ವೇಗದ ಚಾರ್ಜಿಂಗ್, ಹೊಸ ಲುಕ್, 300 km ಮೈಲೇಜ್ ಈ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಆಗುತ್ತಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲಿದೆ.

387

ಆಸ್ಟ್ರಿಯಾದ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪೆನಿಯಾದ ಹಾರ್ವಿನ್ ಗ್ಲೋಬಲ್ (Horvin Global) SENMENTI 0 ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಊಹೆಗೂ ನಿಲುಕದ ಸೂಪರ್ ವೈಶಿಷ್ಟ್ಯಗಳೊಂದಿಗೆ ಅಭಿವೃದ್ಧಿ ಪಡಿಸಿದೆ. ಈ ಪೋಸ್ಟ್ ಅಲ್ಲಿ ನೀವು ಇದರ ಕುರಿತು ಹೆಚ್ಚಿನ ವಿವರಗಳನ್ನು ನೋಡಬಹುದು. ಎಲೆಕ್ಟ್ರಿಕ್ ವಾಹನಗಳು (Electric Scooter) ಭಾರತೀಯರ ನೆಚ್ಚಿನ ವಾಹನಗಳಾಗಿವೆ, ಜನರು ಯಾವುದೇ ಹಿಂಜರಿಕೆ ಇಲ್ಲದೆ ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ. ಕೆಲವು ಎಲೆಕ್ಟ್ರಿಕ್ ವಾಹನಗಳ ಬೆಲೆ ಕಿಲೋ ಮೀಟರ್ ಗೆ ಒಂದು ರೂಪಾಯಿಗಿಂತ ಕಡಿಮೆ ಖರ್ಚು ಬೀಳುತ್ತದೆ. ಈ ಸತ್ಯ ತಿಳಿದ ಜನರು ಪೆಟ್ರೋಲ್ ಹಾಗು ಡೀಸೆಲ್ ವಾಹನಗಳನ್ನು ಖರೀದಿಸುವದರಿಂದ ಹಿಂದೆ ಹೋಗುತ್ತಿದ್ದಾರೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುತ್ತಿದ್ದಾರೆ.

ಇದೀಗ ಆಸ್ಟ್ರಿಯಾ ಕಂಪನಿ ನಂಬಲಾಗದ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸಿದೆ. ಇದು ವಾಹನ ಪ್ರಿಯರನ್ನು ಆಕರ್ಷಿಸುವ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ವೇಗ 200 ಕಿಲೋಮೀಟರು ವೇಗ ಹಾಗು ಪೂರ್ಣ ಚರ್ಗಿನ್ಗ್ ಇದ್ರೆ 300 ಕಿಲೋ ಮೀಟರ್ ವ್ಯಾಪ್ತಿಯನ್ನು ಕೂಡ ವೇಗವಾಗಿ ಹೋಗುವ ಸಾಮರ್ಥ್ಯ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಇದೀಗ ಕಂಪನಿ ಮೊದಲ ಬಾರಿಗೆ ಈ ಸ್ಕೂಟರ್ ಅನ್ನು ಜಗತ್ತಿಗೆ ಪರಿಚಯಿಸಿದೆ.

google image

EICMA 2022 ಆಟೋ ಶೋ ಮೂಲಕ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ ಮಾತ್ರವಲ್ಲದೆ ನೋಟವು ಕೂಡ ತುಂಬಾ ವಿಭಿನ್ನವಾಗಿದೆ. ಈ ಸ್ಕೂಟರ್ ಮಾಡೆಲ್ ಹೆಸರನ್ನು ಸೆಮೆಂಟಿ 0 (Senmenti 0) ಎಂದು ಹೆಸರಿಡಲಾಗಿದೆ. ಇದರ ಬ್ಯಾಟರಿ 400 ವೋಲ್ಟ್ ಸಾಮರ್ಥ್ಯ ಹೊಂದಿದೆ. ಎಲೆಕ್ಟ್ರಿಕ್ ಕಾರ್ ಚಾರ್ಜ್ ಮಾಡುವ ಕ್ಷೇತ್ರದಲ್ಲಿಯೂ ಇದನ್ನು ಚಾರ್ಜ್ ಮಾಡಬಹದು. ಇದು ಕೇವಲ 30 ನಿಮಿಷದಲ್ಲಿ ಸೊನ್ನೆ ಇಂದ 80 % ಚಾರ್ಜ್ ಆಗುತ್ತದೆ.

ಇದು ಪೂರ್ಣ ಚಾರ್ಜ್ ಮಾಡಿದರೆ 300 ಕಿಲೋ ಮೀಟರ್ ವರೆಗೂ ತಲುಪುತ್ತದೆ. ಭಾರತದಲ್ಲಿ ಪ್ರಸ್ತುತ ಈ ರೀತಿಯ ಮೈಲೇಜ್ ನೀಡುವ ಎಲೆಕ್ಟ್ರಿಕ್ ವಾಹನಗಳಿಲ್ಲ. ಮತ್ತೊಂದು ವಿಶೇಷ ಎಂದರೆ ಈ ಸ್ಕೂಟರ್ ನಲ್ಲಿ ಬಳಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ ಗಂಟೆಗೆ 200 ಕಿಲೋ ಮೀಟರ್ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. 2023 ರಲ್ಲಿ ಇದು ಮಾರುಕಟ್ಟೆಗೆ ಬರಬಹುದು ಎಂದು ಹೇಳಲಾಗುತ್ತಿದೆ.

Leave A Reply

Your email address will not be published.