ಬಿಗ್ ಬಾಸ್ ಮುಗಿದಮೇಲೆ ಮದುವೆ ಪ್ಲಾನ್ ಇನ್ನು ಮಾಡಿಲ್ಲ, ಏನು ಹೇಳಿದ್ರು ಬಿಗ್ ಬಾಸ್ ಸ್ಪರ್ದಿ ಸಾನ್ಯ ಅಯ್ಯರ್?

167

ಸಾನ್ಯ ಅಯ್ಯರ್ ಬಿಗ್ ಬಾಸ್ OTT ಹಾಗು ಬಿಗ್ ಬಾಸ್ ಸೀಸನ್ 9 ರಲ್ಲಿ ಕಾಣಿಸಿಕೊಂಡಿದ್ದ ಸ್ಪರ್ದಿ. ಪ್ರೀತಿ ವಿಷಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದಲ್ಲದೆ, ಇದರಿಂದ ಟ್ರೊಲ್ ಕೂಡ ಆಗಿದ್ದರು. ಹಿಂದೆ ಪುಟ್ಟ ಗೌರಿ ಎನ್ನುವ ಧಾರಾವಾಹಿ ಮೂಲಕ ಮನೆ ಮಾತಾಗಿದ್ದರು ಈ ಸಾನ್ಯ ಅಯ್ಯರ್. ಅದಾದ ನಂತರ ಇವರನ್ನು ಬಹುಶ ನೋಡಿದ್ದು ಬಿಗ್ ಬಾಸ್ OTT ಯಾ ಮೊದಲ ಆವೃತ್ತಿಯಲ್ಲಿ.

ಒಬ್ಬ ಬಹಳ ಕಠಿಣ ಸ್ಪರ್ದಿಯಾಗಿ ಬಿಗ್ ಬಾಸ್ ಗೆ ಬಂದಿದ್ದ ಸಾನ್ಯ ಅಯ್ಯರ್ ಕಾರ್ಯಕ್ರಮ ಆವೃತ್ತಿಯ ಅರ್ಧ ದಿನ ಪೂರೈಸಲು ಹತ್ತಿರ ಇರುವಾಗಲೇ ಎಲಿಮಿನೇಷನ್ ಆಗಿ ಮನೆಯಿಂದ ಔಟ್ ಆದವರು. ಇದಾದ ನಂತರ ಏನು ಮಾಡುತ್ತಾರೆ ಸಾನ್ಯ ಎನ್ನುವುದು ಅನೇಕ ಅಭಿಮಾನಿಗಳ ಪ್ರಶ್ನೆ ಆಗಿತ್ತು. ಇದನ್ನು ತಿಳಿದುಕೊಳ್ಳಲು ಅನೇಕರು ಪ್ರಯತ್ನ ಮಾಡಿದ್ದರು ಕೂಡ. ಆದರೆ ಇವರು ಯಾವುದೇ ಮಾದ್ಯಮಕ್ಕೆ ಸಂದರ್ಶನ ನೀಡದೆ ಸೈಲೆಂಟ್ ಆಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಜೊತೆಯಲ್ಲಿ ಲವ್ವಿ ಡವ್ವಿ ಗೆ ಸುದ್ದಿಯಾಗಿದ್ದ ಸಾನ್ಯ ಅಯ್ಯರ್ ಹಾಗು ರೂಪೇಶ್ ಶೆಟ್ಟಿ, ಸಾನ್ಯ ಔಟ್ ಆಗಿದ್ದ ನಂತರ ರೂಪೇಶ್ ಶೆಟ್ಟಿ ಅಳು ಇಡೀ ಕರ್ನಾಟಕದಲ್ಲಿ ಟ್ರೊಲ್ ಆಗಿತ್ತು. ಇದೀಗ ಅವರು ಔಟ್ ಆಗಿ ವಾರಗಳು ಕಳೆದರು ಕೂಡ ಯಾವುದೇ ಸಂದರ್ಶನ ನೀಡಿಲ್ಲ. ಇದೀಗ ಇನ್ಸ್ಟಾಗ್ರಾಮ್ ಅಲ್ಲಿ ಲೈವ್ ಬಂದು ಅವರ ಅಭಿಮಾನಿಗಳ ಜೊತೆ ಮಾತಾಡುವಾಗ ಬಿಗ್ ಬಾಸ್ ಮುಗಿದ್ಮೇಲೆ ಮದುವೆ ಆಗ್ತೀರಾ ಎಂದು ಕೇಳಿದಾಗ ನಾನು ಮದುವೆ ಆಗಲ್ಲ, ಮುಂದೆ ಸಿನೆಮಾ ಆಫರ್ ಬರ್ತಿದೆ, ಸಿನೆಮಾ ಮಾಡ್ತೇನೆ ಎಂದು ಹೇಳಿದ್ದಾರೆ.

Leave A Reply

Your email address will not be published.