1-2 ಪಂದ್ಯದಲ್ಲಿ ಆಡುತ್ತಾನೆ ನಂತರ ಸ್ಥಿರತೆ ಕಂಡುಕೊಳ್ಳುವಲ್ಲಿ ವಿಫಲನಾಗುತ್ತಾನೆ, ಈ ಆಟಗಾರನ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಕಪಿಲ್ ದೇವ್.

306

ಕಪಿಲ್ ದೇವ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ, ಈಗಿನ ಯುವ ಆಟಗಾರರ ಮೇಲೆ ತುಂಬಾ ಒಳ್ಳೆಯ ಅಭಿಪ್ರಾಯವಿದೆ. ಇದಕ್ಕಿಂತ ಮುಂಚೆ ಇಂತಹ ಯಾವುದೇ ಒಳ್ಳೆಯ ಅಭಿಪ್ರಾಯಗಳು ಕಪಿಲ್ ಅವರ ಕಡೆಯಿಂದ ಬರುತ್ತಿರಲಿಲ್ಲ. ಆದರೆ ಅದೇ ರೀತಿ ಆಟಗಾರರ ಟೀಕೆ ಮಾಡುವುದಕ್ಕೂ ಹಿಂದೆ ಸರಿಯಲ್ಲ ಇವರು. ನೇರ ನೇರ ಮಾತುಗಳಿಂದಲೇ ಇವರು ಹೆಸರುವಾಸಿ. ಮುಂಬರುವ ಟಿ-೨೦ ವಿಶ್ವಕಪ್ ಗೆ ತಂಡದ ಸಿದ್ಧತೆ ನಡೆಯುತ್ತಿದೆ. ಈ ಭಾರತೀಯ ತಂಡದಲ್ಲಿ ಎಲ್ಲರ ಗಮನ ಹೋಗುವುದು ಮುಖ್ಯವಾಗಿ ವಿಕೆಟ್ ಕೀಪರ್ ಮೇಲೆ.

ರಿಷಬ್ ಪ್ಯಾಂಟ್ ಜೊತೆಗೆ ವಿಕೆಟ್ ಕೀಪರ್ ಹಾಗೇನೇ ಬೌಲರ್ ಸ್ಥಾನಕ್ಕೆ ಒಟ್ಟು ನಾಲ್ಕು ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ರಿಷಬ್ ಪ್ಯಾಂಟ್, ಇಶಾನ್ ಕಿಶನ್, ದಿನೇಶ್ ಕಾರ್ತಿಕ್ ಹಾಗೇನೇ ಸಂಜು ಸ್ಯಾಮ್ಸನ್. ಇವರಲ್ಲಿ ಯಾರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುವ ಕುತೂಹಲ ಮನೆಮಾಡಿದೆ. ಕಪಿಲ್ ದೇವ್ ಅವರು ಈ ನಾಲ್ವರಲ್ಲಿ ಆಯ್ಕೆ ಮಾಡುವುದಾದರೆ ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಇವರು, ಎಲ್ಲ ನಾಲ್ಕು ಆಟಗಾರರು ಸಾಮರ್ಥ್ಯದಲ್ಲಿ ಸಮಾನರು. ಬ್ಯಾಟ್ ಹಾಗು ವಿಕೆಟ್ ಕೀಪಿಂಗ್ ಅಲ್ಲಿ ಎಲ್ಲರ ಪ್ರದರ್ಶನ ಉತ್ತಮವಾಗಿಯೇ ಇದೆ. ಆದರೆ ಈ ನಾಲ್ಕರಲ್ಲಿ ಒಬ್ಬ ವಿಕೆಟ್ ಕೀಪರ್ ಬಗ್ಗೆ ಕಪಿಲ್ ದೇವ್ ಅಸಮಾಧಾನ ಹೊರಹಾಕಿದ್ದಾರೆ.

ಇದು ಬೇರೆ ಯಾರು ಅಲ್ಲ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್. ಸಂಜು ತಮ್ಮ ಪ್ರತಿಭೆ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ಇದು ಬಿಟ್ಟರೆ ಉಳಿದ ಎಲ್ಲದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮಿಗಿಲಿದ್ದಾರೆ. ಈ ನಾಲ್ವರು ತಮ್ಮ ಪ್ರದರ್ಶನ ಮೂಲಕ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ನಾನು ಸ್ಯಾಮ್ಸನ್ ಬಗ್ಗೆ ಸ್ವಲ್ಪ ಅಸಮಾಧಾನ ಹೊಂದಿದ್ದೇನೆ, ಈ ಆಟಗಾರ ೧-೨ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರೆ, ಮುಂದಿನ ಪಂದ್ಯದಲ್ಲಿ ಪ್ರದರ್ಶನ ಸ್ಥಿರವಾಗಿ ಇರುವುದಿಲ್ಲ. ಆಟಗಾರನಿಗೆ ಸ್ಥಿರತೆ ತುಂಬಾ ಮುಖ್ಯವಾಗಿರುತ್ತದೆ. ಅದು ಕೂಡ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಎಲ್ಲದರಲ್ಲೂ ಉತ್ತಮವಾಗಿರಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.

Leave A Reply

Your email address will not be published.