ಎಲ್ಲ ಹೋಟೆಲ್ ರೂಮ್ ಗಳಲ್ಲಿ ಬೆಡ್ ಶೀಟ್ ಗಳು ಬಿಳಿ ಬಣ್ಣದ್ದೇ ಯಾಕಿರುತ್ತೆ? ಇದರ ಹಿಂದಿನ ಕಾರಣವೇನು? ತಪ್ಪದೆ ಓದಿ.
ಗೆಳೆಯರೇ ನೀವು ಕೂಡ ಲೈಫ್ ಅಲ್ಲಿ ಒಂದು ಬಾರಿಯಾದರೂ ಹೋಟೆಲ್ ರೂಮ್ ಅಲ್ಲಿ ಇದ್ದು ಎಂಜಾಯ್ಮೆಂಟ್ ತಗೊಂಡಿರುತ್ತೀರಾ. ಇಂದು ಪ್ರತಿ ದಿನ ಜನರು ತಿರುಗಾಡಲು ಅಥವಾ ಪ್ರವಾಸ ಹೋಗುವಾಗ ಹೋಟೆಲ್ ಅಲ್ಲಿ ಕಳೆಯುವುದು ಸಾಮಾನ್ಯವಾಗಿದೆ. ಮೊದಲೆಲ್ಲ ತಮ್ಮ ಪರಿಚಯದವರ ಮನೆಯಲ್ಲಿ ತಂಗುವುದು ಸಾಮಾನ್ಯವಾಗಿತ್ತು. ಇದೀಗ ಅದೆಲ್ಲ ಸಂಪೂರ್ಣವಾಗಿ ಬದಲಾಗಿದೆ.
ಇಂದು ಎಂಜಾಯ್ಮೆಂಟ್ ಹಾಗು ಫೆಸಿಲಿಟಿ ಹಾಗು ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಎನ್ನುವ ಕಾರಣಕ್ಕೆ ಎಲ್ಲರು ಹೋಟೆಲ್ ರೂಮ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲೂ ಯಾವುದು ಉತ್ತಮ ರೂಮ್ ಗಳು ಸಿಗುತ್ತವೆ ಎನ್ನುವುದು ಮೊದಲೇ ಬುಕಿಂಗ್ ಮಾಡಬಹುದು ಹಾಗೇನೇ ವರದ ಮುಂಚೆಯೇ ಯೋಜನೆ ಕೂಡ ಮಾಡಬಹುದು. ಇದೆಲ್ಲ ಮೊಬೈಲ್ ಅಲ್ಲಿಯೇ ಸಾಧ್ಯವಾಗುತ್ತದೆ.
ಆದರೆ ನೀವು ಗಮನಿಸಿದ್ದಿರೋ ಇಲ್ಲವೋ ಗೊತ್ತಿಲ್ಲ. ಪ್ರತಿ ಹೋಟೆಲ್ ರೂಮ್ ಅಲ್ಲಿ ಚಿಕ್ಕದಿರಲಿ ಅಥವಾ ಫೈವ್ ಸ್ಟಾರ್ ಹೋಟೆಲ್ ಇರಲಿ ಬೆಡ್ ಶೀಟ್ ಹಾಗು ದಿಂಬಿನ ಬಣ್ಣಗಳು ಬಿಳಿ ಬಣ್ಣದಾಗಿರುತ್ತದೆ. ನೋಡುವುದಕ್ಕೂ ಸುಂದರವಾಗಿ ಕಾಣುತ್ತದೆ. ಆದರೆ ಇದರ ಹಿಂದಿನ ಕಾರಣವೇನು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿರಬಹುದು. ಅದಕ್ಕೆ ಉತ್ತರ ನಾವಿಂದು ನಿಮಗೆ ನೀಡುತ್ತೇವೆ.
ಈ ಬಿಳಿ ಬಣ್ಣದ ಬೆಡ್ಶೀಟ್ ಹಾಗು ದಿಂಬಿನ ಬಣ್ಣ ಇರಲು ಮೊದಲ ಕಾರಣ ಹೈಜೀನ್ ಅಥವಾ ನಿರ್ಮಲ. ನಾವು ಬೇರೆ ಕಡೆ ತಂಗುವುದಾದರೆ ನಾವು ಮೊದಲು ನೋಡುವುದೇ ನಿರ್ಮಲವಾಗಿರಬೇಕು. ಶುದ್ಧವಾಗಿರಬೇಕು ಎಂದು. ಹಾಗಾಗಿ ಈ ಬಿಳಿ ಬಣ್ಣದ ಬೆಡ್ ಶೀಟ್ ಬಳಸುವುದು ಶುದ್ಧತೆಯ ಸಂಕೇತವಾಗಿದೆ. ಹಾಗೇನೇ ಬಿಳಿ ಬಣ್ಣ ಶಾಂತಿಯ ಸಂಕೇತವಾಗಿದೆ. ಇದನ್ನು ಬಳಸುವುದರಿಂದ ನೆಮ್ಮದಿಯ ನಿದ್ದೆ ಬರುತ್ತದೆ ಎನ್ನುವುದು ಮನೋವಿಜ್ಞಾನದ ಪ್ರಕಾರ ಕೂಡ ಸ್ಪಷ್ಟವಾಗಿದೆ.
ಬಿಳಿ ಬಣ್ಣ ಬಟ್ಟೆಗಳನ್ನು ಸ್ವಚ್ಛ ಗೊಳಿಸುವುದು ಸುಲಭ. ಬೇರೆ ಬಣ್ಣದ ಬಟ್ಟೆಗಳಿದ್ದರೆ ಅವುಗಳನ್ನು ತೊಳೆಯಲು ಬೇರೆ ಬೇರೆ ಮಾಡಿ ತೊಳೆಯಬೇಕಾಗುತ್ತದೆ. ಹಾಗೇನೇ ಬಿಳಿ ಬಣ್ಣ ಅಲ್ಲದೆ ಬೇರೆ ಬಣ್ಣಗಳ ಬಟ್ಟೆಗಳು ತೊಳೆದಾಗ ಸಾಮ್ಯವಾದಂತೆ ಬಣ್ಣ ಕಳೆದುಕೊಳ್ಳುತ್ತಾ ಹೋಗುತ್ತದೆ. ಆದರೆ ಬಿಳಿ ಬಣ್ಣದ ಬಟ್ಟೆಗಳಿಂದ ಅಂತಹ ಸಮಸ್ಯೆ ಬರುವುದಿಲ್ಲ. ಹಾಗಾಗಿ ಬಿಳಿ ಬಣ್ಣದ ಬಟ್ಟೆಗಳನ್ನು ಹೋಟೆಲ್ ರೂಮ್ ಗಳಲ್ಲಿ ಬಳಸುತ್ತಾರೆ.