INDIA: ದೇಶದ ಮೊದಲ ಸ್ಮಾರ್ಟ್ ಹಳ್ಳಿ. ಇದನ್ನು ನೋಡಲು ದೇಶದ ಮೂಲೆ ಮೂಲೆ ಇಂದ ಬರುತ್ತಿದ್ದರೆ ಜನರು. ಅಲ್ಲೇ ವಾಸವಾಗಲು ಬಯಸುತ್ತಿದ್ದಾರೆ.

211

ಭಾರತ ಇಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕಾಣಸಿಗುತ್ತಿದೆ. ಭಾರತ ಏಕಮಾತ್ರ ದೇಶ, 25 ಪ್ರತಿಶತಗಿಂತಲೂ ಹೆಚ್ಚಿನವರು ಬಡವರಾಗಿದ್ದಾರೆ. ರಸ್ತೆ ಗಳಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸರಕಾರ ಬಡತನ ನಿರ್ಮೂಲನೆಗೆ ಅನೇಕ ಯೋಜನೆ ಹಾಗು ಕೆಲಸ ಕೂಡ ಮಾಡುತ್ತಿದೆ. ಇದು ಮೊದಲ ಸರಕಾರಕ್ಕಿಂತ ಈಗಿನ ಸರಕಾರದ ಸಮಯದಲ್ಲಿ ಸ್ವಲ್ಪ ಯಶಸ್ಸು ಕೂಡ ಕಂಡಿದೆ.

ಭಾರತದಲ್ಲಿ ಸಾವಿರಾರು ಹಳ್ಳಿಗಳಿವೆ. ಇಲ್ಲಿ ನಗರ ದಲ್ಲಿ ಸಿಗುವ ರಸ್ತೆ ಹಾಗು ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಸರಕಾರ ಘೋಷಣೆ ಮಾಡಿದರು ಕೂಡ ಅಲ್ಲಿವರೆಗೆ ತಲುಪುತ್ತಿಲ್ಲ. ಇನ್ನು ಹೇಳಬೇಕೆಂದರೆ, ಈ ಯೋಜನೆಗಳ ಬಗ್ಗೆ ಜನರಿಗೆ ಅರಿವಿರುವುದಿಲ್ಲ. ಸಾಕ್ಷರತೆ ಅಷ್ಟು ಕಡಿಮೆ ಇರುತ್ತದೆ.

ಇಂತಹ ಹಳ್ಳಿಗಳಲ್ಲಿ ಜನರಲ್ಲಿ ಶಿಕ್ಷಣ ಕಡಿಮೆ ಇರುತ್ತದೆ, ಅವಿದ್ಯಾವಂತರು ಕೂಡ ಇದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸರಕಾರ ಅನೇಕ ಯೋಜನೆಗಳು ಜಾರಿ ಮಾಡುತ್ತಿದೆ. ಇದು ನಗರಗಳಿಗೆ ಮಾತ್ರವಲ್ಲದೆ ಹಳ್ಳಿಗಳಿಗೂ ತಲುಪಲು ಸರಕಾರ ತಯಾರಿ ಮಾಡಿಕೊಂಡಿದೆ. ಇದರಿಂದ ಹಳ್ಳಿಗಳಲ್ಲಿ ಜನರು ನಗರದ ಸೌಲಭ್ಯ ಪಡೆದುಕೊಳ್ಳಲು ಸಹಾಯವಾಗುತ್ತದೆ.

ಮೋದಿ ಕಾಲದಲ್ಲಿ ಬದಲಾಯಿತು ನಗರಗಳ ಚಿತ್ರಣ:
ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ನಗರಗಳಲ್ಲಿ ಅನೇಕ ಬದಲಾವಣೆಗಳು ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ಕ್ಯಾಶ್ ಲೆಸ್ ವ್ಯವಹಾರ. ಡಿಜಿಟಲೀಸಷನ್ ಒಂದು ಉದಾಹರಣೆ ಅಷ್ಟೇ. ಇಂತಹ ಅನೇಕ ಯೋಜನೆಗಳು ಮೋದಿ ದೇಶಕ್ಕೆ ತಂದಿದ್ದಾರೆ. ಇದೆ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆ ಕೂಡ ಮಾಡಿದ್ದಾರೆ.

ಮೋದಿ ಹೇಳಿದ ಹಾಗೆ ಇಂದು ಅನೇಕ ನಗರಗಳು ಸ್ಮಾರ್ಟ್ ಸಿಟಿ ಹಾಗು ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ಕಟ್ಟಿಕೊಡುವ ಕೆಲಸ ಮೋದಿ ಸರಕಾರ ಮಾಡುತ್ತಿದೆ. ಇದು ಮಾತ್ರ ಅಲ್ಲದೆ ವಾಯುಮಾಲಿನ್ಯ ನಿಯಂತ್ರಣಕ್ಕೆ ಉಜ್ವಲ ಯೋಜನೆ ಕೂಡ ತಂದಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಪ್ರತಿ ಮನೆಯಲ್ಲಿ LPG ಸಿಲಿಂಡರ್ ಇದೆ. ಇದರಿಂದ ಪ್ರತಿ ಮನೆಯಲ್ಲಿ ಗ್ಯಾಸ್ ಮೂಲಕ ತಯಾರಿಸಿದ ಆಹಾರ ಸ್ವೀಕಾರ ಮಾಡುತ್ತಿದ್ದಾರೆ. ಇದರಿಂದ ವಾತಾವರಣ ಶುದ್ಧವಾಗಿದೆ ಎಂದರೆ ತಪ್ಪಾಗಲಾರದು. ಮೋದಿಯವರ ಸ್ಮಾರ್ಟ್ ಸಿಟಿ ಯೋಜನೆ ಇಂದ ನಗರ ಗಳಿಗೆ ಮಾತ್ರ ಅಲ್ಲದೆ ಹಳ್ಳಿಗಳಿಗೂ ಕೂಡ ಲಾಭವಾಗಿದೆ. ಇಂದು ನಾವು ಅಂತಹ ಹಳ್ಳಿ ಬಗ್ಗೆ ನಿಮಗೆ ಹೇಳಲಿದ್ದೇವೆ.

