Adhani Group: ಅದಾನಿ ಸಮೂಹ ಷೇರುಗಳಲ್ಲಿ ಬಾರಿ ಇಳಿಕೆ. ಇದು ಕೊಳ್ಳಲು ಉತ್ತಮ ಸಮಯವೇ? ಏನಿದು ಹಿಡನ್ ಬರ್ಗ್ ವರದಿ?
ಅದಾನಿ ಸಮೂಹ ಭಾರತದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಂಸ್ಥೆಯಲ್ಲಿ ಮೊದಲಿಗೆ ನಿಂತಿದೆ. ಹಾಗೇನೇ ಹೂಡಿಕೆದಾರರಿಗೆ ಅತಿ ಹೆಚ್ಚು ರಿಟರ್ನ್ ನೀಡಿದ ಶೇರ್ ಗಳಲ್ಲಿ ಅದಾನಿ ಮುಂಚುಣಿಯಲ್ಲಿದೆ. ಅದಾನಿ ಶೇರ್ ಮೇಲಕ್ಕೆ ಹೋಗುತ್ತಿರುವ ಬಗ್ಗೆ ಅನೇಕರಿಗೆ ಅನುಮಾನ ಇದ್ದರು ಕೂಡ ಜನರು ಹೂಡಿಕೆ ಮಾಡಿ ಲಾಭ ಕೂಡ ಗಳಿಸುತ್ತಿದ್ದರು.
ಅಮೇರಿಕಾದ ಶಾರ್ಟ್ ಸೆಲ್ಲರ್ ಎಂದೇ ಹೆಸರುವಾಸಿಯಾಗಿರುವ ಹಿಡನ್ ಬರ್ಗ್ ಎನ್ನುವ ಸಂಸ್ಥೆ ಸುಮಾರು 32 ಸಾವಿರ ಪುಟಗಳ ವರದಿ ನೀಡಿದ್ದು, ಭಾರತದ ಶೇರ್ ಮಾರುಕಟ್ಟೆಯನ್ನು ನಡುಗಿಸಿದೆ. ಈ ಹಿಡೆನ್ ಬರ್ಗ್ ಶಾರ್ಟ್ ಸೆಲ್ಲರ್ ಆಗಿರುತ್ತಾರೆ. ಏನಿದು ಶಾರ್ಟ್ ಸೆಲ್ಲರ್ ಅಂದರೆ? ಶಾರ್ಟ್ ಸೆಲ್ಲರ್ ಎಂದರೆ ಒಂದು ಸಂಸ್ಥೆ ಅಥವಾ ಜನರು ಕೂಡ ಆಗಿರಬಹುದು, ಈ ದಿನ ಅಥವಾ ಮುಂದೆ ಒಂದು ಕಂಪನಿ ಶೇರ್ ಕೆಳಗೆ ಹೋಗಬಹುದು ಎನ್ನುವ ಸೂಚನೆ ಮೇಲೆ ಅಂದಿನ ಬೆಲೆಗೆ ಶೇರ್ ಗಳನ್ನೂ ಮಾರಿ ಬಿಡುತ್ತಾರೆ.
ಅದೇ ಶೇರ್ ದೊಡ್ಡ ಮಟ್ಟದಲ್ಲಿ ಮಾರಾಟ ಮಾಡುವುದರಿಂದ ಹಾಗೇನೇ ಇಂತಹ ವರದಿಗಳನ್ನು ಮಾದ್ಯಮದಲ್ಲಿ ಪ್ರಕಟಣೆ ಮಾಡುವುದರಿಂದ ಜನರಲ್ಲಿ ಭಯ ಹುಟ್ಟಿ ಜನರು ಕೂಡ ಆ ಕಂಪನಿ ಶೇರ್ ಗಳನ್ನೂ ಮಾರಾಟ ಮಾಡುತ್ತಾರೆ. ಆಗ ಕಂಪನಿ ಶೇರ್ ಬೆಲೆ ಕಡಿಮೆ ಆಗುತ್ತಾ ಹೋಗುತ್ತದೆ. ಆಗ ಇಂತಹ ಹಿಡನ್ ಬರ್ಗ್ ಕಂಪನಿ ಗಳು ಮೊದಲೇ ಜಾಸ್ತಿ ಬೆಲೆ ಗೆ ಮಾರಾಟ ಮಾಡಿ ಬೆಲೆ ಕಡಿಮೆ ಆದಾಗ ಮತ್ತೊಮ್ಮೆ ಖರೀದಿ ಮಾಡಿ ಲಾಭ ಗಳಿಸುತ್ತಾರೆ. ಇದನ್ನೇ ಶಾರ್ಟ್ ಸೆಲ್ಲಿಂಗ್ ಅನುತ್ತಾರೆ.
ಹಿಡನ್ ಬರ್ಗ್ ಇಂತಹ ಕಿತಾಪತಿ ಮಾಡುವುದಕ್ಕೆ ಅಮೇರಿಕಾದಲ್ಲಿ ಕೇಸ್ ಗಳು ನಡೆಯುತ್ತಿದೆ. ಅಲ್ಲದೆ ಅದಾನಿ ಮೇಲೆ ವರದಿ ಮಾಡಿದಕ್ಕೆ, ಅದಾನಿ ಸಮೂಹ ಸಂಸ್ಥೆ ಗಳು ಕೂಡ ಅಮೇರಿಕಾದಲ್ಲಿ ಕೇಸ್ ಹಾಕುತ್ತೇವೆ ಎಂದು ಹೇಳಿಕೊಂಡಿದೆ. ಇಂತಹ ಸಮಯದಲ್ಲಿ ಅದಾನಿ ಸಂಸ್ಥೆಗಳ ಶೇರ್ ಬೆಲೆ ಕುಸಿಯುತ್ತಿದೆ. ಇದು ಹೀಗೇನೆ ಬೀಳುತ್ತಾ ಹೋದರೆ ನಮಗೆ ಖರೀದಿ ಮಾಡಲು ಉತ್ತಮ ಸಮಯ. ಮುಂದೆ ಈ ಕಂಪನಿ ಗಳ ಬೆಲೆ ಮೇಲೆ ಹೋಗುವ ಸಾಧ್ಯತೆಯೂ ಇದೆ. ಹಾಗೇನೇ ಅದಾನಿ ಸಂಸ್ಥೆ ಉತ್ತಮ ಸ್ಥಾನ ದಲ್ಲಿ ಇರುವುದರಿಂದ ಮುಂದೆ ಇದು ಮೇಲಕ್ಕೆ ಹೋಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.