ಪ್ರಪಂಚದಲ್ಲಿ ಒಬ್ಬರೇ Mr.360 ಇರುವುದು ಎನ್ನುವ ಸೂರ್ಯ ಕುಮಾರ್ ಯಾದವ್ ಹೇಳಿಕೆಗೆ, ಪ್ರತಿಕ್ರಿಯೆ ನೀಡಿದ ABD.

9,156

ಸೂರ್ಯ ಕುಮಾರ್ ಯಾದವ್ (Surya Kumar Yadav), ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಕ್ಷಣದಿಂದ ಕ್ರಿಕೆಟ್ (Cricket) ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಈಗ ಎಲ್ಲರು SKY ಅನ್ನು Mr. 360 ಅಂತಾನೆ ಕರೆಯೋಕೆ ಶುರು ಮಾಡಿದ್ದಾರೆ. ಈಗಾಗಲೇ ಇಂಡಿಯನ್ Mr. 360 ಅಂತಾನೆ ಕರೆಯುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತದ ಮಾಧ್ಯಮ ಕ್ರಮಾಂಕ ರನ್ ಗಳಿಸಲು ಹಾಗು ವಿಕೆಟ್ ಉಳಿಸಿಕೊಳ್ಳಲ್ಲು ಹೆಣಗಾಡುತ್ತಿತ್ತು. 150 ರಿಂದ 160 ರನ್ ಗಳಿಸಲು ಪರದಾಡುತ್ತಿದ್ದ ಭಾರತ ಇದೀಗ 170 ಹಾಗು 180 ರನ್ ಗಳನ್ನೂ ಗಳಿಸಲು ಸಾಧ್ಯವಾಗುತ್ತಿದೆ.

ಸೂರ್ಯ ಕುಮಾರ್ ಯಾದವ್ ಕೇವಲ ರನ್ ಮಾಡಲು ಬರುವುದಲ್ಲದೆ ಅವರು ಇನ್ನಿಂಗ್ಸ್ ಅಲ್ಲಿ ಕಲೆಹಾಕುವ ರನ್ ಬುಲೆಟ್ ಟ್ರೈನ್ ನಂತೆಯೇ ಓಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇವರ ಸ್ಟ್ರೈಕ್ ರೇಟ್. ಇತರ ಬ್ಯಾಟ್ಸಮನ್ ಗಳ ಸ್ಟ್ರೈಕ್ ರೇಟ್ ೧೩೦-೧೪೦ ಇದ್ದರೆ, ಸೂರ್ಯ ಕುಮಾರ್ ಯಾದವ್ ಅವರ ಸ್ಟ್ರೈಕ್ ರೇಟ್ ೧೫೦-೧೮೦ ರವರೆಗೆ ಇದೆ. ಫೀಲ್ಡರ್ ಗಳು ಕೂಡ ತಲುಪಲಾಗದ ಜಾಗಕ್ಕೆ ಬೌಂಡರಿ ಬಾರಿಸುತ್ತಿದ್ದರೆ ಸೂರ್ಯ ಕುಮಾರ್ ಯಾದವ್.

T20 WorldCup 2022 ರಲ್ಲಿ ಸೂರ್ಯಕುಮಾರ್ ಪ್ರದರ್ಶನ ಅತ್ಯಂತ ಉತ್ತಮವಾಗಿದೆ. ತಮ್ಮ 360 ಡಿಗ್ರಿ ಆಟದ ಮೂಲಕ ಬೌಲರ್ ಗಳನ್ನೂ ಕಾಡುತ್ತಿದ್ದಾರೆ. ಇಲ್ಲಿಯವರೆಗೆ ಸೂರ್ಯ ಕುಮಾರ್ ಅವರ ಬ್ಯಾಟ್ ಇಂದ 255 ರನ್ ಗಳು ಬಂದಿದೆ. ಜಿಂಬಾಬ್ವೆ ವಿರುದ್ದದ ಆಟ ಎಲ್ಲರ ಮನ ಸೆಳೆಯುತ್ತಿದೆ. ಕೇವಲ ೨೩ ಬಾಲ್ ಗಳಲ್ಲಿ ಅಜೇಯ ೬೧ ರನ್ ಗಳಿಸಿ ಅದ್ಬುತ ಆಟದಿಂದ ಎಲ್ಲ ಕ್ರಿಕೆಟ್ ಅಭಿಮಾನಿಗಳ ಮನೆಮಾತಾಗಿದ್ದಾರೆ. ಇವರ 360 ಡಿಗ್ರಿ ಆಟ ಅಂದರೆ ನೆನಪಾಗುವುದು ನಮ್ಮ ಸೌತ್ ಆಫ್ರಿಕಾ ಹಾಗು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆನ್ನೆಲುಬು ಅಂತಾನೆ ಹೇಳಬಹುದಾದ A B ಡಿವಿಲಿಯರ್ಸ್. ಇದೀಗ ಸೂರ್ಯ ಕುಮಾರ್ ಯಾದವ್ ಅವರ ಹೋಲಿಕೆ ವಿಲಿಯರ್ಸ್ ಜೊತೆಗೆ ನಡೆಯುತ್ತಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯ ಕುಮಾರ್ ಯಾದವ್ ವಿಶ್ವದಲ್ಲಿ ಒಬ್ಬರೇ MR. 360 ಇರುವುದು ಅದು AB ಡೆವಿಲಿಯರ್ಸ್ ಹಾಗು ನಾನು ಅವರಂತೆ ಆಡಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಡಿವಿಲಿಯರ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದು ಎಲ್ಲರ ಮನ ಸೂರೆಗೊಳ್ಳುತ್ತಿದೆ. ಇದಕ್ಕೆ ಕಾಮೆಂಟ್ ಮಾಡಿದ ಡಿವಿಲಿಯರ್ಸ್ ” ನೀವು ಆ ತರಹದ ಆಟವಾಡುವ ಆಟಗಾರನಾಗುತ್ತಿದ್ದಿರ, ಅದಕ್ಕಿಂತ ಹೆಚ್ಚಾಗಿ ಇಂದು ಉತ್ತಮವಾಗಿ ಆಡಿದ್ದಿರಾ ಎಂದು ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.