Innovation: ತೆಲಂಗಾಣದ ಈ ವ್ಯಕ್ತಿಯ ಮ್ಯಾಜಿಕ್. 400 ಹಳ್ಳಿಗಳ ವಿದ್ಯುತ್ ಬಿಲ್ 30% ಕಡಿಮೆ ಬರುತ್ತಿದೆ. ಏನಿದು ಹೊಸ ಡಿವೈಸ್?

298

ರಾಜು ಮುಪ್ಪರಪು ಎನ್ನುವ ವ್ಯಕ್ತಿಗೆ ಬಾಲ್ಯದಲ್ಲಿ ಸಂಜೆ 5 ಗಂಟೆಗೇನೆ ಬಿಡಿ ದೀಪ ಉರಿಯುತ್ತಿರುವುದು ನೋಡಿ ಆಶ್ಚರ್ಯವಾಗಿತ್ತು. ಕೆಲವೊಮ್ಮೆ ಇದು ದಿನ ಪೂರ್ತಿ ಉರಿಯುತ್ತಿತ್ತು. ಇದು ನಿಮ್ಮ ಊರಲ್ಲಿ ಕೂಡ ಆಗುವುದನ್ನು ನೋಡಿರುತ್ತೀರಾ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೋ ವಿದ್ಯುತ್ ವ್ಯರ್ತವಾಗುತ್ತಿರುತ್ತದೆ. ಇದು ಇವರಿಗೆ ತಲೆ ಕೆಡಿಸಲಾರಂಭಿಸಿತು. ಇದಕ್ಕೆ ಪರಿಹಾರ ಹುಡುಕಬೇಕೆಂದು ನಿರ್ಧಾರ ಮಾಡಿದರು.

ಬೆಳೆದು ದೊಡ್ಡವರಾದ ಮೇಲೆ ಇವರು ನೈಸರ್ಗಿಕ ಬೆಳಕನ್ನು ಪತ್ತೆ ಹಚ್ಚುವ, ಅಗತ್ಯ ಇಲ್ಲದೆ ಇರುವಾಗ ಬಿಡಿ ದೀಪ ಆಫ್ ಮಾಡುವ ಯಂತ್ರವನ್ನ ಕಂಡು ಹಿಡಿಯಬೇಕೆಂದು ನಿರ್ಧರಿಸಿದರು. ಇದರಿಂದ ಸಾಧ್ಯವಾದಷ್ಟು ವಿದ್ಯುತ್ ಉಳಿಸಬಹುದು ಎನ್ನುವುದು ಇವರ ಯೋಚನೆ ಆಗಿತ್ತು.

ತೆಲಂಗಾಣದಲ್ಲಿ ತಯಾರಾದ ಈ ಸಾಧನವು ಲೈಟ್ ಡೆಪೆಂಡೆಂಟ್ ರೆಸಿಸ್ಟರ್ (LDR) ಅನ್ನು ಬಳಸುತ್ತದೆ. ಈ ಸಾಧನವು ರಸ್ತೆಯಲ್ಲಿ ಸಾಕಷ್ಟು ಬೆಳಕು ಇದೆಯೋ ಎನ್ನುವುದು ಮೊದಲು ಪತ್ತೆ ಹಚುತ್ತದೆ. ಸಾಕಷ್ಟು ಬೆಳಕು ಇದ್ದರೆ, ಇದು ಬೀದಿ ದೀಪಗಳನ್ನು ನಿಯಂತ್ರಣ ಮಾಡುತ್ತದೆ. ಮತ್ತು ಆನ್ ಹಾಗು ಆಫ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಸಾಧನದ ಬೆಲೆ ೩೦೦೦ ದಿಂದ 3500 ವರೆಗೆ ಇದೆ.

ಆರಂಭದಲ್ಲಿ ಈ ಸಾಧನವನ್ನು 10 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಳವಡಿಸಲಾಯಿತು. ಇಲ್ಲಿ ಆರು ತಿಂಗಳ ವಿದ್ಯುತ್ ಬಿಲ್ ಪರಿಶೀಲಿಸಿದ ನಂತರ ಈ ಸಾಧನದಿಂದ ವಿದ್ಯುತ್ ಬಿಲ್ ಗಳನ್ನೂ ೨೫-೩೦ ಪ್ರತಿಶತದಷ್ಟು ಕಡಿಮೆ ಮಾಡಬಹುದು ಎಂದು ಗ್ರಾಮದ ಮುಖಂಡರು ಅರಿತರು.

31 ವಯಸ್ಸಿನ ರಾಜು ಎಲೆಕ್ಟ್ರಾನಿಕ್ಸ್ ಅಲ್ಲಿ ಮೊದಲಿಂದಲೂ ಆಸಕ್ತಿ ಹೊಂದಿದ್ದರು. ಅವರ ತಂದೆ ಕೂಡ ಎಲೆಕ್ಟ್ರಿಷಿಯನ್ ಆಗಿದ್ದರಿಂದ ಇವರಿಗೆ ಇದನ್ನೆಲ್ಲಾ ಅರಿಯುವುದಕ್ಕೆ ಸಹಾಯವಾಗಿತ್ತು. ಆದರೆ ಈ ಸಾಧನವನ್ನು ತಯಾರಿಸಲು ಯಾರಿಂದಲೂ ಸಹಾಯ ಪಡೆಯಲಿಲ್ಲ. ತಮ್ಮ ಸ್ವಂತ ಯೋಚನೆ ಹಾಗು ಪ್ಲಾನ್ ನಿಂದ ತಯಾರು ಮಾಡಿದ್ದಾರೆ ಎಂದು ರಾಜು ಹೇಳಿಕೊಂಡಿದ್ದಾರೆ. ಇಂದು ಇವರ ಈ ಸಾಧನವನ್ನು ಸುಮಾರು 400 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಳವಡಿಸಲಾಗಿದೆ.

Leave A Reply

Your email address will not be published.