30 ಪೈಸೆ ಈ ಷೇರು ಇಂದು 60 ರೂಪಾಯಿ. ಒಂದು ಲಕ್ಷ ಹೂಡಿಕೆ ಮಾಡಿದ್ದರೆ ಒಂದು ವರ್ಷದಲ್ಲಿ ಕೋಟ್ಯಧಿಪತಿ ಆಗಬಹುದಿತ್ತು. ಯಾವುದು ಈ ಕಂಪೆನಿ?

389

ನೀವು ಪೆನ್ನಿ ಸ್ಟಾಕ್ ( Penny Stock ) ಮೇಲೆ ಹೂಡಿಕೆ ಮಾಡಲು ಬಯಸಿದ್ದರೆ ನಿಮಗೆ ನಾವು ಇಂದು ಒಂದು ಪೆನ್ನಿ ಸ್ಟಾಕ್ ಬಗ್ಗೆ ಹೇಳ್ತೇವೆ, ಈ ಸ್ಟಾಕ್ ಹೂಡಿಕೆ ದಾರರನ್ನು ಒಂದೇ ವರ್ಷದಲ್ಲಿ ಕೋಟ್ಯಧಿಪತಿಯನ್ನಾಗಿ ಮಾಡಿದೆ. ಈ ಶೇರ್ ಹೆಸರು ಕೈಸರ್ ಕಾರ್ಪೋರೇಶನ್ ಲಿಮಿಟೆಡ್. ಇದು ಈ ವರ್ಷದ multibagger ಸ್ಟಾಕ್ ಅಂತಾನೂ ಕರೆಸಿಕೊಳ್ತಿದೆ. ಈ ಶೇರ್ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ ೧೫,೦೦೦% ಹೂಡಿಕೆ ಮೇಲೆ ಲಾಭ ತಂದು ಕೊಟ್ಟಿದೆ. ಈ ವರ್ಷದಲ್ಲಿ ಈಗಾಗಲೇ ೧,೯೦೦% ರಿಟರ್ನ್ ಬಂದಿದೆ.

ಒಂದು ವರ್ಷದಲ್ಲಿ ಅಂದರೆ ೧೨ ಏಪ್ರಿಲ್ ೨೦೧೨ ರಲ್ಲಿ BSE ನಲ್ಲಿ ಇದು ಕೇವಲ 38 ಪೈಸೆ ಯಲ್ಲಿ ಟ್ರೇಡ್ ಆಗುತಿತ್ತು. ಇಂದು ಅದು 60 .05 ರುಪಾಯಿಗೆ ತಲುಪಿದೆ. ಅಂದರೆ ಕೇವಲ ಒಂದು ವರ್ಷದಲ್ಲಿ ಈ ಶೇರ್ ಸರಿ ಸುಮಾರು ೧೫,೭೦೨.೬೩ ಪ್ರತಿಶತ ರಿಟರ್ನ್ ನೀಡಿದೆ. ಅದಲ್ಲದೆ ಜನವರಿ ೨೦೨೨ ರಲ್ಲಿ ಈ ಶೇರ್ ಕೇವಲ ೨ ರೂಪಾಯಿಗಳ ಅಸು ಪಾಸಲ್ಲಿ ವ್ಯವಹಾರ ನಡೆಸುತಿತ್ತು ಇದೀಗ ಏಪ್ರಿಲ್ ಹೊತ್ತಿಗೆ ಬರೋಬ್ಬರಿ 60 ರೂಪಾಯಿಗಳ ವರೆಗೆ ತಲುಪಿದೆ.

ಒಂದು ವೇಳೆ ಹೂಡಿಕೆ ಮಾಡುವವರು ೦.೩೮ ಪೈಸೆಯಲ್ಲಿ ೧ ಲಕ್ಷ ಹೂಡಿಕೆ ಮಾಡಿದ್ದರೆ ಇಂದು ಅವರು ಕೋಟ್ಯಧಿಪತಿಗಳು ಆಗುತಿದ್ದರು ಅಂದರೆ ಸುಮಾರು ೧.೫೮ ಕೋಟಿ ರಿಟರ್ನ್ ಸಿಗುತಿತ್ತು. ಇದೆ ರೀತಿ ಕಳೆದ ವರ್ಷ ಅನೇಕ ಶೇರ್ ಗಳು ಉತ್ತಮ ರಿಟರ್ನ್ ನೀಡಿದೆ. ಹೂಡಿಕೆ ಮಾಡುವಾಗ ಅದರ ಬಗ್ಗೆ ನೀವು ಕೂಡ ಸಮಾಲೋಚನೆ ಮಾಡಿ ಹಾಗೇನೇ ರಿಸರ್ಚ್ ಮಾಡಿ ಹಾಕುವುದು ಉತ್ತಮ. ಇದು ಕೇವಲ ನಿಮಗೆ ಮಾಹಿತಿ ನೀಡುವುದಕ್ಕಾಗಿ ಮಾತ್ರ ಹೇಳಿದ ವಿಷ್ಯವಾಗಿದೆ. ಇದರಲ್ಲಿ ಹೂಡಿಕೆ ಮಾಡುವುದಾದ್ರೆ ನೀವೊಮ್ಮೆ ರಿಸರ್ಚ್ ಮಾಡಿ ಹೂಡಿಕೆ ಮಾಡಿ.

Leave A Reply

Your email address will not be published.