ಇಂಡಸ್ ನದಿ ಒಪ್ಪಂದಕ್ಕೆ ಪಾಕಿಸ್ತಾನ ಮಾತುಕತೆ ಬರಲು 90 ದಿನಗಳ ಗಡುವು ನೀಡಿದ ಭಾರತ. ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಗುಮ್ಮಿದ ಭಾರತ.

194

ಕಾಶ್ಮೀರ ಅನೇಕ‌ ನದಿಗಳ ಉಗಮ ಸ್ಥಾನವಾಗಿದೆ. ಇದು ಅಲ್ಲಿನ ಜನತೆಗೆ ಅಲ್ಲದೇ ಪಾಕಿಸ್ತಾನಕ್ಕೆ ಕೂಡಾ ನೀರು ಇದೇ ಕಾಶ್ಮೀರದಿಂದ ಸಿಗುತಗತ್ತಿರುವುದು. ಭಾರತದ ಕಾಶ್ಮೀರ ಪಾಕಿಸ್ತಾನ ಬೇಕು ಅಂತ ತಕರಾರು ಎತ್ತುವುದಕ್ಕೆ ಈ ನದಿಗಳು ಕೂಡಾ ಒಂದು ಕಾರಣ. ಈ ಇಂಡೋ ನದಿ‌ ಒಪ್ಪಂದ ನಡೆದು ೭೫ ವರ್ಷಗಳೇ ಕಳೆದಿವೆ. ಇದಾದ ನಂತರ ಪಾಕಿಸ್ತಾನ‌ ನಮ್ಮ ಮೇಲೆ‌ ೪ ಯುದ್ದಗಳನ್ನು ಮಾಡಿದೆ. ಆದರೂ ಕೂಡಾ ಭಾರತ ನೀರು ಪಾಕಿಸ್ತಾನಕ್ಕೆ ಹೋಗದಂತೆ ತಡೆಯಲು ಡ್ಯಾಮ್‌ಗಳನ್ನು ನಿರ್ಮಾಣ ಮಾಡಲಿಲ್ಲ. ಇದು ಭಾರತ ಯಾವತ್ತೋ ಮಾಡಬಹುದಿತ್ತು ಆದರೆ ಭಾರತ ಮಾಡಲಿಲ್ಲ.

೨೦೧೫ ರಲ್ಲಿ ಭಾರತ ಕಾಶ್ಮೀರದಲ್ಲಿ ಸುಮಾರು ೧೦ ಸಾವಿರ ಕೋಟಿ ವೆಚ್ಚದಲ್ಲಿ ಹೈಡ್ರೋಪವರ್ ಪ್ರಾಜೆಕ್ಟ್ ಆರಂಭ ಮಾಡಿತ್ತು. ಇದನ್ನು ಪಾಕಿಸ್ತಾನ ವಿರೋಧಿಸಿ ವರ್ಲ್ಡ್ ಬ್ಯಾಂಕ್ ಬಳಿ ದೂರಿಟಿತ್ತು. ಈ ಇಂಡೋ ಟ್ರೀಟಿ ನಡೆದದ್ದು ಕೂಡಾ ನೆಹರು ಅವರ‌ ದೊಡ್ಡ ಬ್ಲಂಡರ್ ಆಗಿತ್ತು. ನೆಹರೂ ಹಾಗು ಪಾಕಿಸ್ತಾನದ ಆಯೂಬ್ ಖಾನ್ ಇಬ್ಬರೂ ವಿಶ್ವ ಬ್ಯಾಂಕ್ ಮಧ್ಯಸ್ತಿಕೆ ವಹಿಸಿ ಈ ಒಪ್ಪಂದ ಮಾಡಿಕೊಂಡಿತ್ತು. ಭಾರತ ಈ‌ ನೀರನ್ನು ಪಾಕಿಸ್ತಾನಕ್ಕೆ ನೀಡದಿದ್ದರೂ ತೊಂದರೆ ಇರುತ್ತಿರಲಿಲ್ಲ, ಆದರೆ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆ ಮಾಡುವಂತೆ ಹೇಳಿದ್ದು ದೊಡ್ಡ ತಪ್ಪು ಆಗಿತ್ತು. ಈ ಒಪ್ಪಂದದ‌ ಪ್ರಕಾರ ನೀರು ಎರಡು ದೇಶಗಳು ಬಳಸಿಕೊಳ್ಳುತ್ತವೆ. ಹಾಗು ಏನಾದರೂ‌ ಸಮಸ್ಯೆ ಬಂದರೆ ಎರಡೂ ದೇಶಗಳು ಕುಳಿತು ಬಗೆಹರಿಸಿಕೊಳ್ಳಬಹುದು ಎಂದಾಗಿತ್ತು.

