Bharti Airtel: 99 ರೂಪಾಯಿ ಪ್ಲಾನ್ ನಿಲ್ಲಿಸಿ ಗ್ರಾಹಕರಿಗೆ ಶಾಕ್ ಕೊಟ್ಟ ಏರ್ಟೆಲ್. ಸಿಮ್ ಕೆಲಸ ಮಾಡಬೇಕಾದರೆ ಇಷ್ಟು ಹಣದ ರಿಚಾರ್ಜ್ ಮಾಡಿಸಲೇಬೇಕು.
ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿ ಎಂದೆನಿಸಿಕೊಂಡಿರುವ ಏರ್ಟೆಲ್ (Airtel) ತನ್ನ ಬಳಕೆದಾರರಿಗೆ ದೊಡ್ಡ ಷಾಕಿಂಗ್ ಸುದ್ದಿ ನೀಡಿದೆ. ಜಿಯೋ (JIO) ಬಂದ ಮೇಲೆ ಎಲ್ಲ ಇತರ ಟೆಲಿಕಾಂ (Telecom) ಕಂಪನಿಗಳಿಗೆ ಪೆಟ್ಟು ಬಿದ್ದಿತ್ತು. ಉಳಿದ ನೆಟ್ವರ್ಕ್ ಗಳು ಭಾರತದಲ್ಲಿ ನೆಲೆ ಊರಲ್ಲ ಎಂದು ಎಲ್ಲರು ಅಭಿಪ್ರಾಯ ಪಟ್ಟಿದ್ದರು. ಆದರೂ ಕೂಡ ಜಿಯೋ ಗೆ ಠಕ್ಕರ್ ನೀಡಿದ್ದು ಏರ್ಟೆಲ್ (Airtel). ಸಂದರ್ಭಕ್ಕೆ ತಕ್ಕಂತೆ ಯೋಜನೆ ಬದಲಾಯಿಸಿ ಇಂದು ಎರಡನೇ ಅತಿ ದೊಡ್ಡ ಟೆಲಿಕಾಂ ನೆಟ್ವರ್ಕ್ ಆಗಿ ನಿಂತಿದೆ.
ಇದೀಗ ಏರ್ಟೆಲ್ ತಮ್ಮ ಮಿನಿಮಮ್ ರಿಚಾರ್ಜ್ ಬೆಲೆಯಲ್ಲಿ ಮೊದಲಿಂದಲೂ ಬದಲಾವಣೆ ಮಾಡುತ್ತಲೇ ಬಂದಿದೆ. ಆದರೆ ಯಾರು ಕೂಡ ಆದರೆ ಬಗೆ ತೆಲೆಕೆಡಿಸಿ ಕೊಂಡಿರಲಿಲ್ಲ. ಕಾರಣ ರಿಚಾರ್ಜ್ ಬೆಲೆ 100 ರೂಪಾಯಿಗಳ ಒಳಗೆ ಇರುತ್ತಿತ್ತು. ಇದೀಗ ಅಚಾನಕ್ ಆಗಿ 99 ರೂಪಾಯಿಯ ಯೋಜನೆ ನಿಲ್ಲಿಸಿ ಮಿನಿಮಮ್ ರಿಚಾರ್ಜ್ ಬೆಲೆ 155 ಕ್ಕೆ ಏರಿಸಿದೆ. ಇದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಈ 155 ರೂಪಾಯಿ ಕಟ್ಟದೆ ಹೋದರೆ ನಿಮ್ಮ ಮೊಬೈಲ್ ಅಲ್ಲಿ ಯಾವ ಕರೆ ಹೋಗುವುದು ಇಲ್ಲ ಬೇರೆಯವರಿಂದ ಬರುವುದು ಇಲ್ಲ.
ಪ್ರಾಯೋಗಿಕವಾಗಿ ಇದನ್ನು ಹರಿಯಾಣ ಹಾಗು ಒಡಿಶಾ ದಲ್ಲಿ ತರಲಾಗಿದೆ. ಮುಂಬರುವ ದಿನಗಳಲ್ಲಿ ಇದು ದೇಶಾದ್ಯಂತ ಜಾರಿಯಾಗುತ್ತೆ ಎಂದು ಏರ್ಟೆಲ್ ತನ್ನ ಅಧಿಕೃತ ವೆಬ್ಸೈಟ್ ಅಲ್ಲಿ ಹಂಚಿಕೊಂಡಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುವುದರಲ್ಲಿ ಅನುಮಾನವಿಲ್ಲ. ಸದ್ಯಕ್ಕೆ ಎಲ್ಲರು ಕೂಡ ಎರಡೆರಡು ಸಿಮ್ ಬಳಸುತ್ತಿದ್ದಾರೆ. ಒಂದು ಜಿಯೋ ಹಾಗು ಇನ್ನೊಂದು ಏರ್ಟೆಲ್ ಹಾಗು ಬೇರೆ ಕಂಪನಿ ಸಿಮ್. ಸಾಮಾನ್ಯವಾಗಿ ಎಲ್ಲರ ಬಳಿಯೂ ಜಿಯೋ ಹಾಗು ಏರ್ಟೆಲ್ ಇದೆ.
ಇದೀಗ ಸಡನ್ ಆಗಿ ಬೆಲೆ ಏರಿಕೆ ಮಾಡಿರುವುದರಿಂದ ಗ್ರಾಹಕರು ಏರ್ಟೆಲ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ. ಯಾಕೆಂದರೆ ಬೇರೆ ಯಾವ ಕಂಪನಿ ಗಳು ಕೂಡ ಈ ರೀತಿ ಬೆಲೆ ಏರಿಕೆ ಮಾಡಿಲ್ಲ. ಹಾಗೇನೇ ಈ ಬೆಲೆ ಏರಿಕೆ ಗೆ ನಾಂದಿ ಮಾಡಿದ ಮೊದಲ ಕಂಪನಿ ಏರ್ಟೆಲ್ ಆಗಿದೆ. ಈ ಹೊಸ 155 ಯೋಜನೆ ಕೇವಲ 28 ದಿನಗಳ ಮಾತ್ರ ಬರಲಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, 1 GB ಡೇಟಾ ಹಾಗು 300 sms ಸೇವೆ ನೀಡಲಿದೆ. ಮೇಲಿಂದ ಮೇಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.