ಯಾವ ಬೌಲರ್ ಗಳನ್ನೂ ಬಿಡದ ಸೂರ್ಯ ಕುಮಾರ್ ಯಾದವ್ ಬೇರೆ ಗ್ರಹದಿಂದ ಬಂದವನು. SKY ಆಟಕ್ಕೆ ಪತರುಗುಟ್ಟಿದ ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಮ್.

8,079

ಸೂರ್ಯ ಕುಮಾರ್ ಯಾದವ್ ನಿನ್ನೆ ರವಿವಾರ ತಮ್ಮ ಅದ್ಬುತ ಬ್ಯಾಟಿಂಗ್ ಇಂದ ಇಡೀ ಕ್ರಿಕೆಟ್ ಜಗತ್ತನ್ನು ಬೆರಗಾಗಿಸಿದ್ದಾರೆ. ಮೆಲ್ಬೋರ್ನ್ ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 71 ರನ್ ಗಳ ಅಂತರದಲ್ಲಿ ಗೆಲ್ಲುವ ಮುಖಾಂತರ ಗ್ರೂಪ್ ಹಂತದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ತಂಡವಾಗಿದೆ, ಅದೇ ರೀತಿ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಟಾಪ್ ೧ ಸ್ಥಾನ ಪಡೆದಿದೆ. ಇದೆಲ್ಲದಕ್ಕೆ ಕಾರಣ ಸೂರ್ಯ ಕುಮಾರ್ ಯಾದವ್ ಅವರು ಕೇವಲ ೨೫ ಬಾಲ್ ಗಳಲ್ಲಿ ಮಾಡಿದ 61 ರನ್ ಅಂದರೆ ತಪ್ಪಾಗಲಾರದು.

SKY ಆಟಕ್ಕೆ ಪಾಕಿಸ್ತಾನ ಕೂಡ ಬೆರಗಾಗಿದ್ದು ಈ 360 ಡಿಗ್ರಿ ಶೋ ನೀಡುವ ಆಟಗಾರನನ್ನು ಔಟ್ ಆದರೂ ಹೇಗೆ ಮಾಡುವುದು ಎನ್ನುವ ಚಿಂತೆ ಕಾಡತೊಡಗಿದೆ. ೬ ಬೌಂಡರಿ ಹಾಗು 4 ಇಂದ ಕೂಡಿದ ಸೂರ್ಯ ಕುಮಾರ್ ಆಟ ನೋಡಿ ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಮ್ ನೇರವಾಗಿ ಈ ಆಟಗಾರ ಬೇರೆ ಗ್ರಹದಿಂದ ಬಂದವನು ಎಂದು ಹೇಳಿಕೊಂಡಿದ್ದಾರೆ. ಇವರ ಆಟ ಅವರನ್ನು ಅಷ್ಟು ನಿಬ್ಬೆರಗಾಗಿಸಿದೆ.

ವಾಸಿಂ ಅಕ್ರಮ್ ” ಈ ಆಟಗಾರ ಬೇರೆ ಗ್ರಹದಿಂದ ಬಂದವನು, ಉಳಿದ ಆಟಗಾರರಿಗಿಂತ ಸಂಪೂರ್ಣ ವಿಭಿನ್ನ. ಈ ಆಟಗಾರ ರನ್ ಮಾಡುವುದು ನೋಡಿದರೆ.. ಅದು ನೋಡುವುದೇ ಒಂದು ಆನಂದ. ಇದು ಜಿಂಬಾಬ್ವೆ ವಿರುದ್ಧ ಮಾತ್ರ ಅಲ್ಲ ಎಲ್ಲ ತಂಡದ ವಿರುದ್ಧ ಆಡುವಾಗಲು ಸಂತೋಷವಾಗುತ್ತದೆ. ಎಲ್ಲ ಟಾಪ್ ಬೌಲಿಂಗ್ ಗಳನ್ನೂ ಧೂಳಿಪಟ ಮಾಡುವ ಸಾಮರ್ಥ್ಯ ಈ ಆಟಗಾರನಿಗೆ ಇದೆ, ಬೌಲರ್ ಗಳು ಎಲ್ಲಿಗೆ ಹೋಗಬೇಕು? ಎಂದು ವಾಸಿಮ್ ಅಕ್ರಮ್ ಪ್ಯಾನೆಲ್ ಅಲ್ಲಿ ಹೇಳಿದ್ದಾರೆ.

Leave A Reply

Your email address will not be published.