೨೦೧೫ ರಲ್ಲಿ ಭಾರತದ ಈ ಹೈಡ್ರೋಪವರ್ ಪ್ರಾಜೆಕ್ಟ್ ವಿರುದ್ದ ಪಾಕಿಸ್ತಾನ ವಿಶ್ವಬ್ಯಾಂಕ್ ಬಳಿ‌ ದೂರಿಟ್ಟು‌ ಈ ಯೋಜನೆಗಳಿಂದ ಪಾಕಿಸ್ತಾನಕ್ಕೆ‌ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ, ಹಾಗಾಗಿ ಒಂದು ವಿದೇಶ‌ ಭಾರತ ಹಾಗು ಪಾಕಿಸ್ತಾನದ‌ ಈ ಇಂಡೋ ನದಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿಕೊಂಡಿತ್ತು. ಭಾರತ ಅಂದು ನಾವು ಈ ಒಪ್ಪಂದ ಪ್ರಕಾರನೇ ಈ ಯೋಜನೆ ನಡೆಸಿಕೊಂಡಿದೆ ಎಂದು ಹೇಳಿಕೊಂಡಿತ್ತು. ಪಾಕಿಸ್ತಾನ ವಿಶ್ವಬ್ಯಾಂಕ್ ಗೆ ಹೋಗಿದ್ದಲ್ಲದೇ‌ ಇನ್ನೊಂದು ದೇಶ ಮದ್ಯಸ್ತಿಕೆ ವಹಿಸಬೇಕೆಂದು ಹೇಳಿದ್ದು ಒಪ್ಪಂದಕ್ಕೆ ವಿರುದ್ದವಾಗಿದೆ ಎಂದು ಭಾರತ ಹೇಳಿದೆ.

ಆದರೆ ಇಂದು ಪಾಕಿಸ್ತಾನದಲ್ಲಿ‌ ಆರ್ಥಿಕ ಬಿಕ್ಕಟ್ಟು, ದೇಶದಲ್ಲಿ ಆಂತರಿಕ ಗಲಭೆ ಹಾಗು ರಾಜಕೀಯ ಅಸ್ತಿರತೆ ಇದೆ. ಭಾರತ ಇದೇ ಸರಿಯಾದ ಸಮಯ ಎಂದು ಪಾಕಿಸ್ತಾನದ ಬಳಿ ಈ ಇಂಡೋ ನದಿ ಒಪ್ಪಂದ ಮುರಿದಿದೆ ಹಾಗಾಗಿ ಹೊಸ ಒಪ್ಪಂದಕ್ಕೆ‌ ೯೦ ದಿನಗಳ ಒಳಗೆ ಮಾತುಕತೆಗೆ‌ ಬರಬೇಕು ಎಂದು ಗಡುವು ನೀಡಿದೆ. ಮುಂದೆ‌ ಪಾಕಿಸ್ತಾನ ಯಾವ ನಿರ್ಧಾರ ತೆಗೆದುಕೊಳ್ಳಲಿದೆ‌ ಎಂದು ಕಾದು ನೋಡಬೇಕಾಗಿದೆ. ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿರುವುದರಿಂದ ಪಾಕಿಸ್ತಾನ ಭಾರತದ ಜೊತೆ ಒಪ್ಪಂದಕ್ಕೆ ಬರಲೇಬೇಕು, ಇಲ್ಲವಾದರೆ ಭಾರತ ನೀರು ತಡೆ ಹಿಡಿದರೆ‌ ಈಗಾಗಲೇ ಬರಗೆಟ್ಟಿರುವ ಪಾಕಿಸ್ತಾನಕ್ಕೆ‌ ನೀರೇ‌ ಇಲ್ಲದಂತಾಗುತ್ತದೆ. ಭಾರತ ೨೦೧೫ ರಿಂದ‌ ೨೦೨೩ ರವರೆಗೆ ಉತ್ತಮ‌ ಸಮಯಕ್ಕೆ ಕಾಯುತ್ತಿತ್ತು. ಇದೀಗ ಸರಿಯಾಗಿ ಬಗಣಿಗೂಟ ಇಟ್ಟಿದೆ.

Leave A Reply

Your email address will not be published.