ಮಾಹಿತಿ ಪ್ರಕಾರ ಮೋದಿಯವರ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಈ ಹಳ್ಳಿಯ ಚಿತ್ರಣ ಸಂಪೂರ್ಣ ಬದಲಾಗಿದೆ. ಒಂದು ಸಮಯದಲ್ಲಿ ಈ ಹಳ್ಳಿ ಬಹಳ ಕೆಟ್ಟದಾಗಿತ್ತು. ಈ ಹಳ್ಳಿಗೆ ಲೈಟ್ ವ್ಯವಸ್ಥೆ ಕೂಡ ಇರಲಿಲ್ಲ, ಒಂದು ರಸ್ತೆ ಕೂಡ ಉತ್ತಮವಾಗಿರಲಿಲ್ಲ. ಈ ಹಳ್ಳಿ ಬದಲಾಗಲು ಹಿಡಿದಿದ್ದು ಕೇವಲ ೭-೮ ವರ್ಷಗಳು. ಇಂದು ಇದು ಮುಂಬೈ ದೆಹಲಿ ತರಹದ ನಗರಗಳಿಗೆ ಠಕ್ಕರ್ ಕೊಡುವಷ್ಟು ಮುಂದುವರೆದಿದೆ.

ಈ ಹಳ್ಳಿ ಸಾಕ್ಷರತೆ ಸುಮಾರು ೯೯% ರಷ್ಟಿದೆ. ಈ ಹಳ್ಳಿಯಲ್ಲಿ ಪ್ರತಿ ವರ್ಷ ಅನೇಕ ಯುವಕ ಯುವತಿಯರು ಐಎಎಸ್ ಹಾಗು ಐಪಿಎಸ್ ಆಗುತ್ತಿದ್ದಾರೆ. ಇಂದು ಈ ಹಳ್ಳಿ ಎಲ್ಲ ಸೌಲಭ್ಯಗಳಿಂದ ಸಂಪನ್ನವಾಗಿದೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾ ದಲ್ಲಿ ಈ ಸ್ಮಾರ್ಟ್ ಹಳ್ಳಿ ವಿಡಿಯೋ ಸಂಪೂರ್ಣವಾಗಿ ವೈರಲ್ ಆಗಿತ್ತು. ಇದು ಜೈಪುರದ ಧನೋರ ಎನ್ನುವ ಹಳ್ಳಿಯದ್ದಾಗಿದೆ.

ಈ ಹಳ್ಳಿಯ ಶಿಕ್ಷಣ ವ್ಯವಸ್ಥೆ ನಗರಗಳಷ್ಟೇ ಉತ್ತಮ ಗುಣಮಟ್ಟದ್ದಾಗಿದೆ. ಇಲ್ಲಿ ತೋರಿಸಿರುವ ಫೋಟೋಗಳನ್ನು ನೋಡಿದರೆ ಇದು ನಗರವೋ, ಹಳ್ಳಿಯೋ ಎನ್ನುವ ಪ್ರಶ್ನೆ ಮೂಡುತ್ತದೆ. ಇದು ಯಾವ ಹಳ್ಳಿ ಎಲ್ಲಿ ಬರುತ್ತದೆ ಎನ್ನುವ ಕುತೂಹಲ ಕೂಡ ಮೂಡಿ ಬರುತ್ತದೆ. ಈ ಹಳ್ಳಿಯ ವಿಶೇಷತೆ ಎಂದರೆ 2014 ರಿಂದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಲಾಗಿದೆ. ಸ್ನಾನ ಮಾಡುವುದರಿಂದ ಹಿಡಿದು ಪತ್ರೆ ತೊಳೆಯುವುದು ಕೂಡ ಮನೆಯಲ್ಲೇ ಮಾಡಲಾಗುತ್ತಿದೆ.

ಈ ಗ್ರಾಮದಲ್ಲಿ ಉತ್ತಮ ನೀರಾವರಿ ಕಾಲುವೆ ನಿರ್ಮಿಸಲಾಗಿದೆ. ಕೊಳಚೆ ನಿರ್ಮೂಲನೆಗಾಗಿ ವಿಭಿನ್ನ ಕಾಲುವೆ ಮಾಡಲಾಗಿದೆ. ಈ ಗ್ರಾಮದ ಸೊಬಗು ಹಾಗು ಜನರ ಜೀವನ ಶೈಲಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯವರು ಕೂಡ ಅನೇಕ ಬಾರಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಈ ಗ್ರಾಮದ ಸ್ವಚ್ಛತೆಯ ಸಂಪೂರ್ಣ ಶ್ರೇಯ ಆ ಗ್ರಾಮದ ಜನರಿಗೆ ಸಲ್ಲುತ್ತದೆ. ಅವರಿಂದಲೇ ಇಂದು ಆ ಹಳ್ಳಿ ಸ್ಮಾರ್ಟ್ ಹಳ್ಳಿಯಾಗಿ ಬದಲಾಗಿದೆ.

Leave A Reply

Your email address will not be published.