Interesting: ವಿದ್ಯುತ್, ಪೆಟ್ರೋಲ್ಎಲ್ಲ ಉಚಿತ. ಈ ರೈತ ಗೊಬ್ಬರದಿಂದ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದಾನೆ.

162

ಮಧ್ಯಪ್ರದೇಶದ ಶಾಜಾಪುರ 38 ವರ್ಷದ ದೇವೇಂದ್ರ ಫಾರ್ಮರ್ ಅವರ ಕಾರು, ಬೈಕ್ ಹಾಗು ಟ್ರ್ಯಾಕ್ಟರ್ ಗಳನ್ನೂ ಚಲಾಯಿಸಲು ಪೆಟ್ರೋಲ್ ಹಾಗು ಡೀಸೆಲ್ ಗಳನ್ನೂ ಹಣ ಕೊಟ್ಟು ಖರೀದಿ ಮಾಡುವುದಿಲ್ಲ. ಬದಲಾಗಿ ತಮ್ಮ ಜಮೀನಿನಲ್ಲಿ ಸ್ವತಃ CNG ತಯಾರಿಸುತ್ತಾರೆ. ಅದು ಹೇಗೆ ಎಂದು ಕೇಳುತ್ತೀರಾ? ದನದ ಗೊಬ್ಬರದಿಂದ.

ಹೌದು ಸ್ವಂತ ಮನೆಯಲ್ಲಿ ಹಸುವಿನ ಸೆಗಣಿಯಿಂದ ಜೈವಿಕ ಅನಿಲ ತಯಾರಿಸುತ್ತಿದ್ದಾರೆ ಈ ರೈತ. ಅದನ್ನು CNG ಆಗಿ ಪರಿವರ್ತನೆ ಕೂಡ ಮಾಡುತ್ತಾರೆ. ಅವರ ಎಲ್ಲ ವಾಹನಗಳಿಗೆ ಹಾಕಿ, ಗಡಿಗಳನ್ನು ಓಡಿಸುತ್ತಾರೆ. ಮನೆಗೆ ವಿದ್ಯುತ್ ಕೂಡ ಇದರಲ್ಲೇ ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೊರಗಿನಿಂದ ಹಣ ಕೊಟ್ಟು ವಿದ್ಯುತ್ ಹಾಗು ಪೆಟ್ರೋಲ್ ಡೀಸೆಲ್ ಖರೀದಿ ಮಾಡಬೇಕಂತಿಲ್ಲ.

ಇವರು ಕಳೆದ 15 ವರ್ಷಗಳಿಂದ ಪಶುಸಂಗೋಪನೆ ಮಾಡುತ್ತಿದ್ದಾರೆ. ಮೊದ ಮೊದಲು ಇವರು ದನದ ಸೆಗಣಿ ತೆಗೆಯುವುದು, ಅವುಗಳನ್ನು ಸಾಕುವುದು ಎಲ್ಲ ತುಂಬಾ ದಣಿವು ನೀಡುತಿತ್ತು. ನಂತರ ಗುಜರಾತ್, ಬಿಹಾರ್ ಹತ್ತಿರದ ಕೆಲ ರೈತರು ಹಸುವಿನ ಸೆಗಣಿಯಿಂದ ಜೈವಿಕ ಅನಿಲ ತಯಾರಿಸುವುದು ನೋಡಿ ತಮ್ಮ ಹೊಲದಲ್ಲೂ ಜೈವಿಕ ಅನಿಲ ಘಟಕ ತಯಾರು ಮಾಡಲು ನಿರ್ಧರಿಸಿದರು.

ದೇವೇಂದ್ರ ಅವರು ಬಯೋಗ್ಯಾಸ್ ಹಾಗು CNG ಉತ್ಪಾದನೆ ಬಗ್ಗೆ ಕಲಿಯಲು ಪ್ರಾರಂಭಿಸಿದರು. ಅವರು ಈ ಸ್ಥಾವರ ಸ್ಥಾಪನೆಗೆ ಸ್ವಲ್ಪ ಮಟ್ಟಿಗೆ ಹೂಡಿಕೆ ಕೂಡ ಮಾಡಿದ್ದಾರೆ. ಮೊದಲು ಹೆಚ್ಚಿನ ಜ್ಞಾನ ಇಲ್ಲದೆ ಇದ್ದ ಕಾರಣ ನಿಧಾನವಾಗಿ ಈ ಸ್ಥಾವರ ಉತ್ಪಾದನೆ ಮಾಡತೊಡಗಿದರು. ಈ ಸ್ಥಾವರಕ್ಕಾಗಿ ಸುಮಾರು 50 ಲಕ್ಷದಷ್ಟು ಬಂಡವಾಳ ಖರ್ಚು ಮಾಡಿದ್ದಾರೆ.

ಇವರ ಬಳಿ 100 ಪಶುಗಳಿವೆ. ಪ್ರತಿದಿನ ಸುಮಾರು ೨.5 ಟನ್ ಗಳಷ್ಟು ಹಸುವಿನ ಸೆಗಣಿ ಸಂಗ್ರಹ ಮಾಡುತ್ತಾರೆ. ಇದರಿಂದ ಪ್ರತಿದಿನ ೬೦-೭೦ ಕೆಜಿ CNG ತಯಾರಿಸುತ್ತಾರಂತೆ. ಇವರ ದೈನಂದಿನ ಅಗತ್ಯ ಕೇವಲ 45 ಕೆಜಿ ಸಾಕಾಗುತ್ತದೆ, ಉಳಿದ ಹೆಚ್ಚುವರಿ ಆಗಿ CNG ಉತ್ಪಾದನೆ ಮಾಡುತ್ತಾರಂತೆ ದೇವೇಂದ್ರ ಎನ್ನುವ ರೈತ.

ಇವರು ಹಸುವಿನ ಸೆಗಣಿಯಿಂದ CNG ಮಾತ್ರವಲ್ಲದೆ, ಇದನ್ನು ಎರೆಹುಳು ಎರೆಹುಳು ಗೊಬ್ಬರವನ್ನು ಕೂಡ ತಯಾರು ಮಾಡುತ್ತಿದ್ದಾರೆ. ಅಲ್ಲದೆ ಸಸಿಗಳನ್ನು ನೆಟ್ಟು ಅದಕ್ಕೂ ಸೆಗಣಿ ಹಾಕುವ ಮೂಲಕ ಅದನ್ನು ದೊಡ್ಡದು ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ 100 ಹಸುಗಳಿಂದ ಹಾಲು ಮೊಸರು, ತುಪ್ಪ ಕೂಡ ಮಾಡಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.

Leave A Reply

Your email address will not be published.