ವಾಟ್ಸಪ್ಪ್ ಅಲ್ಲಿ ಕೋವಿಡ್ ಲಸಿಕೆ ಪ್ರಮಾಣ ಪಾತ್ರ ಪಡೆಯುವುದು ಹೇಗೆ? ಇಲ್ಲಿದೆ ಅದರ ಮಾಹಿತಿ.

409

ಲಸಿಕೆ ಹಾಕಿಸಿಕೊಂಡ ನಾಗರಿಕರು ತಮ್ಮ ಲಸಿಕಾ ಪ್ರಮಾಣಪತ್ರವನ್ನು ಸೆಕೆಂಡ್ ಗಳಲ್ಲಿ ವಾಟ್ಸಪ್ಪ್ ಮೂಲಕ ಪಡೆಯಬಹುದು ಎಂದು ಅರೋಗ್ಯ ಸಚಿವರು ಹೇಳಿದ್ದಾರೆ. ವಾಟ್ಸಪ್ಪ್ ಅಲ್ಲಿ ಪ್ರಮಾಣಪತ್ರವನ್ನು ಪಡೆಯ ಬಯಸುವವರು ಸರಕಾರ ನೀಡಿದ ನಂಬರ್ ಗೆ ಟೆಕ್ಸ್ಟ್ ಮೆಸೇಜ್ ಮಾಡುವ ಮೂಲಕ ಕ್ಷಣಾರ್ಧದಲ್ಲಿ ಪಡೆಯಬಹುದು. ಟೆಕ್ನಾಲಜಿ ಅಲ್ಲಿ ಒಂದು ರೆವೊಲ್ಯೂಷನರಿ ಹೆಜ್ಜೆ ಇಟ್ಟಿರುವ ಭಾರತ ಸರಕಾರ ಹೇಗೆ ಪ್ರಮಾಣ ಪಾತ್ರವನ್ನು ಪಡೆಯಬಹುದು ಎಂದು ಸುಲಭವಾಗಿ ತಿಳಿಸಿದ್ದಾರೆ.

ಹೇಗೆ ಪಡೆಯುವುದು ಪ್ರಮಾಣಪತ್ರ?
ಲಸಿಕಾ ಪ್ರಮಾಣಪತ್ರ ಪಡೆಯಲು ಕೇವಲ ೩ ಚಿಕ್ಕ ಕೆಲಸ ಮಾಡಬೇಕಿದೆ ಅಷ್ಟೇ. ಸರಕಾರ ನೀಡಿರುವ +91 9013151515 ನಂಬರ್ ಅನ್ನು ನಿಮ್ಮ ಮೊಬೈಲ್ ಅಲ್ಲಿ ಸೇವ್ ಮಾಡಿಕೊಳ್ಳಿ. ವಾಟ್ಸಪ್ಪ್ ಅಲ್ಲಿ ಹೋಗಿ ‘covid certificate’ ಎಂದು ಟೈಪ್ ಮಾಡಿ ಆಮೇಲೆ ನಿಮಗೆ ಒಂದು ಒಟಿಪಿ ಬರುತ್ತದೆ ಅದನ್ನು ಇನೊಮ್ಮೆ ಅದೇ ನಂಬರ್ ಗೆ ಕಳುಹಿಸಿದ ತಕ್ಷಣ ನಿಮಗೆ ಲಸಿಕಾ ಪ್ರಮಾಣ ಪಾತ್ರ ಸಿಗುತ್ತದೆ. ವಾಟ್ಸಪ್ಪ್ ಅಲ್ಲದೆಯೂ cowin app ಗೆ ಹೋಗಿ ಅಲ್ಲಿ ಲಸಿಕಾ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.

ಭಾರತದಲ್ಲಿ ಯೋಗಗಳೇ ೫೦ಕೋಟಿ ಗು ಅಧಿಕ ಲಸಿಕೆ ನೀಡಲಾಗಿದ್ದು ಅತಿ ಕಡಿಮೆ ಸಮಯದಲ್ಲಿ ಲಸಿಕೆ ನೀಡಿ ಅಮೇರಿಕ ಅನ್ನು ಕೂಡ ಮೀರಿ ಮೈಲಿಗಲ್ಲು ಸ್ಥಾಪಿಸಿದೆ. ಕೇಂದ್ರ ಸಚಿವಾಲಯದ ಪ್ರಕಾರ ಈಗಾಗಲೇ ೫೦ ಲಕ್ಷಕ್ಕೂ ಅಧಿಕ ಪ್ರಮಾಣ ಪತ್ರ ನೀಡಲಾಗಿದೆ. ಇಲ್ಲಿಯವರೆಗೆ 50,62,18,296 ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ. ಒಟ್ಟಾರೆಯಾಗಿ, 37 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 18-44 ವರ್ಷ ವಯಸ್ಸಿನ 17,54,73,103 ವ್ಯಕ್ತಿಗಳು ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಮತ್ತು ಒಟ್ಟು 1,18,08,368 ಎರಡನೇ ಹಂತವನ್ನು 3 ನೇ ಹಂತದ ಆರಂಭದಿಂದ ಪಡೆದಿದ್ದಾರೆ. ಲಸಿಕೆ ಅಭಿಯಾನ.

Leave A Reply

Your email address will not be published.