Knowledge: ಒಂದು ಲೀಟರ್ ಪೆಟ್ರೋಲ್ ಗೆ ವಿಮಾನ ಎಷ್ಟು ದೂರ ಸಾಗಬಲ್ಲುದು ಎನ್ನುವ ಕುತೂಹಲ ನಿಮಗೆ ಇದ್ದೆ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಟೋಕಿಯೋ ಹಾಗು ನ್ಯೂಯಾರ್ಕ್ ನಗರಗಳ ನಡುವೆ ಒಟ್ಟು 13 ಗಂಟೆಗಳ ವಿಮಾನಯಾನಕ್ಕೆ ಬೋಯಿಂಗ್ 747 ಬರೋಬ್ಬರಿ 187200 ಲೀಟರ್ ಇಂಧನ ಬಳಸುತ್ತದೆ. ವಿಮಾನದಲ್ಲಿ 568 ಜನರು ಪ್ರಯಾಣ ಮಾಡಬಲ್ಲರು. ನಾವು ಮನೆಗೆ ಗಡಿ ಖರೀದಿ ಮಾಡುವಾಗ ಮೊದಲು ನೋಡುವುದು ಎಷ್ಟು ಮೈಲೇಜ್ ಕೊಡುತ್ತದೆ ಎನ್ನುವುದು. ಇದರ ಕ್ಷಮತೆ ನೋಡಿಯೇ ನಾವು ಪ್ರಯಾಣದ ಪ್ಲಾನಿಂಗ್ ಮಾಡುತ್ತೇವೆ.
ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಆದಾಗ ಟ್ಯಾಕ್ಸಿ ಬಾಡಿಗೆ ಗಳ ಬೆಲೆ ಕೂಡ ಜಾಸ್ತಿ ಆಗುವುದು ಇದೆ ಕಾರಣಕ್ಕೆ. ವಿಮಾನ ಕೂಡ ಇದೆ ರೀತಿ ಒಂದು ಪ್ರಯಾಣ ಮಾಡುವ ಸಾಧನವಾಗಿದೆ. ಇದನ್ನು ಚಲಾಯಿಸಲು ಕೂಡ ಇಂಧನ ಬಹು ಮುಖ್ಯವಾಗಿದೆ. ಬೇರೆ ವಾಹನಗಳ ಹಾಗೆ ವಿಮಾನದಲ್ಲೂ ಕೂಡ ಇಂಜಿನ್ ಗಳು ಇರುತ್ತದೆ. ಇದು ಇಂದನಗಳಿಂದ ಚಲಿಸುತ್ತದೆ. ಈ ಇಂಧನ ಪೆಟ್ರೋಲ್ ಅಥವಾ ಡೀಸೆಲ್ ಗಿಂತ ಸ್ವಲ್ಪ ಭಿನ್ನವಾಗಿದೆ. ಹಾಗಾಗಿ ಈ ಇಂಧನದಿಂದ ವಿಮಾನ ಪ್ರತಿ ಲೀಟರ್ ಗೆ ಎಷ್ಟು ಮೈಲೇಜ್ ಕೊಡುತ್ತದೆ ಎನ್ನುವುದು ತಿಳಿಯುವುದು ಕುತೂಹಲಕಾರಿಯಾಗಿದೆ.
ಬೋಯಿಂಗ್ 747 ಎಷ್ಟು ಇಂಧನ ಬಳಸುತ್ತದೆ? ಈ ವಿಮಾನದ ವೇಗ ಪ್ರತಿ ಗಂಟೆಗೆ 900 ಕಿಲೋಮೀಟರು ನಷ್ಟಿದೆ. ಈ ಬೋಯಿಂಗ್ ವಿಮಾನ ಸರಾಸರಿ ಪ್ರತಿ ಸೆಕೆಂಡ್ ಗೆ 4 ಲೀಟರ್ ಇಂಧನ ಬಳಸುತ್ತದೆ. ಈ ಲೆಕ್ಕಾಚಾರದ ಪ್ರಕಾರ ಒಂದು ನಿಮಿಷಕ್ಕೆ ಈ ವಿಮಾನ ಸುಮಾರು 240 ಲೀಟರ್ ನಷ್ಟು ಇಂಧನ ಬಳಸಿಕೊಳ್ಳುತ್ತದೆ. ಹಾಗಾಗಿ ಈ ವಿಮಾನ ಪ್ರತಿ ಲೀಟರ್ ಗೆ ೦.8 ಕಿಲೋಮೀಟರು ನಷ್ಟು ದೂರ ಸಾಗುತ್ತದೆ.
ಬೋಯಿಂಗ್ ವಿಮಾನ ಪ್ರತಿ ಕಿಲೋಮೀಟರು ಗೆ ಸರಿಸುಮಾರು 12 ಲೀಟರ್ ಇಂಧನ ಬಳಸಿಕೊಳ್ಳುತ್ತದೆ. ಬೋಯಿಂಗ್ ವಿಮಾನ ಪ್ರತಿ ಗಂಟೆ ಸುಮಾರು 14,400 ಲೀಟರ್ ಇಂಧನ ಬಳಸಿಕೊಳ್ಳುತ್ತದೆ. ಇದು ಇಂದಿನ ದೊಡ್ಡ ವಿಮಾನ ಕಂಪನಿ ಬೋಯಿಂಗ್ ವಿಮಾನ ಬಳಸಿಕೊಳ್ಳುವ ಇಂಧನ ಹಾಗು ಪ್ರತಿ ಲೀಟರ್ ಗೆ ಕ್ರಮಿಸುವ ಕಿಲೋಮೀಟರು ಲೆಕ್ಕಾಚಾರವಾಗಿದೆ. ವಿಮಾನಗಳ ಇಂದನವನ್ನು ಏರ್ಕ್ರಾಫ್ಟ್ ಟ್ಯುರ್ಬೆನ್ ಫ್ಯುಯೆಲ್ ಎಂದು ಕರೆಯಲಾಗುತ್ತದೆ.