Cricket News: ಎಲ್ಲ ತಂಡದ ಆಟಗಾರರನ್ನು ಮಾರಿ ಬಂದ ದುಡ್ಡಲ್ಲಿ ಸೂರ್ಯ ಕುಮಾರ್ ಯಾದವ್ ರನ್ನು BBL ಗೆ ಖರೀದಿ ಮಾಡಬಹುದು ಎಂದ ಮ್ಯಾಕ್ಸ್ವೆಲ್.
ಆಸ್ಟ್ರೇಲಿಯಾದ ಬಲಗೈ ಮಾಧ್ಯಮ ಕ್ರಮಾಂಕದ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ (Glen Maxwell) ಒಂದು ಯೌಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಬಗ್ಗೆ ತಮಾಷೆಗೆ ಒಂದು ಕಾಮೆಂಟ್ ಮಾಡಿದ್ದಾರೆ. ಇದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಭವಿಷ್ಯದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅವರು ಬಿಗ್ ಬಾಷ್ ಲೀಗ್ ಅಲ್ಲಿ ಆಡಬಹುದೇ ಎನ್ನುವ ಪ್ರಶ್ನೆ ಮ್ಯಾಕ್ಸ್ವೆಲ್ ಈ ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ಉತ್ತರ ನೀಡಿದ ಮ್ಯಾಕ್ಸ್ವೆಲ್ ಸೂರ್ಯಕುಮಾರ್ ಯಾದವ್ ಬಿಗ್ ಬಾಷ್ ಲೀಗ್ (Big Bash League) ಅಲ್ಲಿ ಆಡಬೇಕಾದರೆ ಫ್ರಾಂಚೈಸ್ ಗಳು ತಂಡದ ಎಲ್ಲ ಆಟಗಾರರನ್ನು ಮಾರಿ ಬಂದ ಹಣದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಖರೀದಿಸಬೇಕಾಗುತ್ತದೆ. ಆಮೇಲೆ ಆ ಹಣಕ್ಕೆ SKY ಒಪ್ಪಿಕೊಂಡರೆ ಅವರು ಬಿಗ್ ಬಾಷ್ ಅಲ್ಲಿ ಆಡಬಹುದು ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಐಪಿಎಲ್ (IPL) ಅಲ್ಲಿ ಆಡುವ ಪ್ರತಿಯೊಬ್ಬ ಆಟಗಾರರಿಗೆ ನೀಡುವ ಸಂಭಾವನೆ ಬೇರೆ ಯಾವ ಕ್ರಿಕೆಟ್ ಲೀಗ್ ಅಲ್ಲೂ ಯಾರಿಗೂ ಸಿಗಲ್ಲ. ಇದು ಎಲ್ಲ ಲೀಗ್ ಗಳಿಗಿಂತ ಅತಿ ಹೆಚ್ಚು ಮೊತ್ತದಲ್ಲಿ ಖರೀದಿ ಮಾಡುತ್ತವೆ. ಮ್ಯಾಕ್ಸ್ವೆಲ್ ಕೂಡ ಸದ್ಯಕ್ಕೆ 14 ಕೋಟಿ ಬೆಲೆಬಾಳುವ ಆಟಗಾರರಾಗಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡುತ್ತಿದ್ದಾರೆ. ಹೀಗಾಗಿ ಭಾರತೀಯ ಆಟಗಾರರು ಎಷ್ಟು ದುಬಾರಿ ಹಾಗು ಬಿಸಿಸಿಐ (BCCI) ಎಷ್ಟು ಶ್ರೀಮಂತ ಸಂಸ್ಥೆ ಎಂದು ವಿಶ್ವಕ್ಕೆ ಗೊತ್ತಿದೆ.
ಇನ್ನು ಗ್ಲೇನ್ ಮ್ಯಾಕ್ಸ್ವೆಲ್ ಮುಂಬರುವ ಬಿಗ್ ಬಾಷ್ ಸರಣಿಗೆ ಅಲಭ್ಯರಾಗಿದ್ದರೆ. ಕಾರಣ ಇವರ ಕಾಲಿಗೆ ಆದಂತಹ ಗಾಯ. ಇನ್ನು ಐಪಿಎಲ್ ಬಗ್ಗೆ ಹೇಳುವುದಾದರೆ, ಆ ಸರಣಿಗೆ ಮ್ಯಾಕ್ಸ್ವೆಲ್ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ ಎಂದು ಹೇಳಿದ್ದಾರೆ. ಇವರು RCB ಪರ ಆಡುವುದು ಎಷ್ಟು ಖಚಿತ ಎಂದು ಇನ್ನು ಕಾದು ನೋಡಬೇಕಿದೆ ಅಷ್ಟೇ. RCB ಗೆ ಇವರು ಬಹಳ ಮುಖ್ಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಒಂದು ವೇಳೆ ಅಲಭ್ಯರಾದರೆ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.