ ಮಹಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautham Gambir) ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗು ರೋಹಿತ್ ಶರ್ಮ (Rohit Sharma) ರಂತಹ ಆಟಗಾರರನ್ನು ಹಿಂದೆ ಕಂಡಿದೆ. ಆದರೆ ತಂಡ ಹಿಂದೆ ಎಂದು ಕೂಡ ಸೂರ್ಯ ಕುಮಾರ್ ಯಾದವ್ ರಂತಹ ಆಟಗಾರರನ್ನು ಹೊಂದಿಲ್ಲ. ನಾಲ್ಕನೇ ಸ್ಥಾನದಲ್ಲಿ ಈ ರೀತಿ ಉತ್ತಮ ಸ್ಟ್ರೈಕ್ ರೇಟ್ ನೊಂದಿಗೆ ಆಡುವ ಆಟಗಾರ ಮೊದಲೇ ಭಾರತಕ್ಕೆ ದೊರಕಿದ್ದು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

ವಿರಾಟ್ ಕೊಹ್ಲಿ, ರಾಹುಲ್ ರೋಹಿತ್ ಶರ್ಮ ಇವರೆಲ್ಲರೂ ನಿಧಾನ ಗತಿ ಯಲ್ಲಿ ಆಡುವ ಸ್ಟ್ರೈಕ್ ರೋಟೇಟ್ ಮಾಡುವ ಹಾಗು ಆಟದಲ್ಲಿ ಸ್ಥಿರತೆ ತರುವುದಕ್ಕಾಗಿ ಆಡುತ್ತಾರೆ. ಆದರೆ ಸೂರ್ಯ ಕುಮಾರ್ ಯಾದವ್ ಆಟ ಹಾಗಲ್ಲ. ಅವರ ಸ್ಟ್ರೈಕ್ ರೇಟ್ 180 ಇರುತ್ತದೆ. ಇವರ ಆಟ ನೋಡುವುದೇ ಒಂದು ಆನಂದ. ಈ ರೀತಿಯ ಫಾರ್ಮ್ ನಲ್ಲಿ ಸ್ಥಿರತೆ ಕಂಡುಕೊಳ್ಳುವುದು ಬಹಳ ಕಷ್ಟ, ಆದರೆ ಸೂರ್ಯ ಕುಮಾರ್ ಯಾದವ್ ಅದನ್ನು ಸಾಧಿಸಿದ್ದಾರೆ. 200 ಕ್ಕೂ ಅಧಿಕ ರನ್, 3 ಅರ್ಧ ಶತಕ. SKY ನನಗೆ ಪ್ಲೇಯರ್ ಒಫ್ ದಿ ಮ್ಯಾಚ್. ಉತ್ತಮ ಆಟಗಾರ ಎಂದು ಗಂಭೀರ್ ಹೇಳಿದ್ದಾರೆ.

Leave A Reply

Your email address will not be published.