ಬ್ರಹ್ಮಾಸ್ತ್ರ ಗೆದ್ದಿದ್ದೆ ಎನ್ನುತ್ತಿರುವವರೇ ಅಸಲಿ ಲೆಕ್ಕ ಏನು ಗೊತ್ತೇ??, 410 ಕೋಟಿ ಹಾಕಿದಕ್ಕೆ ಏಳು ದಿನಗಳಲ್ಲಿ ಗಳಿಸಿದ್ದು ಎಷ್ಟು ಕಡಿಮೆ ಗೊತ್ತೇ??

132

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿ, ಅಮಿತಾಬ್ ಬಚ್ಚನ್, ಶಾರುಖ್ ಖಾನ್ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ನಾಗರ್ಜುನ ಅವರು ಅತಿಥಿ ಪಾತ್ರಗಳಲ್ಲಿ ನಟಿಸಿದ ಸಿನಿಮಾ ಬ್ರಹ್ಮಾಸ್ತ್ರ. ಈ ಸಿನಿಮಾವನ್ನು ಆಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಕಳೆದ ವಾರ ವಿಶ್ವಾದ್ಯಂತ ತೆರೆಕಂಡಿತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಬಿಡುಗಡೆ ಆಯಿತು. ಬ್ರಹ್ಮಾಸ್ತ್ರ ಸಿನಿಮಾದ ತೆಲುಗು ಅವತರಣಿಕೆಯ ಪ್ರಚಾರಕ್ಕೆ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಸಾಥ್ ನೀಡಿದರು.

410 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಬ್ರಹ್ಮಾಸ್ತ್ರ ಸಿನಿಮಾ ಈವರೆಗೂ ಮಾಡಿರುವ ಕಲೆಕ್ಷನ್ ಎಷ್ಟಿರಬಹುದು ಎನ್ನುವ ಚರ್ಚೆ ಈಗ ಶುರುವಾಗಿದೆ. ಮೊದಲ ದಿನ 5000 ಸ್ಕ್ರೀನ್ ಗಳಲ್ಲಿ ತೆರೆಕಂಡು ಭರ್ಜರಿಯ ಕಲೆಕ್ಷನ್ ಮಾಡಿತು, ಬ್ರಹ್ಮಾಸ್ತ್ರ ಸಿನಿಮಾದ ಮೊದಲ ದಿನದ ಗಳಿಕೆ 75 ಕೋಟಿ ರೂಪಾಯಿ, ಎರಡನೇ ದಿನ 85 ಕೋಟಿ ರೂಪಾಯಿ. ಹೀಗೆ ಬಿಡುಗಡೆಯಾಗಿ ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿತು. ಇನ್ನು ಸಿನಿಮಾ ಬಿಡುಗಡೆಯಾಗಿ 7ನೇ ದಿನದ ಹೊತ್ತಿಗೆ ಎಷ್ಟು ಕಲೆಕ್ಷನ್ ಮಾಡಿದೆ ಎಂದು ನಿರ್ದೇಶಕ ಅಯಾನ್ ಮುಖರ್ಜಿ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಯಾನ್ ಮುಖರ್ಜಿ ಅವರು ತಿಳಿಸಿರುವ ಪ್ರಕಾರ, ಬ್ರಹ್ಮಾಸ್ತ್ರ ಸಿನಿಮಾ 7 ದಿನಗಳಲ್ಲಿ 310 ಕೋಟಿ ಕಲೆಕ್ಷನ್ ಮಾಡಿದೆ. ಖರ್ಚಾಗಿರುವ ಹಣ ಪೂರ್ತಿ ಬರಲು ಇನ್ನು 100 ಕೋಟಿ ಕಲೆಕ್ಷನ್ ಮಾಡಬೇಕು, ಇನ್ನು 7ನೇ ದಿನದ ಕಲೆಕ್ಷನ್ 9 ಕೋಟಿ ಆಗಿದೆ. ಹಿಂದಿಗಿಂತ ಹೆಚ್ಚಾಗಿ ತೆಲುಗಿನಲ್ಲಿ ಕಲೆಕ್ಷನ್ ಮಾಡಿದೆ ಬ್ರಹ್ಮಾಸ್ತ್ರ ಸಿನಿಮಾ. ಬಾಲಿವುಡ್ ನಲ್ಲಿ ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಕಾಶ್ಮೀರ್ ಫೈಲ್ಸ್, ಈ ಸಿನಿಮಾ 20 ಕೋಟಿ ವೆಚ್ಚದಲ್ಲಿ ತಯಾರಾಗಿ 340 ಕೋಟಿ ಗಳಿಸಿತು. ಕಾಶ್ಮೀರ್ ಫೈಲ್ಸ್ ಬೀಟ್ ಮಾಡಬೇಕು ಎಂದರೆ ಬ್ರಹ್ಮಾಸ್ತ್ರ ಸಿನಿಮಾ ಇನ್ನು 40 ಕೋಟಿ ಗಳಿಸಬೇಕಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಸಹ ಕಡಿಮೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಇಂಪ್ರೂವ್ ಆಗುತ್ತಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.