IPL News: ಐಪಿಎಲ್ ಆವೃತ್ತಿಯಲ್ಲಿ ಉತ್ತಮವಾಗಿ ಆಡಿದರು ಕೂಡ ಐಪಿಎಲ್ ಇಂದ ಕಣ್ಮರೆ ಆದ ಈ 4 ನತದೃಷ್ಟ ಆಟಗಾರರು.

200

ವಿಶ್ವದ ಅತಿ ದೊಡ್ಡ ಹಾಗು ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಅಂದರೆ ಅದು ಐಪಿಎಲ್. ಪ್ರಪಂಚದ ಪ್ರತಿಯೊಬ್ಬ ಕ್ರಿಕೆಟ್ ಆಟಗಾರರು ಕೂಡ ಈ ಲೀಗ್ ಅಲ್ಲಿ ಒಂದು ಬಾರಿಯಾದರೂ ಆಡಬೇಕೆಂದು ಅಪೇಕ್ಷೆ ಪಟಿರುತ್ತಾರೆ. ಇದಕ್ಕೆ ಅನೇಕ ಶ್ರೇಷ್ಠ ಆಟಗಾರರು ಪೈಪೋಟಿ ನಡೆಸುತ್ತಿರುತ್ತಾರೆ. ಐಪಿಎಲ್ ಆಟಗಾರರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಉತ್ತಮ ವೇದಿಕೆ ಕೂಡ ಆಗಿದೆ.

ಇದಲ್ಲದೆ ಐಪಿಎಲ್ ಪ್ರಾಂಚೈಸಿಗಳು ಆಟಗಾರರಿಗೆ ನೀಡುವ ಸಂಬಳ ಕೂಡ ಅಧಿಕವಾಗಿದೆ. ಇದು ಕೂಡ ಆಟಗಾರರಿಗೆ ಐಪಿಎಲ್ ಅಚ್ಚು ಮೆಚ್ಚಾಗಲು ಕಾರಣ. ಇಲ್ಲಿ ಆಯ್ಕೆ ಆದರೂ ಕೂಡ ಪ್ಲೇಯಿಂಗ್ ತಂಡದಲ್ಲಿ ಸ್ಥಾನ ಎಲ್ಲರಿಗು ಸಿಗಲ್ಲ. ಕೆಲವೊಮ್ಮೆ ಉತ್ತಮ ಪ್ರದರ್ಶನ ನೀಡಿದರು ಕೂಡ ಐಪಿಎಲ್ ಫ್ರಾಂಚೈಸ್ ಜೊತೆ ಮಾಡಿಕೊಂಡಿರುವ ಒಪ್ಪಂದ ಕಳೆದುಕೊಳ್ಳುತ್ತಾರೆ. ಉತ್ತಮ ಪ್ರದರ್ಶನ ನೀಡಿ ಅವಕಾಶದಿಂದ ವಂಚಿತರಾದ ಅಂತಹ ನಾಲ್ಕು ಆಟಗಾರರ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.

೧. ಜೇಮ್ಸ್ ಫಾಕ್ನರ್: ಈ ಆಟಗಾರ ಆಸ್ಟ್ರೇಲಿಯಾ ಮೂಲದವನಾಗಿದ್ದು. ಒಬ್ಬ ಉತ್ತಮ ಎಲ್ಲ ರೌಂಡರ್ ಆಗಿ ಕಾಣಿಸಿಕೊಂಡಿದ್ದರು ಐಪಿಎಲ್ ಅಲ್ಲಿ. ರಾಜಸ್ತಾನದ ಪರ ಸ್ಟಾರ್ ಆಟಗಾರರಾಗಿ ಪಂದ್ಯ ಗೆಲ್ಲಿಸಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ೨೦೧೭ ರಲ್ಲಿ ಗುಜರಾತ್ ಲಯನ್ಸ್ ಪರ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಆವೃತ್ತಿಯಲ್ಲಿ ೬ ವಿಕೆಟ್ ಹಾಗು 54 ರನ್ ಗಳಿಸಿದ್ದರಷ್ಟೇ. ಇವರು ತಮ್ಮ ಐಪಿಎಲ್ ವೃತ್ತಿಯಲ್ಲಿ ಒಟ್ಟಾರೆ 60 ಪಂದ್ಯ ಆಡಿದ್ದಾರೆ. 59 ವಿಕೆಟ್ ಪಡೆದ ಇವರು 135 ಸ್ಟ್ರೈಕ್ ರೇಟ್ ಅಲ್ಲಿ 527 ರನ್ ಗಳಿಸಿದ್ದಾರೆ.

