China: ಮದುವೆ ಆಗದಿದ್ದರೂ ಪರವಾಗಿಲ್ಲ ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿದ ಚೀನಾ. ಆರ್ಥಿಕತೆಗಿಂತ ದೊಡ್ಡ ಹೊಡೆತ ನೀಡುತ್ತಿದೆ ಜನಸಂಖ್ಯಾ ಕುಸಿತ.

161

ಚೀನಾ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿತ್ತು. ಕಳೆದ ತಿಂಗಳಲ್ಲೇ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತ್ಯಂತೆ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ಚೀನಾದಲ್ಲಿ ವರ್ಷಗಳ ಹಿಂದೆ ಒಂದೇ ಮಗು ಹೇರಬೇಕು ಎನ್ನುವ ಕಾನೂನು ಇತ್ತು. ಇದಕ್ಕೆ ಅಲ್ಲಿನ ಜನರು ಕಾಲ ಕಳೆಯುತ್ತಾ ಒಗ್ಗಿಕೊಂಡರು. ಇದೀಗ ಅಲ್ಲಿನ ಜನಸಂಖ್ಯೆ ಯಾ ಅತಿ ಹೆಚ್ಚು ಜನರು ವೃದ್ಧರೇ ಆಗಿರುವುದರಿಂದ ಮುಂದಿನ ಪೀಳಿಗೆ ಲೆಕ್ಕಾಚಾರ ಮಾಡುವಾಗ ಯುವಕರ ಸಂಖ್ಯೆ ಬಹಳಷ್ಟು ಕಡಿಮೆ ಇದೆ.

ಜನನ ಪ್ರಮಾಣ ಕುಸಿತ ದಿಂದ ಚೀನಾ ಕಂಗೆಟ್ಟಿದೆ. ಚೀನಾದಲ್ಲಿ ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶ ಎಂದರೆ ಅದು ಸಿಚುವಾನ್. ಇಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ೨೧% ರಷ್ಟಿದೆ. ಇದೆ ಕಾರಣಕ್ಕೆ ಇಲ್ಲಿ ಮೊದಲು ಮದುವೆ ಆಗಿ ಮಕ್ಕಳಾಗಿದ್ದವರಿಗೆ ಮಾತ್ರ ನೀಡುವ ಸೌಲಭ್ಯ ಮದುವೆ ಆಗದೆ ಮಕ್ಕಳು ಆದರೂ ನೀಡುತ್ತೇವೆ ಎಂದು ಅಲ್ಲಿನ ಸರಕಾರ ಹೇಳಿದೆ. ಇಲ್ಲಿ ಮೊದಲು ವಿವಾಹಿತರಿಗೆ ಮಾತ್ರ ಮಕ್ಕಳು ಮಾಡುವ ಅವಕಾಶ ಇತ್ತು. china unmarried couples allowed to have children

ಇದೀಗ ಬಂದಿರುವ ಹೊಸ ಕಾನೂನು ಪ್ರಕಾರ ವಿವಾಹಿತ ದಂಪತಿಗಳು ಹಾಗು ಮಕ್ಕಳನ್ನು ಬಯಸುವ ಯಾವುದೇ ವ್ಯಕ್ತಿಗಳು ಪ್ರಾಂತದ ಅಧಿಕಾರಿಗಳ ಬಳಿ ಬಂದು ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಅದಾದ ಬಳಿಕ ದಂಪತಿಗಳಿಗೆ ಎಷ್ಟು ಮಗು ಬೇಕೋ ಅಷ್ಟು ಮಕ್ಕಳಿಗೆ ಜನ್ಮ ನೀಡಲು ಅನುಮತಿ ನೀಡಿದೆ. ಇದು ಮುಂದಿನ ದೀರ್ಘಕಾಲದ ಸಮಸ್ಯೆಗೆ ಇಂದು ಮಾಡುತ್ತಿರುವ ಪರಿಹರಿಕಾ ಯೋಜನೆ ಎಂದು ಸರಕಾರ ಹೇಳಿಕೊಂಡಿದೆ. china unmarried couples allowed to have children

Leave A Reply

Your email address will not be published.