Exclusive: ಭಾರತ ಕ್ರಿಕೆಟ್ ತಂಡದ ಆಟಗಾರನ ಮನಗೆದ್ದ ರಶ್ಮಿಕಾ ಮಂದನಾ. ಓಪನ್ ಆಗಿ ನನ್ನ ಕ್ರಶ್ ಎಂದ ಖ್ಯಾತ ಕ್ರಿಕೆಟಿಗ.
ರಶ್ಮಿಕಾ ಮಂದನಾ (Rashmika Mandanna) ಯಾರಿಗೆ ಗೊತ್ತಿಲ್ಲ ಹೇಳಿ. ಕೊಡಗಿನ ಸುಂದರಿ. ಕಿರಿಕ್ ಪಾರ್ಟಿ ನಂತರ ಅನೇಕ ಭಾಷೆಗಳಲ್ಲಿ ಮಿಂಚುತ್ತಿರುವ ನಟಿ. ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾಗಿರುವ ರಶ್ಮಿಕಾ ಮಂದನಾ ಅವರ ಸೌನ್ದರ್ಯಕ್ಕೆ ಬೀಳದವರು ಇದ್ದಾರಾ? ಇದೀಗ ಇಂತಹ ಸಾಲಿಗೆ ಭಾರತ ಕ್ರಿಕೆಟ್ ಟೀಮ್ ನ ಹೊಸ ಮುಖ ಎಂದೇ ಎನಿಸಿರುವ ಶುಭಮನ್ ಗಿಲ್ (Shubman Gill) ಅವರ ಮನಸು ಬಿದ್ದಿದೆ.
ಒಂದು ಸಂದರ್ಶನದಲ್ಲಿ ಈ ಶುಭಮನ್ ಗಿಲ್ ಅವರು ರಶ್ಮಿಕಾ ಮಂದನಾ ಮೇಲೆ ಕೃಷ್ ಇದೆ ಎಂದು ಹೇಳುತ್ತಲೇ ದೇಶಾದ್ಯಂತ ನ್ಯೂಸ್ ನ ಹೆಡ್ಲೈನ್ ಆಗಿದ್ದಾರೆ. ಹಾಗೇನೇ ಇಬ್ಬರ ಅಭಿಮಾನಿಗಳು ಕೂಡ ಸಂಭ್ರಮಿಸಿದ್ದಾರೆ. ಶುಭಮನ್ ಗಿಲ್ (Shubman Gill) ಅವರು ಸಚಿನ್ ತೆಂಡೂಲ್ಕರ್ ಮಗಳು ಸಾರ ತೆಂಡೂಲ್ಕರ್ ಅವರ ಜೊತೆಗೆ ಇದಿದ್ದು ಇಬ್ಬರ ನಡುವೆ ಏನೋ ಇದೆ ಎಂದು ಕೂಡ ಮಾದ್ಯಮದಲ್ಲಿ ಕೇಳಿ ಬಂದಿತ್ತು. ಈಗ ಶುಭಮನ್ ಗಿಲ್ ಹಾಗು ರಶ್ಮಿಕಾ ಮಂದನಾ ಎಲ್ಲೆಡೆ ಸುದ್ದಿ ಆಗುತ್ತಿದೆ.
ಸಂದರ್ಶನದಲ್ಲಿ ಯಾವ ನಟಿ ನಿಮಗೆ ಹೆಚ್ಚು ಇಷ್ಟ ಎಂದು ಕೇಳಿದಕ್ಕೆ ಮೊದಲು ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಗಿಲ್ ನಂತರ ರಶ್ಮಿಕಾ ಮಂದನಾ ಎಂದು ಹೇಳಿದ್ದಾರಂತೆ. ಅಡಗುತ್ತಲೇ ಮಾಧ್ಯಮಗಳಲ್ಲಿ ಈ ವಿಷಯ ಬರತೊಡಗಿದ್ದು, ಪೋಸ್ಟ್ ಹಂಚಿಕೊಂಡ ವ್ಯಕ್ತಿಯ ಕಾಮೆಂಟ್ ಅಲ್ಲೇ ಈ ವಿಷಯ ಸುಳ್ಳು ಎಂದು ಹೇಳಿದ್ದಾರೆ. ನನಗೆ ಈ ರೀತಿ ಸಂದರ್ಶನ ನೀಡಿದ್ದು ನೆನಪಿಲ್ಲ ಎಂದು ಹೇಳಿಕೊಂಡಿದ್ದಾರೆ. ಏನೇ ಆಗಲಿ ಸಿನೆಮಾ ನಟಿ ಹಾಗು ಕ್ರಿಕೆಟ್ ಆಟಗಾರರ ನಡುವೆ ಪ್ರೀತಿ ಪ್ರೇಮ ಹಾಗು ಮಾಡುವೆ ಆಗುವುದು ಮೊದಲಲ್ಲ ಬಿಡಿ. ಈ ವಿಷಯ ಗಿಲ್ ತಳ್ಳಿ ಹಾಕಿದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ.