CSK ಹಾಗು RCB ನಡುವಿನ ಪಂದ್ಯದಲ್ಲಿ RCB ಎಡವಿದೆಲ್ಲಿ ಎಂದು ಹೇಳಿದ ಬ್ರಾಡ್ ಹಾಗ್. ಈ ಆಟಗಾರನಿಗೆ ಹೆಚ್ಚು ಅವಕಾಶ ಕೊಡಬೇಕಿತ್ತು ಎನ್ನುವುದು ಇವರ ಅಭಿಪ್ರಾಯ.
RCB ಹಾಗು CSK ನಡುವಿನ ಪಂದ್ಯದಲ್ಲಿ ಜಡೇಜಾ ನೇತೃತ್ವದ CSK ಉತ್ತಮವಾಗಿ ತನ್ನ ರಣತಂತ್ರ ಹಣೆದಿತ್ತು ಎಂದು ಬ್ರಾಡ್ ಹಾಗ್ ಅಭಿಪ್ರಾಯ ಪಟ್ಟಿದ್ದಾರೆ. CSK 23 ರನ್ ಗಳಿಂದ RCB ಯನ್ನು ಸೋಲಿಸಿ ತನ್ನ ಮೊದಲ IPL ಗೆಲುವು ದಾಖಲಿಸಿತು. ಇದರಲ್ಲಿ ಶಿವಂ ದುಬೆ ಹಾಗು ರೊಬ್ಬಿನ್ ಉತ್ತಪ್ಪ ಅವರಿಬ್ಬರ ಪರ್ಟ್ನೆರ್ಶಿಪ್. ಮೂರನೇ ವಿಕೆಟ್ ಗೆ ಬರೋಬ್ಬರಿ ೧೬೫ ರನ್ ಗಳನ್ನೂ ಕಲೆ ಹಾಕಿದ್ದಾರೆ. ಇದರಲ್ಲಿ ರೊಬ್ಬಿನ್ ೮೮ ರನ್ ಗಳಿಸಿದರೆ ಶಿವಂ ದುಬೆ ೯೫ ರನ್ ಗಳಿಸಿ ಔಟ್ ಆಗಿದ್ದರೆ.
CSK ಒಟ್ಟಾರೆ ೨೦ ಓವರ್ ಗಳಲ್ಲಿ ೨೧೬ ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಪೇರಿಸಲು ಸಫಲವಾಯಿತು. ಬೌಲಿಂಗ್ ಗೆ ಇಳಿದ CSK ಅತಿ ಹೆಚ್ಚು ರನ್ ಬಿಟ್ಟುಕೊಡಲು ಹೋಗಲಿಲ್ಲ. ಅಲ್ಲದೆ ಪ್ರಾರಂಭದಲ್ಲೇ RCB ನಾಯಕನ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಯಿತು. ಅದಾದ ನಂತರ ಒಂದೊಂದೇ ವಿಕೆಟ್ ಬೀಳುತ್ತಾ ಹೋಯ್ತು. ಶ್ರೀಲಂಕಾ ಸ್ಪಿನ್ನರ್ ಮಹೇಶ್ ಮಹೇಶ್ ತೀಕ್ಷ್ಣ ಅವರ ಬೌಲಿಂಗ್ ಇಂದ ರನ್ ಹೊರ ಹೋಗಲು ಕೂಡ ಸಾಧ್ಯವಾಗಲಿಲ್ಲ.
ಆರಂಭಿಕ ಪ್ಲೆಸಿಸ್ ಹಾಗು ರಾವತ್ ಅವರನ್ನಲ್ಲದೆ, ಪಂದ್ಯ ಗೆಲ್ಲುವ ಉತ್ಸಾಹ ತೋರಿದ ಶೆಹಜಾದ್ ಅಹಮೆದ್ ಹಾಗು ಸುಯಶ್ ಪ್ರಭುದೇಸಾಯ್ ಅವರ ವಿಕೆಟ್ ಕೂಡ ಪಡೆಯುವಲ್ಲಿ ಸಫಲರಾದರು. ಕೊನೆಗೆ ದಿನೇಶ್ ಕಾರ್ತಿಕ್ ಔಟ್ ಆಗುವ ಮೂಲಕ RCB ತನ್ನ ಸೋಲನ್ನು ಒಪ್ಪಿಕೊಂಡಿತು. ಬ್ರಾಡ್ ಹಾಗ್ ಪ್ರಕಾರ CSK ಮೊದಲ ಹತ್ತು ಓವರ್ ನಲ್ಲಿ ಸಾಕಷ್ಟು ಸ್ಪಿನ್ ಬೌಲಿಂಗ್ ಮಾಡುವ ಮೂಲಕ ರನ್ ಕಡಿವಾಣ ಹಾಕಲು ಹಾಗು ವಿಕೆಟ್ ಪಡೆಯಲು ಸಫಲವಾಯಿತು.
ಆದರೆ RCB ಬೌಲಿಂಗ್ ನೋಡಿದರೆ ತನ್ನ ಸ್ಟಾರ್ ಸ್ಪಿನ್ನರ್ ಶ್ರೀಲಂಕಾದ ಹಸಾರಂಗ ಅವರನ್ನು ೧೧ ನೇ ಓವರ್ ಅಲ್ಲಿ ಕಣಕ್ಕಿಳಿಸಿತ್ತು. ಇದು ದೊಡ್ಡ ಆಶ್ಚರ್ಯ ಎಂದಿದ್ದಾರೆ ಬ್ರಾಡ್ ಹಾಗ್. CSK ಮೊದಲ ೧೦ ಓವರ್ ಗಳಲ್ಲಿ ೭ ಓವರ್ ಸ್ಪಿನರ್ ಕಣಕ್ಕಿಳಿಸಿದರೆ RCB ಕೇವಲ ೩ ಓವರ್ ಮಾತ್ರ ಸ್ಪಿನ್ ಬೌಲರ್ ಗಳನ್ನೂ ಬಳಸಿತ್ತು. ಇದೆ CSK ಅತಿ ಹೆಚ್ಚು ರನ್ ಗಳಿಸಲು ಕಾರಣವಾಯಿತು ಎಂದು ಬ್ರಾಡ್ ಹಾಗ್ ಅಭಿಪ್ರಾಯ ಪಟ್ಟಿದ್ದಾರೆ.