Cricket News: ಕೊಹ್ಲಿಯಂತಹ ಆಟಗಾರ ಕೂಡ ಮೂರೂ ವರ್ಷ 30 ರನ್ ಗಳ ಸರಾಸರಿ ಕೂಡ ಮಾಡಲು ಸಾಧ್ಯವಾಗಲಿಲ್ಲ. ಕೊಹ್ಲಿ ಗೆ ಮುಜುಗರ ತರಿಸಿದ ಇರ್ಫಾನ್ ಪಠಾಣ್.

187

ಆಸ್ಟ್ರೇಲಿಯಾದಲ್ಲಿ ಮುಂಬರುವ ಬಾರ್ಡರ್ ಗವಾಸ್ಕರ್ ಸರಣಿ ಶುರುವಾಗಲಿದೆ. ಇದರ ನೇತೃತ್ವ ರೋಹಿತ್ ಶರ್ಮ ವಹಿಸಿಕೊಂಡಿದ್ದಾರೆ. ಹಾಗೆಯೆ ಆಸ್ಟ್ರೇಲಿಯಾದ ತಂಡದ ನೇತೃತ್ವ ಪಾಟ್ ಕಮ್ಮಿನ್ಸ್ ಹೊಂದಿದ್ದಾರೆ. ಆಸ್ಟ್ರೇಲಿಯಾ ಕೊಹ್ಲಿಗೆ ಅತ್ಯುತ್ತಮ ಪಿಚ್, ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಕೊಹ್ಲಿ. ಆದರೂ ಕೂಡ ಇರ್ಫಾನ್ ಪಠಾಣ್ ಕೊಹ್ಲಿ ಗೆ ಮುಜುಗರ ತರುವ ವಿಷಯ ಪ್ರಸ್ತಾಪಿಸಿ ಇದೀಗ ಸುದ್ದಿಯಲ್ಲಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಮಾತಾಡುತ್ತ ಇರ್ಫಾನ್ ಪಠಾಣ್ ಕೊಹ್ಲಿ ಅವರ ಸ್ಪಿನ್ ಬೌಲರ್ ವಿರುದ್ದದ ರನ್ ಗಳ ಬಗ್ಗೆ ಹೇಳಿದ್ದಾರೆ. 2020 ರಿಂದ ಕೊಹ್ಲಿ ಸ್ಪಿನ್ನರ್ ಎದುರು ಉತ್ತಮ ಪ್ರದರ್ಶನ ನೀಡಿಲ್ಲ. ಕೇವಲ 335 ರನ್ ಗಳಿಸಿದ್ದಾರೆ ಅಷ್ಟೇ. ಹಾಗೇನೇ ಆಡಿದ 22 ಇನಿಂಗ್ಸ್ ಅಲ್ಲಿ ಅವರು 13 ಸರಿ ಸ್ಪಿನ್ನರ್ ಗಳ ವಿರುದ್ಧ ಔಟ್ ಆಗಿದ್ದಾರೆ. ಇದು ಯೋಚನೆ ಮಾಡುವ ವಿಷಯ ಎಂದು ಪಠಾಣ್ ಹೇಳಿದ್ದಾರೆ.

ಇನ್ನು ಮುಂದೆ ಹೇಳುತ್ತಾ, ” ಕೊಹ್ಲಿ ಅಂತಹ ಲೆಜೆಂಡ್ ಆಟಗಾರ ಸ್ಪಿನ್ನರ್ ವಿರುದ್ಧ ಆಟ ದ ಬಗ್ಗೆ ನಾವು ಗಮನ ಹರಿಸಲೇ ಬೇಕಾಗುತ್ತದೆ. 2020 ರಿಂದ ಇಂದಿನ ದಿನದ ತನಕದ ಅಂಕಿ ಅಂಶದ ಬಗ್ಗೆ ಗಮನ ಹರಿಸಿದರೆ, ಕೊಹ್ಲಿ ಅಂತಹ ಆಟಗಾರನಿಗೆ ಮುಜುಗರದ ವಿಷಯವಾಗಿದೆ. ೨೫,೦೦೦ ರನ್ ಗಳ ಹತ್ತಿರ ಬಂದಿರುವ ಕೊಹ್ಲಿ, ಕಳೆದ ಮೂರೂ ವರ್ಷಗಳಲ್ಲಿ ಸರಾಸರಿ 30 ರನ್ ಗಳಿಸಲು ಕೂಡ ಸಾಧ್ಯವಾಗಿರಲಿಲ್ಲ. ಇದು ಇವರ ತಲೆಯಲ್ಲಿ ಸದಾ ಇರುತ್ತದೆ ಎಂದು ಭಾವಿಸಿದ್ದೇನೆ ಎಂದು ಪಠಾಣ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಅಲ್ಲಿ ಕೊಹ್ಲಿ ಗೆ ಇನ್ನು ಕೆಟ್ಟ ದಿನಗಳು ನಡೆಯುತ್ತಿದೆ. ಅವರು ಆಡಿದ 20 ಟೆಸ್ಟ್ ಗಳಲ್ಲಿ ಗಳಿಸಿದ್ದು ಕೇವಲ 917 ರನ್ ಗಳನ್ನೂ. ಮೂರೂ ವರ್ಷದಲ್ಲಿ ಅವರದ್ದು ಒಂದು ಕೂಡ ಶತಕ ಬರಲಿಲ್ಲ. ಅವರು ಟೆಸ್ಟ್ ಅಲ್ಲಿ ಕೊನೆ ಶತಕ ಮಾಡಿದ್ದೂ ೨೦೧೯ ರಲ್ಲಿ. ಈ ಮೂರೂ ಅಂಕಿ ದಾಟಲು ಕೊಹ್ಲಿ ನಿಧಾನ ಗತಿ ಆಟವಾಡಬೇಕಿದೆ. ಅಗ್ಗ್ರೆಸ್ಸಿವ್ ಆಟ ಸ್ವಲ್ಪ ಸಮಯದ ವರೆಗೆ ಬಿಡಬೇಕಾಗುತ್ತದೆ ಎಂದು ಪಠಾಣ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.