Cricket News: ಈತ ಬ್ಯಾಟಿಂಗ್ ಮಾಡುವ ಶೈಲಿ ನೋಡಿದರೆ ಏಕದಿನ ಪಂದ್ಯದಲ್ಲಿ ಖಂಡಿತ ತ್ರಿಶತಕ ಗಳಿಸುತ್ತಾನೆ… ಎಂದು ಭವಿಷ್ಯ ನುಡಿದ ಗವಾಸ್ಕರ್. ಯಾರು ಈ ಆಟಗಾರ?

150

ಬಾಂಗ್ಲಾದೇಶದ ವಿರುದ್ದದ ಟೆಸ್ಟ್ ಸರಣಿ ಗೆಲುವಿನೊಂದಿಗೆ ಭಾರತ ತನ್ನ ೨೦೨೨ ರ ಕ್ರಿಕೆಟ್ ಮುಗಿಸಿದೆ. ಈ ವರ್ಷ ಭಾರತ ತಂಡಕ್ಕೆ ಅತ್ಯಂತ ಕಷ್ಟಕರ ವರ್ಷ ಎಂದರೆ ತಪ್ಪಾಗಲಾರದು. ಏಷ್ಯಾ ಕಪ್ ಸೋಲು ಹಾಗು ಟಿ-೨೦ ವಿಶ್ವಕಪ್ ಅಲ್ಲಿ ಸೆಮಿ ಫೈನಲ್ ನಲ್ಲಿ ಸೋಲು. ಇದರ ನಡುವೆ ಭಾರತದ ೨೦೨೨ ರಲ್ಲಿ ಅತ್ಯುತ್ತಮ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ ಸುನಿಲ್ ಗವಾಸ್ಕರ್ ಅಚ್ಚರಿಯ ಹೆಸರು ಹೇಳಿದ್ದಾರೆ. ಏಕದಿನದಲ್ಲಿ ಈ ಆಟಗಾರ ತ್ರಿಶತಕ ಗಳಿಸಬಲ್ಲ ಎನ್ನುವ ಭವಿಷ್ಯ ನುಡಿದ್ದಾರೆ.

ಭಾರತ ಹಾಗು ಬಾಂಗ್ಲಾದೇಶದ ನಡುವಣ ಟೆಸ್ಟ್ ಮ್ಯಾಚ್ ಸಮಯದಲ್ಲಿ ಸೋನಿ ಸ್ಪೋರ್ಟ್ಸ್ ಜೊತೆಗಿನ ಸಂಭಾಷಣೆಯಲ್ಲಿ ಮಾತಾಡಿದ ಗವಾಸ್ಕರ್, ಏಕದಿನದಲ್ಲಿ ಬಾಂಗ್ಲಾದ ಲಿಟ್ಟೊನ್ ದಾಸ್ ಹಾಗು ಭಾರತದ ಇಶಾನ್ ಕಿಶನ್ ಅವರ ೨೦೧ ರನ್ ಗಳ ಬಗ್ಗ ಹೇಳಿದ್ದಾರೆ. 200 ರನ್ ದಾಖಲಿಸುವ ಮೂಲಕ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮ ಅವರ ಲೀಗ್ ಅಲ್ಲಿ ಇಶಾನ್ ಕಿಶನ್ ತಮ್ಮ ಹೆಸರು ದಾಖಲಿಸಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಔಟ್ ಆಗದೆ ಇರುತ್ತಿದ್ದರೆ ಇಶಾನ್ ಕಿಶನ್ ೩೦೦ ರನ್ ಸುಲಭವಾಗಿ ಗಾಳಿಸುತ್ತಿದ್ದರು ಎಂದು ಗವಾಸ್ಕರ್ ಹೇಳಿದ್ದಾರೆ. ನಾವು ಕಿರಿಯ ಆಟಗಾರರನ್ನು ನೋಡಿದಾಗ ಭವಿಷ್ಯದ ಬಗ್ಗೆ ಭರವಸೆ ಕಾಣುತ್ತದೆ. ಇಶಾನ್ ಕಿಶನ್ ಈ ಭರವಸೆಗೆ ಇನ್ನಷ್ಟು ಪುಷ್ಟಿ ಕೊಟ್ಟಿದ್ದಾರೆ. ಇಶಾನ್ ಕಿಶನ್ 50 ಓವರ್ ಗಳ ಆಟದಲ್ಲಿ ದ್ವಿಶತಕ ಮಾಡಿದ್ದೂ ಚಿಕ್ಕ ಸಾಧನೆಯಲ್ಲ. ಮೈದಾನ ಮೂಲೆ ಮೂಲೆಗೂ ರನ್ ಪೇರಿಸಿದ್ದಾರೆ. ಅವರು ಮುಂದುವರೆಯುತ್ತಿದ್ದರೆ 300 ರನ್ ಕೂಡ ಗಳಿಸುತ್ತಿದ್ದರು. ಚಿಕ್ಕ ವಯಸಿನಲ್ಲಿ ಈ ಸಾಧನೆ ಮಾಡಿದ್ದೂ ನಿಜಕ್ಕೂ ಅದ್ಬುತ ಎಂದು ಗವಾಸ್ಕರ್ ಹೇಳಿದ್ದಾರೆ.

Leave A Reply

Your email address will not be published.