Kannada Big Boss Season 9: ಮನೆಗೆ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ದಿ. ಕೈ ನೋಡಿ ದೀಪಿಕಾ ದಾಸ್ ಎಂದ ನೆಟ್ಟಿಗರು.
ಬಿಗ್ ಬಾಸ್ ಕನ್ನಡ ಸೀಸನ್ ೯ (Kannada Big Boss Season 9) ರಿಯಾಲಿಟಿ ಶೋ ಇಂದು ಮನೆ ಮಾತಾಗಿದೆ. ಅತ್ಯಂತ ಜನಪ್ರಿಯತೆ ಹೊಂದಿರುವ ಈ ಕಾರ್ಯಕ್ರಮ ಈಗಾಗಲೇ ಅರ್ಧ ಸಂಚಿಕೆ ಮುಗಿಸಿದೆ. ಇನ್ನು ಅರ್ಧ ಬಾಗ ನಡೆಯಲು ಬಾಕಿ ಇದೆ. ಹೀಗಿರುವಾಗಲೇ ಮನೆಯಲ್ಲಿ ಒಂದು ಟ್ವಿಸ್ಟ್ ಸಿಕ್ಕಿದ್ದು, ಎಲ್ಲ ಸ್ಪರ್ದಿಗಳು ಅಲ್ಲದೆ ವೀಕ್ಷಕರಿಗೂ ಶಾಕ್ ಸಿಕ್ಕಿದೆ. ಅದು ಮತ್ಯಾವುದು ಅಲ್ಲ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ಹಾಗೇನೇ ಬಿಗ್ ಬಾಸ್ ಸೀಸನ್ 8 ರ ಫೈನಲಿಸ್ಟ್ ದೀಪಿಕಾ ದಾಸ್ ಅವರ ಔಟ್.
ಈ ವಾರ ಮನೆಯಲ್ಲಿ ದೀಪಿಕಾ ಇಲ್ಲದೆ ದಿನಚರಿ ನಡೆಯಿತ್ತಿದೆ. ಕ್ಯಾಪ್ಟನ್ ಕೂಡ ಇಲ್ಲ. ಇನ್ನು ಈ ಬಾರಿಯ ಟಾಸ್ಕ್ ವಿಷಯಕ್ಕೆ ಬಂದರೆ ತುಂಬಾ ಕುತೂಹಲ ಮೂಡಿಸಿದ್ದು, ,ಮನೆಗೆ ಬೇಕಾಗಿರುವ ದಿನಸಿ ಕೂಡ ಟಾಸ್ಕ್ ಗೆದ್ದು ಪಡೆದುಕೊಳ್ಳ ಬೇಕಾಗಿದೆ. ಹೀಗಿರುವಾಗ ಮನೆಯಲ್ಲಿ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ. ಇದಕ್ಕೆ ಮನೆಯವರು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಯಾಕೆಂದರೆ ಮನೆಗೆ ಒಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿದೆ. ಸಿಕ್ಕಾಪಟ್ಟೆ ಸ್ಪರ್ಧೆ ಕೂಡ ಇನ್ನು ಉಳಿದ ಅರ್ಧ ಸೀಸನ್ ಅಲ್ಲಿ ನಡೆಯಲಿದೆ.
ಆ ವೈಲ್ಡ್ ಕಾರ್ಡ್ ಸ್ಪರ್ದಿ ಬಗ್ಗೆ ಅನೇಕ ಸುದ್ದಿ ಗಳು ಬರುತ್ತಿದೆ. ಆ ಸ್ಪರ್ದಿ ಯಾರು ಅನ್ನುವ ಕುತೂಹಲ ಕೂಡ ಎಲ್ಲರನ್ನು ಕಾಡುತ್ತಿದೆ. ಇವತ್ತು ಮನೆಗೆ ದಿನಸಿ ಸಾಮಾನು ತಂಡ ವ್ಯಕ್ತಿ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹೇಳಲಾಗುತ್ತಿದೆ. ಇನ್ನು ಆ ಸ್ಪರ್ದಿಯ ಕೈ ಬೆರಳು, ಸ್ಟೈಲ್ ನೋಡಿ ಕಳೆದ ವಾರ ಎಲಿಮಿನೇಷನ್ ಆಗಿದ್ದ ದೀಪಿಕಾ ದಾಸ್ ಎಂದು ಅನೇಕ ನೆಟ್ಟಿಗರು ಹೇಳುತ್ತಿದ್ದಾರೆ. ಇದರ ನಡುವೆ ಸಾನ್ಯ ಅಯ್ಯರ್ ಅಂತ ಕೆಲವರು ಊಹೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಉತ್ತರ ಇಂದು ರಾತ್ರಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೊತ್ತಾಗಬೇಕಿದೆ.