೨. ಕೆವಿನ್ ಕೂಪೆರ್: ಈ ಆಟಗಾರ ರಾಜಸ್ತಾನ ರಾಯಲ್ಸ್ ತಂಡದಲ್ಲಿ ಅಂಡೇರಟೆಡ್ ಮ್ಯಾಚ್ ವಿನ್ನರ್ ಆಗಿದ್ದವರು. ಕೆರೇಬಿಯನ್ ಎಲ್ಲ ರೌಂಡರ್ ಆಗಿದ್ದ ಇವರು ಹಿಟರ್ ಹಾಗು ವಿಕೆಟ್ ಟಕೇರ್ ಆಗಿದ್ದವರು. 2104 ರಲ್ಲಿ ಆಡಿದ 5 ಪಂಯ್ಡಗಳಲ್ಲಿ 4 ವಿಕೆಟ್ ಪಡೆದು ಒಟ್ಟಾರೆ 150 ಸ್ಟ್ರೈಕ್ ರೇಟ್ ಜೊತೆ 39 ರನ್ ಗಳಿಸಿದ್ದಾರೆ. ಅದಾದ ನಂತರ ಇವರಿಗೆ ಯಾವುದೇ ಆಡುವ ಅವಕಾಶ ಸಿಕ್ಕಿರಲಿಲ್ಲ. ಐಪಿಎಲ್ ಅಲ್ಲಿ ಒಟ್ಟಾರೆ 25 ಪಂದ್ಯ ಆಡಿದ್ದು 33 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ಅಲ್ಲಿ 170 ಸ್ಟ್ರೈಕ್ ರೇಟ್ ಜೊತೆ 116 ರನ್ ಗಳಿಸಿದ್ದಾರೆ.

೩. ಹಾಶಿಮ್ ಆಮ್ಲ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಹಾಶಿಮ್ ಆಮ್ಲ ಐಪಿಎಲ್ ಅಲ್ಲಿ ಕೇವಲ 2 ಸೀಸನ್ ಅಲ್ಲಿ ಅಷ್ಟೇ ಆಡಿದ್ದಾರೆ. ಇವರ ಕೊನೆಯ ಪ್ರದರ್ಶನ ೨೦೧೭ ರಲ್ಲಿ ಇದಿದ್ದು ಮಾತ್ರ. 10 ಇನ್ನಿಂಗ್ಸ್ ಆಡಿದ ಇವರು ೨ ಶತಕ ಗಳೊಂದಿಗೆ 420 ರನ್ ಗಳಿಸಿದ್ದಾರೆ. ಆದರೆ ತದ ನಂತರ ಯಾವುದೇ ಸೀಸನ್ ಇವರು ಆಡಲಿಲ್ಲ. ಆಮ್ಲ ಒಟ್ಟು 16 ಪಂದ್ಯಗಳನ್ನು ಆಡಿದ್ದು 141 ಸ್ಟ್ರೈಕ್ ರೇಟ್ ಅಲ್ಲಿ 577 ರನ್ ಗಳಿಸಿದ್ದಾರೆ. ಇದರಲ್ಲಿ ೨ ಶತಕ ಹಾಗು ೩ ಅರ್ಧ ಶತಕ ಸೇರಿವೆ.

೪. ಮೊರ್ನೆ ವ್ಯಾನ್ ವೈಕ್: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮೊರ್ನೆ ವಿಕೆಟ್ ಕೀಪರ್ ಹಾಗು ಬ್ಯಾಟ್ಸಮನ್ ಆಗಿದ್ದವರು. 2009 ರಲ್ಲಿ ಕೋಲ್ಕತ್ತಾ ಪರ ಆಡಿದ್ದಾರೆ. ಇವರು ಕೇವಲ ಒಂದು ಸೀಸನ್ ಅಷ್ಟೇ ಆಡಿದ್ದು ಒಟ್ಟು ೫ ಪಂದ್ಯಗಳನ್ನು ಆಡಿದ್ದಾರೆ. ಇವರು ಆಡಿದ ಈ ಪಂದ್ಯಗಳಲ್ಲಿ 126 ಸ್ಟ್ರೈಕ್ ರೇಟ್ ಹಾಗು 55 ಸರಾಸರಿಯಲ್ಲಿ ಒಟ್ಟು ೧೬೭ ರನ್ ಗಳಿಸಿದ್ದಾರೆ. ಇದಾದ ನಂತರ ಯಾವುದೇ ಸೀಸನ್ ಇವರು ಆಡಿಲ್ಲ.

Leave A Reply

Your email address will not be published.